ಪರಮಾನಂದ ದೇವರ ದೇವಸ್ಥಾನದಲ್ಲಿ ಎರಡು ದಿನಗಳ ಧಾರ್ಮಿಕ ಮಹೋತ್ಸವ

ಪರಮಾನಂದ ದೇವರ ದೇವಸ್ಥಾನದಲ್ಲಿ ಎರಡು ದಿನಗಳ ಧಾರ್ಮಿಕ ಮಹೋತ್ಸವ  Two-day religious festival at the Paramananda Deva Temple


ರನ್ನಬೆಳಗಲಿ 14 ;  ಮುಧೋಳ ತಾಲ್ಲೂಕಿನ ರನ್ನಬೆಳಗಲಿ ಗ್ರಾಮದ ಗುಡ್ಡದೊಡೆಯೆಂದು ಖ್ಯಾತಿ ಪಡೆದಿರುವಶ್ರೀ ಪರಮಾನಂದ ದೇವರ ದೇವಸ್ಥಾನದಲ್ಲಿ ಆ.16ರಿಂದ 17ರವರೆಗೆ ಎರಡು ದಿನಗಳ ಕಾಲ ಪರಮಾನಂದ ದೇವರ ಮೂರ್ತಿ ಪ್ರತಿಷ್ಠಾಪನೆ, ನೂತನ ಶಿಲಾಮಂದಿರ, ದೀಪಸ್ತಂಭ ಉದ್ಘಾಟನೆ ಹಾಗೂ ಕಳಸಾರೋಹಣ ಸಮಾರಂಭಗಳು ವಿಜೃಂಭಣೆಯಿಂದ ನಡೆಯಲಿವೆ.  

ಆ.16ರಂದು ಬೆಳಗ್ಗೆ 10ಕ್ಕೆ  ಬಂಧಲಕ್ಷ್ಮೀ ದೇವಸ್ಥಾನದಿಂದ ಗ್ರಾಮದ ಸಕಲ ದೇವರ ಪಲ್ಲಕ್ಕಿಗೆ ಕುಂಭಮೇಳ, ಆರತಿ ಹಾಗೂ ವಿವಿಧ ವಾದ್ಯ ವೈಭವದೊಂದಿಗೆ ಮೂರ್ತಿ ಮತ್ತು ಕಳಸದ ಮೆರವಣಿಗೆ ನಡೆಯಲಿದೆ. ಮಧ್ಯಾಹ್ನ 12ರಿಂದ ಮಹಾಪ್ರಸಾದ ವಿತರಣೆ ಆರಂಭವಾಗಲಿದ್ದು, ಎರಡು ದಿನಗಳ ಕಾಲ ನಿರಂತರವಾಗಿ ನಡೆಯಲಿದೆ.

ಮಧ್ಯಾಹ್ನ 3ಕ್ಕೆ ವಿವಿಧ ಕ್ಷೇತ್ರಗಳಿಂದ ಆಗಮಿಸುವ ಪಲ್ಲಕ್ಕಿಗಳಿಂದ ಸಿದ್ಧರ ಭಕ್ತಿ ಕಾರ್ಯಕ್ರಮ, ಸಂಜೆ ಪಲ್ಲಕ್ಕಿಗಳ ಆಗಮನ ಹಾಗೂ ಸಿದ್ಧ ಭಕ್ತಿ ಸಮಾರಂಭ ಜರುಗಲಿದೆ. ರಾತ್ರಿ 10ಕ್ಕೆ ಪರಮಾನಂದ ನಾಟ್ಯ ಸಂಘದ ವತಿಯಿಂದ  ಅಮೋಘ ಸಿದ್ದೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ.  

ಆ.17ರಂದು ಬೆಳಗ್ಗೆ 4ಕ್ಕೆ  ಮಲಕಾರಿ ಸಿದ್ಧ ಸಾ.ಬೋಳವಾಡ ಅವರ ಆಗಮನ, ಬೆಳಗ್ಗೆ 5ರಿಂದ ಹೋಮ, ಹವನ, ರುದ್ರಾಭಿಷೇಕ ಮಹಾಪೂಜೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಬೆಳಗ್ಗೆ 10ಕ್ಕೆ ಪೂಜ್ಯ ಕಾಯಕರೋಗಿ ಅವಧೂತ ಸಿದ್ಧ ಮಹಾರಾಜರು ಹಾಗೂ ಗುರುಹಿರಿಯರ ಸಮ್ಮುಖದಲ್ಲಿ ಕಳಸಾರೋಹಣ ಸಮಾರಂಭ ನಡೆಯಲಿದ್ದು, ಬಳಿಕ ವೇದಿಕೆ ಕಾರ್ಯಕ್ರಮ ಹಾಗೂ ಅನ್ನಪ್ರಸಾದ ವಿತರಣೆ ಜರುಗಲಿದೆ. ಮಧ್ಯಾಹ್ನ 3ಕ್ಕೆ ದೇವರ ಪಲ್ಲಕ್ಕಿಗಳ ಅಗಲು ಭಕ್ತಿ ಕಾರ್ಯಕ್ರಮ ನಡೆಯಲಿದೆ.  

ಈ ಪುಣ್ಯಮಯ ಧಾರ್ಮಿಕ ಕಾರ್ಯಕ್ರಮದಲ್ಲಿ ರನ್ನಬೆಳಗಲಿ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಸಕಲ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪರಮಾನಂದ ದೇವರ ಕೃಪೆಗೆ ಪಾತ್ರರಾಗಬೇಕೆಂದು ಸಕಲ ಸದ್ಭಕ್ತ ಮಂಡಳಿ, ರನ್ನಬೆಳಗಲಿ ವಿನಂತಿಸಿದೆ.