ತುಕರಾಮ್ ಅವರಿಗೆ ಸನ್ಮಾನ ಕಾರ್ಯಕ್ರಮ

ತುಕರಾಮ್ ಅವರಿಗೆ ಸನ್ಮಾನ ಕಾರ್ಯಕ್ರಮ

ಲೋಕದರ್ಶನ ವರದಿ

ಬಳ್ಳಾರಿ 02:ಸಚಿವರಾದ ನಂತರ ಪ್ರಥಮ ಬಾರಿಗೆ ಬಳ್ಳಾರಿಗೆ ಆಗಮಿಸಿದ ಇ. ತುಕರಾಮ್ ರವರಿಗೆ ಅದ್ದೂರಿಯಾಗಿ ಗೊಲ್ಲರ ಸಂಘದ ಆವರಣದಲ್ಲಿ ಸ್ವಾಗತಿಸಿ ಸನ್ಮಾನ ಮಾಡಲಾಯಿತು.  ಈ ಸಂದರ್ಭದಲ್ಲ್ಲಿ ಮಾನ್ಯ  ಸಚಿವರು ಬಳ್ಳಾರಿ ಜಿಲ್ಲಾ ಗೊಲ್ಲರ ಸಂಘದ ಜೊತೆಗೆ ಮತ್ತು ಜನಾಂಗದ ಅಭಿವೃದ್ಧಿಗೆ ಸದಾ ನನ್ನ ಬೆಂಬಲವಿರುತ್ತೆಂದು ಇದಕ್ಕೆ ಅಗತ್ಯವಾದ ಸಹಕಾರವನ್ನು ಕೊಡುತ್ತೇನೆಂದು ಮುಂದಿನ ದಿನಗಳಲ್ಲಿ ಮತ್ತೆ ಸಂಘಕ್ಕೆ ಭೇಟಿ ನೀಡುತ್ತೇನೆಂದು ತಿಳಿಸಿದರು.  

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ಪಿ. ತಿಮ್ಮಪ್ಪ ಯಾದವ್, ಕಾರ್ಯದಶರ್ಿಯಾದ ಕೆ. ಈ. ಚಿದಾನಂದಪ್ಪ, ಗೌರವ ಅಧ್ಯಕ್ಷರಾದ ಚಂದ್ರಾಯಿ ದೊಡ್ಡಬಸಪ್ಪ, ಉಪಾಧ್ಯಕ್ಷರಾದ ಶ್ರೀಮತಿ ಎಂ. ಆಶಾಲತ, ಸೋಮಪ್ಪ ಯಾದವ್, ಉಪಕಾರ್ಯದಶರ್ಿಯಾದ ಎಂ. ಕೃಷ್ಣಮೂತರ್ಿ, ಖಜಾಂಚಿಯಾದ ಶ್ರೀ ಜಿ. ಗೋವಿಂದರಾಜುಲು, ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಶ್ರೀ. ಬಿ. ಬಾನುದಾಸ್, ಜೆ.ಜಿ. ತಿಮ್ಮಣ್ಣ, ಶ್ರೀ ವೆಂಕಟೇಶ್ ಯಾದವ್, ಶ್ರೀ. ವೈ. ರಂಗಪ್ಪ, ಸಮಾಜದ ಮುಖಂಡರಾದ ವಸಂತ ಕುಮಾರ್ ಕುಡಿತಿನಿ ಚಂದ್ರಪ್ಪ, ಜಿ. ದೊಡ್ಡಬಸವರಾಜ್, ಜಿ. ಜಗದೀಶ್, ಮತ್ತು ಅನೇಕ ಸಮಾಜದ ಬಂಧುಗಳು, ಶಿಕ್ಷಕರು ಹಾಜರಿದ್ದರು. 


ಸುದ್ದಿ ಓದಿ