ಕಾಗವಾಡ

ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಗೆ ತರಬೇತಿ

ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಗೆ ತರಬೇತಿ

ಕಾಗವಾಡ 10: ಪಟ್ಟಣದಲ್ಲಿ ಸನ್ 2023-24ನೇ ಸಾಲಿನ ಸ್ಕೌಟ್ಸ್‌ ಮತ್ತು ಗೈಡ್ಸ್‌ ರಾಜ್ಯ ಪುರಸ್ಕಾರ ಪರೀಕ್ಷಾ ಶಿಬಿರದ ಪೂರ್ವ ಸಿದ್ಧತಾ ಶಿಬಿರವು ಸಂಪನ್ನಗೊಂಡಿತು. 

ಗುರುವಾರ ದಿ. 10 ರಂದು ಪಟ್ಟಣದ ವಿದ್ಯಾಸಾಗರ ಶಿಕ್ಷಣ ಸಂಸ್ಥೆಯಲ್ಲಿ ಸ್ಕೌಟ್ಸ್‌ ಮತ್ತು ಗೈಡ್ಸ್‌ ಮಕ್ಕಳಿಗೆ ತರಬೇತಿ ನೀಡುವ ಎರಡು ದಿನದ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಹಾಯಕ ರಾಜ್ಯ ಸಂಘಟನಾ ಆಯುಕ್ತ ಡಿ.ಬಿ. ಅತ್ತಾರ ಎಲ್ಲ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ರಾಜ್ಯ ಪುರಸ್ಕಾರ ಪ್ರಶಸ್ತಿ ಪಡೆಯಲು ಒಳ್ಳೆ ರೀತಿಯ ತರಬೇತಿ ನೀಡಿ, ಮಾತನಾಡುತ್ತ ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ಅದರ ಕೋಟಾದಲ್ಲಿ ಉನ್ನತ ಶಿಕ್ಷಣಕ್ಕೆ ಸಹಕಾರಿಯಾಗಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿ ತಾಲೂಕಿನ ಕೀರ್ತಿ ಹೆಚ್ಚಿಸುವಂತೆ ಪ್ರೇರಿಸಿದರು. 

ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಸಂಯೋಜಕರಾದ ಎಸ್‌.ಆರ್‌. ಮಾಳಿ ಮಾತನಾಡಿ, ಈ ಸ್ಕೌಟ್ಸ್‌ ಮತ್ತು ಗೈಡ್ಸ್‌ನಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಜೀವನದಲ್ಲಿ ಶಿಸ್ತು, ಸಹನೆ, ಸೇವಾ ಮನೋಭಾವನೆಯನ್ನು ಮೈಗೂಡಿಸಿಕೊಂಡು, ಸಮಾಜಮುಖಿ ಕಾರ್ಯ ಮಾಡುವುದರಲ್ಲಿ ಪ್ರೇರಣೆಯಾಗುತ್ತದೆ ಎಂದರು. 

ಅಧ್ಯಕ್ಷತೆಯನ್ನು ವಿದ್ಯಾಸಾಗರ ಸಂಸ್ಥೆಯ ಉಪಾಧ್ಯಕ್ಷರಾದ ವಿಜಯ ಕರೋಲೆ ವಹಿಸಿದ್ದರು. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಎಂ.ಕೆ. ಕಾಂಬಳೆ, ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಜೆ.ಎನ್‌. ಮಗದುಮ್ಮ, ಪ್ರಾಥಮಿಕ ವಿಭಾಗದ ಮುಖ್ಯಾಧ್ಯಾಪಕಿ ಜೆ.ಜೆ. ನೆಮನ್ನವರ, ನೇತಾಜಿ ತಳವಾರ, ಅರವಿಂದ ಮುಜಾವರ, ಅಜೀತ ಪಣದೆ, ರಾಜಾರಾಮ ಲಂಗೋಟೆ, ಕಾವೇರಿ ಪಾಟೀಲ, ಮುಮ್ತಾಜ ಮತವಲ್ಲಿ, ಅನೀತಾ ಚೌಗುಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಾಹುಲ ಕಟ್ಟಿ ನಿರೂಪಿಸಿದರು. ಜೆ.ಎನ್‌.ಮಗದುಮ ವಂದಿಸಿದರು. 


ಸುದ್ದಿ ಓದಿ