ದೇವರು ನಮಗೆ ನೀಡಿರುವದರಲ್ಲಿ ತೃಪ್ತಿ ಪಡಬೇಕು ಅದುವೇ ಜೀವನ: ರಾಜಯೋಗೀಂದ್ರ ಸ್ವಾಮೀಜಿ
ಜಮಖಂಡಿ 25: ಜೀವನದಲ್ಲಿ ಶ್ರೀಮಂತಿಗೆ, ಬಡತನ ಶಾಶ್ವತವಲ್ಲ, ಪ್ರತಿಯೊಬ್ಬರು ಸಂಸ್ಕಾರವನ್ನು ಮೈಗೂಡಿಸಿಕೊಂಡು ನಡೆಯುವದರಲ್ಲಿನ ಆನಂದ ಯಾವುದರಲ್ಲಿಯೂ ಇಲ್ಲ, ಆಸೆಗೆ ಮೀತಿ ಇರಬೇಕು ಅಂದಾಗ ಮಾತ್ರ ಮನಸ್ಸು ಶಾಂತವಾಗಿರುತ್ತದೆ ಎಂದು ಹುಬ್ಬಳ್ಳಿ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಬಿದರಿ ಗ್ರಾಮದ ಶ್ರೀ ಕುಮಾರೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವಿವಿಧ ಕಾರ್ಯಕ್ರಮಗಳಿಗೆ ಚಾಲನೆ ನೀಡಿ. ದಾಸೋಹ ನಿಲಯ ಕಟ್ಟಡದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಅಧಿಕಾರ, ಖುರ್ಚಿ ಶಾಶ್ವತವಲ್ಲ, ಇನ್ನೊಬ್ಬರನ್ನು ನೋಡಿ ಅಸಯ್ಯ ಪಡಬಾರದು ದೇವರು ನಮಗೆ ನೀಡಿರುವದರಲ್ಲಿ ತೃಪ್ತಿ ಪಡಬೇಕು ಅದುವೇ ನೀಜವಾದ ಜೀವನ ಎಂದರು.
ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಶ್ರೀ, ಮರೆಗುದ್ದಿ ದಿಗಂಬರೇಶ್ವರ ಮಠದ ತೊಂಟದಾರ್ಯ ಶ್ರೀಗಳು, ಕಿರಸೂರದ ಗೌರಿಶಂಕರ ಬ್ರಹನ್ಮಠದ ರೇವಣಸಿದ್ಧ ಶ್ರೀಗಳು, ಪೂರ್ಣಾನಂದ ಮಠದ ಶಾಂತಾನಂದ ಶ್ರೀಗಳು, ಇಂಗಳೇಶ್ವರದ ಬೃಂಗೇಶ್ವರ ಶಿವಾಚಾರ್ಯ ಶ್ರೀಗಳು, ಬಿದರಿ ಕುಮಾರೇಶ್ವರ ಮಠದ ಬಸಲಿಂಗ ಮರಿದೇವರು, ಮುಖಂಡರಾದ ಸುಭಾಸ ಸಾವಕಾರ, ಭೀಮಸಿ ಸಾವಕಾರ, ಚನ್ನಬಸಪ್ಪ ಕೊಣ್ಣೂರ, ವೆಂಕಣ್ಣ ಕೊನಪ್ಪನವರ, ಈರಣ್ಣ ತುಬಚಿಮಠ, ಸಂಗಯ್ಯ ಗಣಾಚಾರಿ, ಅಪ್ಪಯ್ಯ ಮಠಪತಿ ಇದ್ದರು.