ಚಿರತೆ ದಾಳಿಗೆ ಮೂರುವರ್ಷದ ಮಗು ಬಲಿ
ಬಳ್ಳಾರಿ 12: ಬಹಿದರ್ೆಸೆಗೆ ತೆರಳಿದ ಮೂರುವರ್ಷದ ಮಗುವನ್ನು ಚಿರತೆಯೊಂದು ಹೊತ್ತೊಯ್ದು ರಕ್ತಹೀರಿ ಕೊಂದು ಹಾಕಿದ ದುರ್ಘಟನೆ ಸೋಮುವಾರ ಸಂಜೆ ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮ ಪಂಚಾಯಿತಿ ಸೋಮಲಾಪುರ ಗ್ರಾಮದ ಮಟ್ಟಿನ್ಲಲಿ ನಡೆದಿದೆ. ನಾಡೋಜ ದರೋಜಿ ಈರಮ್ಮ ಮೊಮ್ಮಗ ಪೋಟೊಗ್ರಾಪರ್ ರಾಘವೇಂದ್ರ ಅವರ ಮಗು ವೆಂಕಟಸ್ವಾಮಿ ಮೃತ ದುದರ್ೈವಿ ಮಗು. ಸಂಜೆ ಸುಮಾರಿಗೆ ಮಾರೆಕ್ಕ ಎನ್ನುವವರು ಬಹಿದರ್ೇಸೆಗೆ ಕರೆದೊಯ್ದು ಕುಳ್ಳಿರಿಸಿ ನೀರು ತರಲು ಮನೆಗೆ ಬಂದಿದ್ದಾಳೆ ಏಕಾಏಕಿ ಮಗು ಅರೆಚುವುದನ್ನು ಕೇಳಿ ಓಡಿಬಂದಾಗ ಚಿರತೆಯೊಂದು ಮೂರು ವರ್ಷದ ವೆಂಕಟಸ್ವಾಮಿಯನ್ನು ಕಚ್ಚಿ ಎಳೆದೊಯ್ಯುದನ್ನು ಕಂಡು ಚಿರಾಡಿದ್ದಾಳೆ. ತಕ್ಷಣ ಗ್ರಾಮಸ್ಥರು ಹುಡುಕಿದಾಗ ಸುಮಾರ 100 ಮೀಟರ್ ದೂರದ ಪೊದೆಯಲ್ಲಿ ವೆಂಕಟಸ್ವಾಮಿಯ ಶವ ಪತ್ತೆಯಾಗಿದೆ.
ಈ ಹಿಂದೆ ಚಿರತೆಯು ಕುರಿ ಅಟ್ಟಿಮೇಲೆ ದಾಳಿ ಮಾಡಿ 8 ಕುರಿಗಳನ್ನು ತಿಂದು ಹಾಕಿದಾಗ ಅರಣ್ಯ ಇಲಾಖೆಗೆ ದೂರು ನೀಡಿದ್ದರೂ ಅಧಿಕಾರಿಗಳ ನಿರ್ಲಕ್ಷದಿಂದ ಈಗ ಮಗುವಿನ ಪ್ರಾಣ ಕಳೆದುಕೊಳ್ಳುವಂತಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅಧಿಕಾರಿಗಳ ಭೇಟಿ: ಘಟನೆ ಹಿನ್ನಲೆಯಲ್ಲಿ ಅರಣ್ಯ ಹಾಗೂ ಪೋಲಿಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ ಮೃತ ಮಗುವಿನ ಕುಟುಂಬಸ್ಥರ ಮನೆಗೆ ತೆರಳಿ ಸಾಚಿತ್ವಾನ ಹೇಳಿದರು. ಅರಣ್ಯ ಇಲಾಖೆಯ ಬಳ್ಳಾರಿ ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ|| ರಮೇಶ್ ಕುಮಾರ ಸುದ್ದಿಗಾರರೊಂದಿಗೆ ಮಾತನಾಡಿ ಮುಂಜಾಗೃತ ಕ್ರಮವಾಗಿ ಇಲಾಖೆಯ ಸಿಬ್ಬಂದಿ ತಂಡವನ್ನು ಇಲ್ಲಿ ನೇಮಕ ಮಾಡಿದೆ. ಸೋಮಲಾಪುರು ಗ್ರಾಮದ ಜನರು ಸುರಕ್ಷಿತವಾಗಿ ಓಡಾಡಬೇಕು. ಒಂದೆರಡು ದಿನಗಳಲ್ಲಿ ಬೊನ್ ವ್ಯೆವಸ್ಥೆಮಾಡಿ ಚಿರತೆ ಸೆರೆ ಇಡಿಯಲಾಗುವುದು ಎಂದರು. ಮೃತ ಮಗುವಿನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ 5 ಲಕ್ಷ ರೂ ಪರಿಹಾರ ನೀಡಲಾಗುವುದು ಎಂದು ತಿಳಿಸಿದರು.