ಪೌಷ್ಠಿಕತೆ ಹೆಚ್ಚಿಸಲು ಮಕ್ಕಳಿಗೆ ಬಿಸಿಯೂಟದೊಂದಿಗೆ ಮೂರು ದಿನ ರಾಗಿ ಮಾಲ್ಟ: ಮೋರಟಗಿ
ಅಥಣಿ 22: ಮಕ್ಕಳ ಪೌಷ್ಠಿಕತೆ ಹೆಚ್ಚಿಸಲು ರಾಜ್ಯ ಸರಕಾರ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ ಮತ್ತು ಕೆ.ಎಮ್.ಎಫ್ ನ ಸಹ ಯೋಗದಲ್ಲಿ ಬಿಸಿಯೂಟದೊಂದಿಗೆ ವಾರದಲ್ಲಿ ಮೂರು ದಿನ ರಾಗಿ ಮಾಲ್ಟ ಕೊಡಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಬಿ.ಮೋರಟಗಿ ಹೇಳಿದರು.
ಅವರು ಮೋಟಗಿ ತೋಟದ ಸರಕಾರಿ ಶಾಲೆಯಲ್ಲಿ ಮಕ್ಕಳಿಗೆ ರಾಗಿ ಮಾಲ್ಟ ವಿತರಿಸಿ ಮಾತನಾಡುತ್ತಿದ್ದರು. ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗಾಗಿ ಮಧ್ಯಾಹ್ನದ ಉಪಹಾರದ ಯೋಜನೆಯಡಿ ಈಗಾಗಲೇ ತತ್ತಿ ತಿನ್ನುವ ಮಕ್ಕಳಿಗೆ ತತ್ತಿ, ತತ್ತಿ ತಿನ್ನದ ವಿದ್ಯಾರ್ಥಿಗಳಿಗೆ ಶೆಂಗಾ ಚಿಕ್ಕಿ, ಹಾಲು ಜೊತೆಗೆ ಇಂದಿನಿಂದ ಶ್ರೀ ಸತ್ಯಸಾಯಿ ಟ್ರಸ್ಟ ಮತ್ತು ಕೆ.ಎಮ್.ಎಫ್ ಸಹಯೋಗದಲ್ಲಿ ರಾಗಿ ಮಾಲ್ಟ ನೀಡಲಾಗುತ್ತಿದೆ ಎಂದ ಅವರು ಸರಕಾರ ಇಂತಹ ಅನೇಕ ಯೋಜನೆಗಳನ್ನು ಅನುಷ್ಠಾನ ಗೊಳಿಸಿದ್ದು, ಈ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ತಾ.ಪಂ ಕಾರ್ಯನಿರ್ವಹಣಾಧಿಕಾರಿ
ಶಿವಾನಂದ ಕಲ್ಲಾಪುರ, ಸರಕಾರಿ ಶಾಲೆಯಲ್ಲಿ ಈ ಮೊದಲು ಮಕ್ಕಳಿಗೆ ಉಪ್ಪಿಟ ಕೊಡುತ್ತಿದ್ದರು ಆಗ ನಮಗೆಲ್ಲ ಅದುವೇ ನಮಗೆಲ್ಲ ಪೌಷ್ಠಿಕ ಆಹಾರವಾಗಿತ್ತು ಆದರೆ ಇಂದು ಸರಕಾರ ಶಾಲಾ ಮಕ್ಕಳಿಗೆ ಪೌಷ್ಠಿಕತೆ ಹೆಚ್ಚಿಸುವ ಅನೇಕ ಯೋಜನೆಗಳನ್ನು ಅನುಷ್ಠನಗೊಳಿಸಿದೆ ಇದರ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಕೋನಹಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಸಂತೋಷ ಕಕಮರಿ, ಕ್ಷೇತ್ರ ಸಮನ್ವಯ ಅಧಿಕಾರಿ ಗೌಡಪ್ಪ ಖೋತ, ಬಿಸಿಯೂಟ ಅಧಿಕಾರಿ ಎಮ್.ವ್ಹಿ.ನಾಮದಾರ, ಶಿಕ್ಷಣ ಸಂಯೋಜಕ ಎಸ್.ಪಿ.ಸನದಿ, ಗ್ರಾ.ಪಂ ಪಿಡಿಒ ಬೀರ್ಪ ಕಡಗಂಚಿ, ಶಿಕ್ಷಕ ಸಂಘದ ಅಧ್ಯಕ್ಷ ಜಿ.ಎಮ್.ಹಿರೇಮಠ, ಶಾಲಾ ಮುಖ್ಯಾಧ್ಯಾಪಕ ಎಮ್.ಸಿ.ಗುರವ ಸೇರಿದಂತೆ ಶಾಲಾ ಶಿಕ್ಷಕರು, ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.