ಗೋಕಾಕ್

ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟ ಕಾರ್ಯ ಶ್ಲಾಘನೀಯ: ಮುನವಳ್ಳಿ

ಪ್ರತಿಭೆಗಳಿಗೆ ವೇದಿಕೆ ಒದಗಿಸಿಕೊಟ್ಟ ಕಾರ್ಯ ಶ್ಲಾಘನೀಯ: ಮುನವಳ್ಳಿ

ಲೋಕದರ್ಶನ ವರದಿ 

ಗೋಕಾಕ 09: ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರ ಹೊಮ್ಮಿಸಲು “ಟ್ಯಾಲೆಂಟ್ ಹಂಟ್‌” ದಂತಹ ಕಾರ್ಯಕ್ರಮ ಆಯೋಜಿಸಿ ಪ್ರತಿಭೆಗಳಿಗೆ ಸೂಕ್ತ ವೇದಿಕೆ ಒದಗಿಸಿಕೊಟ್ಟ ವಿದ್ಯಾಲಯದ ಕಾರ್ಯ ಶ್ಲಾಘನೀಯವಾಗಿದೆ ಎಂದು  ಕೆಎಲ್‌ಇ ಸಂಸ್ಥೆಯ ಆಡಳಿತ ಮಂಡಳಿಯ ಸದಸ್ಯ ಜಯಾನಂದ ಮುನವಳ್ಳಿ ಹೇಳಿದರು. 

ನಗರದಲ್ಲಿಯ ಸಿ.ಎಸ್‌. ಅಂಗಡಿ ಮಹಾವಿದ್ಯಾಲಯದಲ್ಲಿ ಕೆಎಲ್‌ಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಶಾಲಾ ಮಕ್ಕಳಲ್ಲಿ ಜ್ಞಾನ ತುಂಬುವ ಕೆಲಸ ನಿರಂತರವಾಗಿ ನಡೆಯಲಿ ಎಂದು ಆಶಿಸಿದರು.  

ಸ್ಥಳೀಯ ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ  ಎಂ.ಡಿ.ಚುನಮರಿ ಮಾತನಾಡಿ, ಪರಿಸರ ಪ್ರೇಮವನ್ನು ಹುಟ್ಟುಹಾಕುವ ಮತ್ತು ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆಯನ್ನು ಮೂಡಿಸುವ ಇಂತಹ ಕಾರ್ಯಕ್ರಮಗಳು ನಡೆಯುವುದರಿಂದ ಮಕ್ಕಳ ಬುದ್ಧಿ ಮಟ್ಟ ವಿಕಾಸಗೊಳ್ಳುವುದಲ್ಲದೇ ಮಕ್ಕಳು ಸದಾ ಚಟುವಟಿಕೆಯಿಂದ ಬೆಳೆಯಲು ಸಹಾಯವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. 

ಪ್ರಾಚಾರ್ಯ ಕೆ.ಬಿ.ಮೇವುಂಡಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕೆ.ಎಲ್‌.ಇ ಸಂಸ್ಥೆ ಅಂತರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಈ ಮೇರು ಸಾಧನೆಗೆ ಸಂಸ್ಥೆಯ ಸಂಸ್ಥಾಪಕರ ಸೇವೆ ಮತ್ತು ತ್ಯಾಗ ಬಹು ದೊಡ್ಡದಾಗಿದೆ. ನಾವೆಲ್ಲರೂ ಅವರ ಮಾರ್ಗದಲ್ಲಿ ಸಾಗೋಣ ಎಂದರು. 

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಡಳಿತಾಧಿಕಾರಿ ಜಿ.ಎಮ್‌.ಅಂದಾನಿ ಮಾತನಾಡಿ, ಸಂಸ್ಥಾಪಕರು ಋಷಿಗಳಂತೆ ತಮ್ಮ ಜೀವನವನ್ನೆಲ್ಲಾ ತಪಸ್ಸನ್ನಾಗಿಸಿ ನಿಸ್ವಾರ್ಥ ಭಾವದಿಂದ ಕಟ್ಟಿದ ಈ ಸಂಸ್ಥೆಯು ನಮಗೆಲ್ಲ ಆಶ್ರಯವಾಗಿ ಎಂದು ಹೇಳಿದರು. 

ಸಮಾರಂಭಕ್ಕಿಂತ ಮುನ್ನ ಸಂಸ್ಥೆಯ ಸಂಸ್ಥಾಪಕ ಸಪ್ತರ್ಷಿಗಳಿಗೆ ಪುಷ್ಪನಮನ ಸಲ್ಲಿಸಲಾಯಿತು. ಇಮಧೆ ಸಂದರ್ಭದಲ್ಲಿ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮಹುಮಾನ ವಿತರಿಸಲಾಯಿತು. ಹಾಗೂ  ಮಕ್ಕಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಿಸುವ ಸಲುವಾಗಿ ಸೈಕಲ್ ಮೇಲೆ ವಿದ್ಯಾಲಯಕ್ಕೆ ಬರುತ್ತಿರುವ ವಿದ್ಯಾರ್ಥಿಗಳನ್ನು ಪರಿಸರ ಸ್ನೇಹಿಗಳೆಂದು ಗುರುತಿಸಿ ಬಹುಮಾನ ವಿತರಿಸಲಾಯಿತು. 

ಎಮ್‌.ಎಮ್‌.ಶಾಲೆಯ ಪ್ರಾಚಾರ್ಯ ಚಂದ್ರಾಣಿ ಭಟ್ಟಾಚಾರ್ಯ, ಸಂಸ್ಕೃತಿ ಶಾಲೆಯ ಮುಖ್ಯಸ್ಥರಾದ ವೀಣಾ ತಮ್ಮಣ್ಣಿ, ಪದವಿ ಕಾಲೇಜಿನ ಪ್ರಾಚಾರ್ಯ ಅಮೃತ ಜಕ್ಕಲಿ ಸೇರಿದಂತೆ ಎಲ್ಲಿ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. 

ವಿದ್ಯಾರ್ಥಿಗಳು ನಿರೂಪಿಸಿ ಸ್ವಾಗತಿಸಿ ವಂದಿಸಿದರು. 


ಸುದ್ದಿ ಓದಿ