ಗೋಕಾಕ್

ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶ್ಲ್ಯಾಘನೀಯ

ಪ್ರತಿಭೆಗಳನ್ನು ಗುರುತಿಸುವ ಕಾರ್ಯ ಶ್ಲ್ಯಾಘನೀಯ


     ಗೋಕಾಕ10: ನಾಡಿನ ಕಲೆ.ಸಾಹಿತ್ಯ. ಸಾಂಸ್ಕೃತಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿರುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಶ್ಲ್ಯಾಘನೀಯವಾಗಿದೆ. ಎಂದು ಕನ್ನಡ ಸಾಹಿತ್ಯ ಪರಿಷತ್ತು. ಗೋಕಾಕ ತಾಲೂಕಿನ ನಿಕಟಪೂರ್ವ ಅಧ್ಯಕ್ಷ ಮಹಾಂತೇಶ ತಾಂವಶಿ ಹೇಳಿದರು. 

     ಅವರು ಗೋಕಾವಿ ಗೆಳೆಯರ ಬಳಗವು ನಗರದ ಸಿದ್ಧಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದರು ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಬೆಳಗಾವಿ ಜಿಲ್ಲಾ ಕಾರ್ಯಧ್ಯಕ್ಷೆ ವೈಶಾಲಿ ಭರಭರಿ ಹಾಗೂ ಗೋಕಾಕ  ತಾಲೂಕಾ ಪತ್ರಕರ್ತ ಸಂಘದ ಅಧ್ಯಕ್ಷ ಮನೋಹರ ಮ್ಯಾಗೇರಿಯವರನ್ನು ಬಳಗದ ಪೂರಕವಾಗಿ ಸನ್ಮಾನಿಸಿ ಗೌರವಿಸಲಾಯಿತು. ಬಳಗದ ಸಂಚಾಲಕ ಹಾಗೂ ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ  ಪ್ರಾ. ಜಯಾನಂದ ಮಾದರ ಬುದ್ದಿಜೀವಿಗಳು ನಾಡಿನ ಸಾಂಸ್ಕೃತಿಕ ಸ್ವಾಸ್ಥ್ಯವನ್ನು ಹೆಚ್ಚಿಸಬೇಕು ಎಂದು ಪ್ರಾಸ್ತಾವಿಕ ಮಾತನಾಡಿದರು.  

      ಹಿರಿಯ ರಂಗಕರ್ಮಿ ಈಶ್ವರಚಂದ್ರ ಬೆಟಗೇರಿ, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಬಸವರಾಜ ಮುರಗೋಡ, ಹಿರಿಯ ಮಹಿಳಾ ಸಾಹಿತಿಗಳಾದ ಶಕುಂತಲಾ ದಂಡಗಿ, ಸುಗಂಧಾ ಡಂಬಳ ಕವಿ ಹಾಗೂ ಶಿಕ್ಷಕ ಈಶ್ವರ ಮಮದಾಪೂರ ಚುಟುಕುಕವಿ ಗೋಪಾಲ ಶೆಟ್ಟಿ, ನ್ಯಾಯವಾದಿಗಳಾದ ಸಂಗೀತಾ ಬನ್ನೂರ, ಬಲದೇವ ಸಣ್ಣಕ್ಕಿ, ರಾಹುಲ್ ಸೊಂಟಕ್ಕಿ ಟ್ರಸ್ಟ್‌ನ ಅದ್ಯಕ್ಷ ಲಕ್ಷ್ಮಣ ಸೊಂಟಕ್ಕಿ, ಡಾ. ಅರುಣ ಸವತಿಕಾಯಿ, ಕಪರಟ್ಟಿ ಶ್ರೀಗುರು ಮಹಾದೇವಾಶ್ರಮದ ಬಸವರಾಜ ಹಿರೇಮಠ ಸ್ವಾಮಿಗಳು, ಶಿಕ್ಷಕ ಬಸವರಾಜ ಹಣಮಂತಗೋಳ, ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಚೇತನ  ಜೋಗನ್ನವರ ಅಭಿನಂದನ ನುಡಿ ಆಡಿದರು. 

     ಇದೇ ಸಂದರ್ಭದಲ್ಲಿ ಅಗಲಿದ ಹಿರಿಯ ಚಿಂತಕ, ಪ್ರವಚನಕಾರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗಪೂರದ ಇಬ್ರಾಹಿಂ ಸುತಾರ ಹಾಗೂ ಭಾರತೀಯ ಚಿತ್ರರಂಗದ ಗಾನಕೋಗಿಲೆ ಲತಾ ಮಂಗೇಶ್ವರ ಅಗಲಿಕೆಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. 


ಸುದ್ದಿ ಓದಿ