ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಮೋಘ: ಶಾಸಕ ಗುಡಗುಂಟಿ
ಲೋಕದರ್ಶನ ವರದಿ
ಜಮಖಂಡಿ6: ಶಿಕ್ಷಕರಾಗಿ ಸೇವೆ ಆರಂಭಿಸಿ, ನಂತರ ರಾಷ್ಟ್ರಪತಿಗಳಾಗಿ ದೇಶದ ಆಡಳಿತ ನಡೆಸಿದ ಕೀರ್ತಿ ಭಾರತರತ್ನ ಪ್ರಶಸ್ತಿ ಪುರಸ್ಕ್ರತ ಶಿಕ್ಷಕ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೆ ಸಲ್ಲುತ್ತದೆಂದು ಶಾಸಕ ಜಗದೀಶ ಗುಡಗುಂಟಿ ಹೇಳಿದರು.
ನಗರದ ಬಸವಭವನ ಸಭಾಭವನದಲ್ಲಿ ನಡೆದ ಶಿಕ್ಷಣ ಇಲಾಖೆ, ಜಿ,ತಾಲೂಕಾಡಳಿತ, ಶಿಕ್ಷಕರ ವಿವಿಧ ಸಂಘಟನೆ ಮತ್ತು ತಾಲೂಕಾ ಸರ್ಕಾರಿ ನೌಕರರ ಸಂಘಟನೆಗಳ ಸಹಯೋಗದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನರ ಜನ್ಮ ದಿನಾಚರಣೆ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬಾಲ್ಯದಲ್ಲಿ ಲಭಿಸುವ ಮೌಲ್ಯಯುತ ಶಿಕ್ಷಣ ವಿದ್ಯಾರ್ಥಿಗಳ ಜೀವನ ಉತ್ತಮ ರೀತಿಯಲ್ಲಿ ರೂಪಗೊಳ್ಳಲಿದೆ. ಇಂದಿನ ದಿನಮಾನದಲ್ಲಿ ಪ್ರತಿಯೊಬ್ಬರಿಗೂ ಶಿಕ್ಷಣ ಅಗತ್ಯವಾಗಿದೆ. ಸಹ ಬಾಳ್ವೆ, ದೇಶದ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಅಮೋಘವಾಗಿದೆ. ಇಂದಿನ ಮಕ್ಕಳ ನಮ್ಮ ದೇಶದ ಮುತ್ತುರತ್ನಗಳಿದ್ದು, ದೇಶಕ್ಕಾಗಿ ಬಳಕೆಯಾಗುವ ರೀತಿಯಲ್ಲಿ ನಾವು ಬೆಳಸಬೇಕಾಗಿದೆ. ಶಿಕ್ಷಣವಂತರು ಸಮುದಾಯದ ನಾಯಕರಾಗಲಿದ್ದಾರೆಂದರು.
ಈ ವೇಳೆ ನಿವೃತ್ತ ಶಿಕ್ಷಕರಿಗೆ ಸನ್ಮಾನಿಸಲಾಯಿತು.ತಾಲೂಕ ಶಿಕ್ಷಕರ ಸಂಘ ಮನವಿಯನ್ನು ಶಾಸಕ ಜಗದೀಶ ಗುಡಗುಂಟಿ ಅವರಿಗೆ ಸಲ್ಲಿಸಲಾಯಿತು. ಶಿರೂರಿನ ಚಿತ್ತರಗಿ ವಿಜಯ ಮಹಾಂತೇಶ್ವರ ತೀರ್ಥದ ಡಾ.ಬಸವಲಿಂಗ ಶ್ರೀಗಳು ಸಾನಿಧ್ಯ ವಹಿಸಿ ಆರ್ಶಿವಚಿಸಿದರು. ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ, ತಹಸೀಲ್ದಾರ ಸದಾಶಿವ ಮಕ್ಕೋಜಿ, ತಾಪಂ ಇಓ ಸಂಜೀವ ಜುನ್ನೂರ,ಸಿಡಿಪಿಓ ಎಂ.ಬಿ.ದಾಸರ, ಸಿಇಟಿ ಪ್ರಾಚಾರ್ಯ ಈಶ್ವರ ನಾಯ್ಕಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎಸ್. ಕಲ್ಯಾಣಿ, ತಾಲೂಕ ದೈಹಿಕ ಶಿಕ್ಷಣ ಅಧಿಕ್ಷಕಿ ಪಂಚಾಕ್ಷರಿ ನಂದೇಶ, ಪಿ.ಬಿ.ಅಜ್ಜನವರ, ಸಿ.ಜಿ.ಕಡಕೋಳ, ನರಸಿಂಹ ಕಳ್ಳೊಳ್ಳಿ, ಬಿ.ಎಸ್. ಸಾವಳಗಿ, ಎಂ.ಆರ್.ಹುಂಡೇಕಾರ, ಜಗದೀಶ ಮೇತ್ರಿ, ಎ.ಎ.ಮೂಡಲಗಿ, ಸಮೀರ ನದಾಫ ಅನೇಕರಿದ್ದರು. ಶಿಕ್ಷಕಿಯರು ಪ್ರಾರ್ಥಿಸಿದರು. ಸಂತೋಷ ತಳಕೇರಿ ಸ್ವಾಗತಿಸಿದರು. ಬಿಈಓ ಅಶೋಕ ಬಸನ್ನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕ ನಾರಾಯಣಶಾಸ್ತ್ರಿ ನಿರೂಪಿಸಿದರು. ಕ್ಷೇತ್ರ ಸಮನ್ವಯಾಧಿಕಾರಿ ರಮೇಶ ಅವಟಿ ವಂದಿಸಿದರು.