ವಿಜಯನಗರ

ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ-ಪ್ರೊ. ಬಸವರಾಜ ಬೆಣ್ಣಿ

ಕನಕದಾಸರ ಕೀರ್ತನೆಗಳು ಇಂದಿಗೂ ಪ್ರಸ್ತುತ-ಪ್ರೊ. ಬಸವರಾಜ  ಬೆಣ್ಣಿ

ಲೋಕದರ್ಶನ ವರದಿ 

ವಿಜಯನಗರ 22: ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ, ಕೊಪ್ಪಳದಲ್ಲಿ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವದರ ಮೂಲಕ ಆರಂಭಿಸಲಾಯಿತು, ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕೇಂದ್ರದ ನಿರ್ದೇಶಕ ಪ್ರೊ. ಬಸವರಾಜ. ಎಸ್ ಬೆಣ್ಣಿ ಅವರು ಮಾತನಾಡಿ ಕನಕದಾಸರನ್ನು ಒಂದು ಜಾತಿ ಸಮುದಾಯಕ್ಕೆ ಸೀಮಿತಗೊಳಿಸುತ್ತಿರುವುದು ಖೇದಕರ ಸಂಗತಿ, ಅವರು ವಿಶ್ವ ಮಾನ್ಯರಾಗಿದ್ದಾರೆ, ಅವರಿಗೆ ಯಾವುದೇ ಜಾತಿ ಧರ್ಮದ ಹಂಗಿಲ್ಲ “ಕುಲ ಕುಲವೆಂದು ಹೊಡದಾಡದಿರಿ ನಿಮ್ಮ ಕುಲದ ನೆಲೆಯನ್ನೇನು ಬಲ್ಲಿರೇನು” ಎಂದು ಹೇಳುವ ಮೂಲಕ ಜಾತಿ ಬೇರುಗಳನ್ನು ಕಿತ್ತೆಸೆೆದು ಸಮ ಸಮಾಜ ನಿರ್ಮಿಸುವ ಕನಸು ಹೊತ್ತವರು. ಅದನ್ನು ಸಾಕಾಗೊಳಿಸಲು ಜೀವನಪರ್ಯಂತ ಶ್ರಮಿಸಿದ್ದಾರೆ. ವ್ಯಕ್ತಿಯು ಪರಿಸ್ಥಿತಿ, ಮನಸ್ಥಿತಿ  ಹಾಗೂ ಆತ್ಮಸ್ಥಿತಿಯನ್ನು ಸುಧಾರಿಸಿಕೊಳ್ಳಲು ಕನಕದಾಸರ ಕಿರ್ತನೆಗಳು ದಾರಿ ದೀಪವಾಗಿವೆ, ಅವರ ತತ್ವ ಆದರ್ಶಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಕನಕದಾಸರ ಕುರಿತು ಉಪನ್ಯಾಸಕರಾದ ಡಾ. ಪಾಂಡುರಂಗ ಆರ್, ಡಾ. ಗೀತಾ ಪಾಟೀಲ್ ವಿದ್ಯಾರ್ಥಿಗಳಾದ ಬಸವರಾಜ ದಿವಾನ ಮತ್ತು ಸಚಿನ್‌ಕುಮಾರ ಎಮ್ ಮೊದಲಾದರವರು ಮಾತನಾಡಿದರು.         


 ಡಾ. ನಾಯಕರ ಹುಲುಗಪ್ಪ ನಿರೂಪಿಸಿದರು, ಕನ್ನಡ ಅಧ್ಯಯನ ವಿಭಾಗದ ವಿದ್ಯಾರ್ಥಿನಿ ಕು. ವಿಶಾಲಾಕ್ಷಿ ಅವರು ಪ್ರಾರ್ಥಿಸಿದರು, ಉಪನ್ಯಾಸಕರಾದ ಡಾ. ತೋತ್ಯ ನಾಯಕ ಅವರು ಸ್ವಾಗತಿಸಿದರು. ಡಾ. ವೀರೇಶ ಉತ್ತಂಗಿಯವರು ಪ್ರಾಸ್ಥಾವಿಕವಾಗಿ  ಮಾತನಾಡಿದರು. ವಿದ್ಯಾರ್ಥಿಯಾದ ಮಂಜುನಾಥ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ. ರಂಗನಾಥ ಆರ್, ಸುಭಾನಿ ಖಾನಮ್ ನೇಹಲ್, ವಿನಾಯಕ. ಬಿ, ವೀಣಾ.ಬಿ ಹಾಗೂ ಬೋಧಕೇತರ ಸಿಬ್ಬಂದಿಗಳಾದ ವಿಜಯಕುಮಾರ, ದೇವರಾಜ, ಸಂತೋಷ ಕುಮಾರ ಇತರ ಸಿಬ್ಬಂದಿಗಳು, ರಕ್ಷಣಾ ಸಿಬ್ಬಂದಿಗಳು ಹಾಗೂ ಎಲ್ಲಾ ವಿಭಾಗದ ವಿದ್ಯಾರ್ಥಿಗಳು ಹಾಜರಿದ್ದು ಕಾರ್ಯಕ್ರಮವನ್ನು  ಯಶಸ್ವಿಗೊಳಿಸಿದರು. 


ಸುದ್ದಿ ಓದಿ