ವಿಜಯನಗರ

ಜಿಲ್ಲಾಡಳಿತ ವತಿಯಿಂದ ಶ್ರೀ ಮಧ್ವಾಚಾರ್ಯ ಜಯಂತಿ ಆಚರಣೆ

ಜಿಲ್ಲಾಡಳಿತ ವತಿಯಿಂದ ಶ್ರೀ  ಮಧ್ವಾಚಾರ್ಯ ಜಯಂತಿ ಆಚರಣೆ


ವಿಜಯನಗರ (ಹೊಸಪೇಟೆ) ( ಕರ್ನಾಟಕ ವಾರ್ತೆ) ಅ.21: ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಶ್ರೀ ಜಗದ್ಗುರು ಮಧ್ವಾಚಾರ್ಯರ ಜಯಂತಿಯನ್ನು ಸರಳ ಮತ್ತು ಸಾಂಕೇತಿಕವಾಗಿ ಆಚರಿಸಲಾಯಿತು.  

 ಅಪರ ಜಿಲ್ಲಾಧಿಕಾರಿ ಪಿ.ಎನ್‌. ಲೋಕೇಶ್ ಅವರು ಮಧ್ವಾಚಾರ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿದರು.  

ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ  ಸಿನಂಭಟ್, ಗುರುರಾಜ್ ದಿಗ್ಗಾವಿ, ಪ್ರಭಾಕರ್ ರಾವು, ನರಸಿಂಹ ಆಚಾರ್ಯ, ಕಲ್ಲಂಭಟ್ಟ, ಚಂದ್ರಕಾಂತ್ ಕಾಮತ್, ಹೆಚ್ಚ ಉಮೇಶ್ ನರಸಿಂಹ ಮೂರ್ತಿ, ಗಲಗಲಿ ಆಚಾರ್ಯ ಸೇರಿದಂತೆ ಮತ್ತಿತರರು ಇದ್ದರು. 


ಸುದ್ದಿ ಓದಿ