ಪೊಲೀಸ್ ಪೇದೆಯನ್ನು ತರಾಟೆ ತೆಗೆದುಕೊಂಡ ಸಾರ್ವಜನಿಕರು ವಿಡಿಯೋ ವೈರಲ್
ಅಥಣಿ 19: ಅಥಣಿ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಣೆ ಸಿಬ್ಬಂದಿ ಓರ್ವನನ್ನು ಸಾರ್ವಜನಿಕರು ತರಾಟೆ ತೆಗೆದುಕೊಂಡಿರುವ ಘಟನೆ ಸಂಭವಿಸಿರಿವ ವಿಡಿಯೋ ಸಖತ್ ವೈರಲಾಗಿದೆ.
ಗುರುವಾರ ಸಾಯಂಕಾಲ ಪೋಲಿಸ ಠಾಣೆ ಆವರಣದಲ್ಲಿ ನಡೆದ ಘಟನೆಯೊಂದು ವಿಡಿಯೋ ಚಿತ್ರಿಕರಿಸಿ ಹರಿಬಿಡಲಾಗಿದೆ , ವೈರಲಾದ ವಿಡಿಯೋದಲ್ಲಿ ದ್ವಿಚಕ್ರ ವಾಹನ ನಂಬರ್ ಪ್ಲೇಟ್ ವಿಷಯದಲ್ಲಿ ಸಾರ್ವಜನಿಕರಿಗೆ ಕಿರುಕುಳ ಹಾಗೂ ಒಬ್ಬರಿಗೆ ದೈಹಿಕ ಹಲ್ಲೆ ಮಾಡಿರುವ ಆರೋಪದಡಿಯಲ್ಲಿ ಪೆÇಲೀಸ್ ಪೇದೆಯಾದ ಸುರೇಶ್ ನಂದಿವಾಲೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿರುವುದು ಕಾಣುತ್ತಿದೆ.
ಹಿರಿಯ ಅಧಿಕಾರಿಗಳ ಜೊತೆಯಾಗಿ ವಾಹನ ತಪಾಸಣೆ ಮಾಡಬೇಕೆಂದು ಸರ್ಕಾರ ನಿರ್ದೇಶಕ ಇದ್ದರು, ಇಲ್ಲಿ ಪೇದೆಗಳ ಸಮ್ಮುಖದಲ್ಲಿ ವಾಹಣ ತಪಾಸಣೆ ಮಾಡಿರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕರ್ತವ್ಯದಲ್ಲಿ ನಿರಂತರವಾಗಿ ಇರುವ ಸಿಬ್ಬಂದಿಯು ಬಟ್ಟೆಯ ಬಟನ್ ಬಿಚ್ಚಿ ಕಾರ್ಯನಿರ್ವಹಿಸುತ್ತಿರುವುದನ್ನ ಉಲ್ಲಂಘನೆ ಮಾಡಿರುವುದು ಕಂಡು ಬರುತ್ತಿದೆ ಹಾಗೂ ಸಾರ್ವಜನಿಕ ಜೊತೆ ಅನುಚಿತವಾಗಿ ವರ್ತಿಸಿದ ಸಿಬ್ಬಂದಿಯನ್ನು ಹಿರಿಯ ಅಧಿಕಾರಿಗಳು ಅವರ ಮೇಲೆ ಶಿಸ್ತುಕ್ರಮ ಕೈಗೊಳ್ಳುವಂತೆ ಸಾರ್ವಜನಿಕರರು ಆಗ್ರಹಿಸಿದರು.