ತಾಯಿ ಸಮೇತ ಮಗು ಕಾಣೆ
ಬಳ್ಳಾರಿ 26:: ಮಹಿಳಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ 24 ವರ್ಷದ ಶ್ರೀಮತಿ ಸುಮಲತಾ ಹಾಗೂ 8 ತಿಂಗಳಿನ ಮಾನ್ವಿತ ಎಂಬುವವರು ಇದೇ ಡಿ.23 ರಿಂದ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿದೆ ಎಂದು ಠಾಣೆಯ ಪೊಲೀಸ್ ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ.
ಶ್ರೀಮತಿ ಸುಮಲತಾ ಅವರ ಗುರುತುಗಳು: 5.3 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಹಣೆಯ ಮೆಲೆ ಹಚ್ಚೆಯ ಗುರುತು ಇರುತ್ತದೆ. ಕನ್ನಡ ಭಾಷೆಯನ್ನು ಮಾತನಾಡುತ್ತಾಳೆ. ಇವರ ಬಗ್ಗೆ ಯಾವುದೇ ಮಾಹಿತಿ ದೊರೆತಲ್ಲಿ ಕೂಡಲೇ ಹತ್ತಿರವಿರುವ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದ್ದಾರೆ.