ಕಾಣೆಯಾದ ಯುವಕ ಈಗ ಶವವಾಗಿ ಪತ್ತೆ
ಲೋಕದರ್ಶನ ವರದಿ,
ಜಮಖಂಡಿ 4: ನಗರದ ಕತಾಟೆ ಪ್ಲಾಟ ನಿವಾಸಿಯ ಯುವಕನೊಬ್ಬ ಕಾಣೆಯಾಗಿದ್ದು. ಆತ ಶವವಾಗಿ ಪತ್ತೆಯಾಗಿದ್ದಾನೆ.
ನಗರದ ಕಡಕೋಳ ರಸ್ತೆಯಲ್ಲಿರುವ ಕತಾಟೆ ಪ್ಲಾಟ ನಿವಾಸಿಯಾದ ಯುವಕ ಸುರೇಶ ನಾಗಪ್ಪ ವಾಳೇನ್ನವರ (15) ಬಾವಿಯಲ್ಲಿ ಶವವಾಗಿ ಪತ್ತೆಯಾದ ದುದ್ರೈವಿ.
ಅಬ್ಬುಕ್ಕರ ಉರುಸು ನಡೆದಿದ್ದು. ಉರುಸಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಯುವಕ ಮರಳಿ ಲೋಕಕ್ಕೆ ತೆರಳಿದ್ದಾನೆ.
ಸುರೇಶ ಬಾರದೆ ಇರುವ ಸಮಯದಲ್ಲಿ ಮನೆಯ ಕುಟುಂಬಸ್ಥರು ಆತನ ಶೋಧ ಕಾರ್ಯ ನಡೆಸಿದರು ಎನ್ನಲಾಗಿದೆ. ಆತನ ಮನೆಯ ಸಮೀಪ ಮಾಳಿ ಎಂಬವರ ತೋಟದ ಬಾವಿಯಲ್ಲಿ ಶವವಾಗಿ ಕಂಡಿದ್ದಾನೆ.
ಮಾಳಿಯವರ ತೋಟದ ಬಾವಿಯಲ್ಲಿ ಸುರೇಶನ ಶವವನ್ನು ನೋಡಿ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟುವಂತೆ ಇತ್ತು. ಶವವನ್ನು ತೆಗೆಯಲು ಅಗ್ನಿಶಾಮಕ ದಳ ಹಾಗೂ ಪೊಲೀಸರ ಸಹಾಯದಿಂದ ಶವವನ್ನು ಮೇಲೆಕ್ಕೆ ಏತ್ತಲಾಗಿದ್ದು. ಸರಕಾರಿ ಉಪವಿಭಾಗ ಆಸ್ಪತ್ರೆಗೆ ಶವ ಪರೀಕ್ಷೆಗೆ ಕಳಿಸಿಲಾಗಿದೆ.
ಜಮಖಂಡಿ ಶಹರ ಠಾಣೆಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಸುರೇಶ ವಾಳೇನ್ನವರ (15) ಸಾವಿನ ಬಗ್ಗೆ ನಿಖರವಾದ ಮಾಹಿತಿ ತಿಳಿದು ಬಂದಿರುವುದಿಲ್ಲ.