ಜಮಖಂಡಿ

ಮುನಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು: ಆಲಗೂರ

ಮುನಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು:  ಆಲಗೂರ

ಲೋಕದರ್ಶನ ವರದಿ,

ಜಮಖಂಡಿ 11: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ನಂದಿಪರ್ವತ ಆಶ್ರಮದ ಮುನಿ ಕಾಮಕುಮಾರ ನಂದಿ ಮಹಾರಾಜರ ಕೊಲೆ ಸಮಾಜ ತಲೆ ತಗ್ಗುಸುವಂತೆ ಮಾಡಿದ್ದು, ಅದನ್ನು ತೀವ್ರವಾಗಿ ಖಂಡಿಸಿ, ಸರ್ಕಾರ ಕೂಡಲೆ ಎಚ್ಚರ ವಹಿಸಿ ಕ್ರಮ ತೆಗೆದುಕೊಳ್ಳಬೇಕು. ಕೊಲೆ ಮಾಡಿದವರನ್ನು ಗಲ್ಲಿಗೆರಿಸಬೇಕೆಂದು ಉತ್ತರ ಕರ್ನಾಟಕ ಜೈನ ಮಹಾ ಸಂಘದ (ಹುಬ್ಬಳ್ಳಿ) ಉಪಾಧ್ಯಕ್ಷ ತವನಪ್ಪ ಆಲಗೂರ ತಿಳಿಸಿದ್ದಾರೆ. 

ಸಮಾಜದ ಏಳಿಗೆಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಶ್ರೀಗಳಿಗೆ ಇಂತಹ ಪರಿಸ್ಥಿತಿ ಬಂದಿರುವದು ನಮ್ನ ಸಮಾಜದಲ್ಲಿ ಮೊದಲನೆಯ ಘಟನೆಯಾಗಿದೆ. ಎಲ್ಲ ಸ್ವಾಮಿಗಳು, ಮತ್ತು ಮುನಿಗಳಿಗೆ ಸರ್ಕಾರ ರಕ್ಷಣೆ ನೀಡಬೇಕು. ಸಮಾಜದಲ್ಲಿ ಇಂತಹ ಘಟನೆ ಮರುಕಳಿಸಬಾರದು, ಸಮಾಜ ಸೇವೆ ಮಾಡುವವರ ಕಷ್ಟ-ಸುಖಗಳನ್ನು ಸರ್ಕಾರ ನೋಡಬೇಕು ಎಂದು ಒತ್ತಾಯಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯಾನವರು ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರರವರು ಈ  ಘಟನೆ ಕಾರಣರಾದ ದುಷ್ಕರ್ಮಿಗಳು ಅದ್ಯಾವುದೇ ಧರ್ಮ-ಮತ-ಜಾತಿ-ಪಂಗಡದ ವ್ಯಕ್ತಿಗಳೇ ಆಗಿದ್ದರು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆದೇಶ ನೀಡಬೇಕು. ಇಲ್ಲದಿದ್ದರೆ ಶಾಂತಪ್ರೀಯ ಜೈನ ಸಮೂದಾಯ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆಂದು ತವನಪ್ಪ ಆಲಗೂರು ಎಚ್ಚರಿಸಿದ್ದಾರೆ. 



ಸುದ್ದಿ ಓದಿ