ಬೈಲಹೊಂಗಲ ತಾಲೂಕಿನಲ್ಲಿಯೇ ಪ್ರಪ್ರಥಮ ಹಿಪ್ ಬದಲಿ ಶಸಸ್ರಿಚಿಕಿತ್ಸೆ ಯಶಸ್ವಿ
ಡಾ.ಮಂಜುನಾಥ ಮುದಕನಗೌಡರ ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಸಾಧನೆಗೆ ಶ್ಲಾಘನೆ
ಬೈಲಹೊಂಗಲ 19 : ಪ್ರಪ್ರಥಮವಾಗಿ ತಾಲೂಕಿನಲ್ಲಿಯೇ ಹಿಪ್ ಬದಲಿ ಶಸಸ್ರಿಚಿಕಿತ್ಸೆ (ಖಿಠಚಿಟ ಊಠಿ ಖಜಠಿಟಚಿಛಿಜಟಜಟಿಣ) ನೀಡಿ, ಯಶಸ್ವಿಯಾಗುವ ಮೂಲಕ ಪಟ್ಟಣದ ಮಲಪ್ರಭಾ ಮಲ್ಟಿ ಸ್ಪೇಷಾಲಿಟಿ ಆಸ್ಪತ್ರೆಯ ಎಲುವು, ಕೀಲು ತಜ್ಞ ಡಾ.ಮಂಜುನಾಥ ಮುದಕನಗೌಡರ ಅವರು, ವೈದ್ಯಕೀಯ ಕ್ಷೇತ್ರದಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ.
ಒಂದು ಕಡೆ ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಇನ್ನೊಂದು ಕಡೆ ಅನಾರೋಗ್ಯದಿಂದ ಬಳಲುತ್ತಿದ್ದ ಯುವಕನಿಗೆ ಡಾ.ಮುದಕನಗೌಡರ ಅವರು, ಆತ್ಮಸೈರ್ಯ ತುಂಬಿ, ಕಡಿಮೆ ವೆಚ್ಚದಲ್ಲಿ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಯುವಕರೊಬ್ಬರು ದಾಖಲಾದ ನಂತರ ಅವರಿಗೆ ಹಾಸಿಗೆಯಿಂದ ಏಳಲು, ನಡೆಯಲು ಮತ್ತು ಕುಳಿತುಕೊಳ್ಳಲು ತುಂಬಾ ಕಷ್ಟವಾಗುತ್ತಿತ್ತು. ಇದು ಸಾಮಾನ್ಯವಾಗಿ ಮೂಳೆ ಸೆಳೆತ, ಸಂದಿವಾತ, ಮೂಳೆ ಮುರಿತಗಳಿಂದ ಸೊಂಟ ಹಾನಿಗೊಳ್ಳುತ್ತದೆ. ಇದರಿಂದಾಗಿ ಸಾಮಾನ್ಯ ಚಟುವಟಿಕೆ ಕಷ್ಟಕರ ಮತ್ತು ನೋವಿನಿಂದ ಕೂಡಿರುತ್ತದೆ. ಸಂಪ್ರದಾಯವಾದಿ ಕ್ರಮಗಳಿಂದ ಯಾವುದೇ ಪರಿಹಾರವನ್ನು ಪಡೆಯದಿದ್ದಾಗ ಹಿಪ್ ಬದಲಿ ಶಸ್ತ್ರ ಚಿಕಿತ್ಸೆಯನ್ನು ಶಿಫಾರಸ್ಸು ಮಾಡಲಾಗುತ್ತದೆ.
ಈ ಶಸ್ತ್ರ ಚಿಕಿತ್ಸೆ ಸಂಪೂರ್ಣ ಯಶಸ್ವಿಯಾದ ಕೇವಲ 48 ಗಂಟೆಗಳಲ್ಲಿ ಯುವಕ ವಾಕರ್ ಸಹಾಯದೊಂದಿಗೆ 50 ಮೀಟರ್ ಸಾಮಾನ್ಯವಾಗಿ ನಡೆದಾಡಲು ಪ್ರಾರಂಭಿಸಿದರು. ಈ ಶಸ್ತ್ರಚಿಕಿತ್ಸೆ ಬೆಳಗಾವಿ ನಗರದ ಆಸ್ಪತ್ರೆಗಳ ವೆಚ್ಚಕ್ಕಿಂತ ಅತೀ ಕಡಿಮೆ ವೆಚ್ಚದಲ್ಲಿ ಮಾಡಲಾಗಿದೆ. ಇದು ಎಲ್ಲ ವೈದ್ಯಕೀಯ ಕ್ಷೇತ್ರದಲ್ಲಿ ಅತ್ಯಂತ ಯಶಸ್ವಿ ಶಸ್ತ್ರಚಿಕಿತ್ಸೆಗಳಲ್ಲಿ ಒಂದಾಗಿದೆ. ತಂತ್ರಜ್ಞಾನದಲ್ಲಿನ ಪ್ರಗತಿಯೊಂದಿಗೆ ತ್ವರಿತ, ಸುಲಭ ಮತ್ತು ಹೆಚ್ಚು ಪರಿಣಾಮಕಾರಿಯಾಗಿದೆ. ಡಾ.ಮಂಜುನಾಥ ಮುದಕನಗೌಡರ ಅವರ ಶಸ್ತ್ರಚಿಕಿತ್ಸೆ ಯಶಸ್ವಿಗೆ ನಾಡಿನ ವೈದ್ಯರು, ಗಣ್ಯಮಾನ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಬೈಲಹೊಂಗಲ ಭಾಗದಲ್ಲಿ ಪ್ರಾಮಾಣಿಕವಾಗಿ ಆರೋಗ್ಯ ಸೇವೆ ನೀಡುತ್ತಿದ್ದೇನೆ. ಮಾನವೀಯತೆಯ ಹಿತದೃಷ್ಟಿಯಿಂದ ಮುಂಬರುವ ದಿನಗಳಲ್ಲಿ ಬಡವರಿಗಾಗಿ ಕಡಿಮೆ ವೆಚ್ಚದಲ್ಲಿ ಶಸ್ತ್ರ ಚಿಕಿತ್ಸೆ ನೀಡಲಾಗುವುದು.
ಡಾ.ಮಂಜುನಾಥ ಮುದಕನಗೌಡರ
ಎಲವು, ಕೀಲು ತಜ್ಞ, ಬೈಲಹೊಂಗಲ