ಜಮಖಂಡಿ

ಚಾಲಕನ ನಿಯಂತ್ರಣ ತಪ್ಪಿ ಚಿಕ್ಕನ್ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು

ಚಾಲಕನ ನಿಯಂತ್ರಣ ತಪ್ಪಿ ಚಿಕ್ಕನ್ ರೆಸ್ಟೋರೆಂಟ್ ಒಳಗೆ ನುಗ್ಗಿದ ಕಾರು

ಜಮಖಂಡಿ 12: ನಗರದ ಟಿಪ್ಪು ಸುಲ್ತಾನ್ ಸರ್ಕಲ್ ಬಳಿ ಕುಡಿದ ಅಮಲಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ. ಎ1 ಚಿಕ್ಕನ್ ರೆಸ್ಟೋರೆಂಟ್ ಹೊಟೇಲ್ ಒಳಗೆ ಎರಟಿಕಾ ಕಾರು ನುಗ್ಗಿದ ಪರಿಣಾಮ ಅದೃಷ್ಟವಶಾತ ಯಾವುದೇ ಪ್ರಾಣ ಹಾನಿ ಸಂಭವಿಸಿರುವುದಿಲ್ಲ.  

ತಾಲೂಕಿನ ಮುಂಡಗನೂರು ಗ್ರಾಮದ ಕಾರು ಚಲಾಯಿಸುತ್ತಿದ್ದ ಚಾಲಕ ಪ್ರಕಾಶ್ ಕುಂಬಾರ ಎಂಬಾತ ಕುಡಿದ ಅಮಲಿನಲ್ಲಿ ಬೇಕಾಬಿಟ್ಟಿಯಾಗಿ ವಾಹನ ಚಲಾಯಿಸಿದ ಹಿನ್ನಲೆ ಎ1 ಚಿಕ್ಕನ್ ರೆಸ್ಟೋರೆಂಟ್ ಹೊಟೇಲ್ ಒಳಗೆ ನುಗ್ಗಿದರಿಂದ ಹೊಟೇಲ್ ಮುಂದಗಡೆ ಬೈಕ್‌ಗಳನ್ನು ಪಾರ್ಕಿಂಗ್ ಮಾಡಿದ್ದು. ಬೈಕ್‌ಗಳನ್ನು ಮೇಲೆ ಕಾರು ಹರಿದ ಪರಿಣಾಮ 3ರಿಂದ 4 ಬೈಕ್‌ಗಳು ನುಜ್ಜು ಗುಜ್ಜಾಗಿದ್ದು. ಒಂದು ಟಂಟಂ ಸೇರಿದಂತೆ ಹೋಟೆಲ್ ಕೌಂಟರ್ ಹಾಗೂ ವಿವಿಧ ಸಾಮಗ್ರಿಗಳು ಮತ್ತು ಏರಕುಲರ್ ಹೀಗೆ ಒಟ್ಟು 3ರಿಂದ 4 ಲಕ್ಷದವರಗೆ ನಷ್ಟವಾಗಿದೆ. ಸಂಜೆ ಸುಮಾರಿಗೆ ಚಿಕ್ಕನ ಪ್ರಾಯ್ ತೆಗೆದುಕೊಂಡು ಹೋಗಲು ಹಾಗೂ ಊಟಕ್ಕೆ ಅಂತಾ ಸಾರ್ವಜನಿಕರು ಎ1 ಚಿಕ್ಕನ ರೆಸ್ಟೋರೆಂಟ್ ಬರುವ ಸಮಯದಲ್ಲಿ ಎರಟಿಕಾ ಕಾರು ವಾಹನ ಹೊಟೇಲ್ ಒಳಗೆ ನುಗ್ಗಿದ್ದು. ಅಂಗಡಿಯಲ್ಲಿ ಕೆಲಸ ಮಾಡುವ 4 ಜನ ಕಾರ್ಮಿಕರ ಕೈ, ಕಾಲುಗಳಿಗೆ ಗಂಭೀರವಾದ ಗಾಯಗೊಂಡಿದು. ಅವರನ್ನು  ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಾಲ್ಕು ಮೋಟರ ಬೈಕಗಳು ಸೇರಿದಂತೆ ಒಂದು ಹೊಸ ಸ್ಕೂಟಿ ವಾಹನಕ್ಕೆ ವೇಗವಾಗಿ ಬಂದು ಡಿಕ್ಕಿ ಹೊಡೆತಕ್ಕೆ ಸ್ಕೂಟಿ ನುಜ್ಜಾದ ಘಟನೆ ಸಂಭವಿಸಿದೆ ಎಂದು ಹೊಟೇಲ್ ಮಾಲಿಕ ಮೈಬೂಬ ರಸೂಲಸಾಬ ಶೇಖ ಮಾಹಿತಿ ನೀಡಿದ್ದಾರೆ. 

ಎ1 ಚಿಕ್ಕನ್ ರೆಸ್ಟೋರೆಂಟ್ ಹೊಟೇಲ್ ಮುಂದೆ ನೂರಾರು ಸಾರ್ವಜನಿಕರು ಸೇರಿದನ್ನು ಚದುರಿಸಲು ಪೋಲಿಸರು ಹರಸಾಹಸ ಪಡುವಂತೆ ಆಯಿತು. ಕೊನೆಗೆ ಪೋಲೀಸರು ಜನರನ್ನು ಚದುರಿಸಲು ಲಾಟಿ ರುಚಿಯನ್ನು ತೋರಿಸಿದರು.  

ಈ ಕುರಿತು ಶಹರ ಪೋಲಿಸರು ಸ್ಥಳಕ್ಕೆ ಆಗಮಿಸಿ ವಾಹನ ಚಾಲಕನನ್ನು ವಶಕ್ಕೆ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ. 


ಸುದ್ದಿ ಓದಿ