ಬಾಲಕ ನಾಪತ್ತೆ
ಲೋಕದರ್ಶನ ವರದಿ
ಬಳ್ಳಾರಿ 01: ಕೌಲ್ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 15 ವರ್ಷದ ಚಂದ್ರಕುಮಾರ್ ಎಂಬ ಬಾಲಕನು ಬುದ್ಧಿಮಾಂದ್ಯನಾಗಿದ್ದು, ಫೆ.24ರಂದು ಸಂಜೆ 6ಗಂಟೆಗೆ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ ಎಂದು ಠಾಣೆಯ ಠಾಣಾಧಿಕಾರಿಗಳು ತಿಳಿಸಿದ್ದಾರೆ.
5 ಅಡಿ ಎತ್ತರ, ಕೋಲು ಮುಖ, ಕೆಂಪು ಬೂದಿಬಣ್ಣದ ಅಂಗಿ, ಕಪ್ಪು ಬಣ್ಣದ ಪ್ಯಾಂಟ್ ಧರಿಸಿರುತ್ತಾನೆ ಹಾಗೂ ಸ್ವಲ್ಪ ಬುದ್ಧಿಮಾಂದ್ಯನಾಗಿರುತ್ತಾನೆ. ತಮ್ಮ ಮನೆಯ ಹತ್ತಿರವಿರುವ ಬಾಲ ಮಂದಿರದ ಮುಂದೆ ಆಟವಾಡುತ್ತ ಇದ್ದವನು, ಎಲ್ಲೋ ಹೋಗಿದ್ದಾನೆ ಎಂದು ದೂರು ದಾಖಲಿಸಿದ್ದಾರೆ.
ಸದರಿ ಬಾಲಕನ ಬಗ್ಗೆ ಯಾವುದೇ ಸುಳಿವು ಸಿಕ್ಕಲ್ಲಿ ಕೂಡಲೇ ಸಮೀಪವಿರುವ ಪೊಲೀಸ್ ಠಾಣೆಗೆ ಸಂಪರ್ಕಿಸಿ