ಅಥಣಿ

ಶೋಷಿತರ ಕಣ್ಣು ತೆರೆಸಿದ ಸಾವಿತ್ರಿ ಬಾಯಿಫುಲೆ

ಶೋಷಿತರ ಕಣ್ಣು ತೆರೆಸಿದ ಸಾವಿತ್ರಿ ಬಾಯಿಫುಲೆ

ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ ಹೇಳಿಕೆ: ಸಾವಿತ್ರಿಬಾಯಿ ಪುಲೆ ಕೃತಿ ಬಿಡುಗಡೆ

ಅಥಣಿ 20: ಮಹಿಳೆಯರು ಸತಿ ಸಹಗಮನದ ಹೆಸರಿನಲ್ಲಿ ಚಿತೆಯಲ್ಲಿ ತಳ್ಳುವ ಅತ್ಯಂತ ಹೀನಾಯವಾಗಿ ಮಹಿಳಾ ಶೋಷಣೆ ತನ್ನ ಪರಾಕಾಷ್ಠೆ ತಲುಪಿ ಮಾನವೀಯತೆಯ ಸ್ಪರ್ಶ ಲವಲೇಶವಿಲ್ಲದ ಕಾಲದಲ್ಲಿ ಶೋಷಿತ ಸಮುದಾಯ ಅಜ್ಞಾನ ಅಂಧಕಾರದಲ್ಲಿ ಮುಳುಗಿರುವುದನ್ನು ಕಂಡು ಶಿಕ್ಷಣವೆಂಬ ಶಕ್ತಿ ನೀಡಿ ಶೋಷಿತರ ಕಣ್ಣು ತೆರೆಸಿ ಜಗತ್ತಿಗೆ ಮಾನವೀಯತೆ ಪಾಠ ಕಲಿಸಿದ ಮಹಾತಾಯಿ ಎಂದರೆ ಸಾವಿತ್ರಿ ಬಾಯಿಫುಲೆ ಎಂದು ಕೇಂದ್ರ ಸಾಹಿತ್ಯ ಅಕಾದೆಮಿ ಸದಸ್ಯ ಡಾ. ಬಾಳಾಸಾಹೇಬ ಲೋಕಾಪುರ ಹೇಳಿದರು.

ಅಥಣಿಯ ಪ್ರಧಾನಮಂತ್ರಿ ಉದ್ಯೋಗ ತರಬೇತಿ ಕೇಂದ್ರದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಜೆ.ಪಿ. ದೊಡಮನಿ ಅನುವಾದಿತ ಎಂಟನೆಯ ಪುಸ್ತಕ ಸಾವಿತ್ರಿಬಾಯಿ ಪುಲೆ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಅನಾಚಾರಗಳನ್ನು ದೂರೀಕರಿಸಿದ ಜ್ಯೋತಿಬಾ ಫುಲೆಯವರನ್ನು ಜೆ ಪಿ ದೊಡಮನಿಯವರು ಅನುವಾದಿಸಿ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ್ದಾರೆ. ಶಿಕ್ಷಣದಿಂದ ಜಾತಿ ಕಂದಕ ದಾಟಲು ಸಾಧ್ಯ ಎಂಬುದನ್ನು ಸಾಧಿಸಿ ತೋರಿದ ಮಹಾತ್ಮ ಜ್ಯೋತಿಬಾ ಫುಲೆ ಅಂದಿನ ಕಾಲದ ಮಹಾನ್ ಸಮಾಜಸುಧಾರಕರ ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಡಾ.ಲೋಕಾಪುರ ಹೇಳಿದರು.

ಸಾನ್ನಿಧ್ಯವಹಿಸಿದ್ದ ಕವಲಗುಡ್ಡ ಹಣಮಾಪುರದ ಪೂಜ್ಯ ಅಮರೇಶ್ವರ ಮಹಾರಾಜರು ಮಾತನಾಡಿದರು.ಉಪನ್ಯಾಸಕಿ ಪ್ರೀಯಂವದಾ ಹುಲಗಬಾಳಿ ಸಾವಿತ್ರಿಬಾಯಿ ಫುಲೆ ಪುಸ್ತಕವನ್ನು ಪರಿಚಯಿಸಿದರು.

ಬಳಿಕ ಸಾವಿತ್ರಿಬಾಯಿ ಫುಲೆ ಅನುವಾದ ಕೃತಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.  ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಜೆ.ಪಿ. ದೊಡಮನಿ, ಪ್ರಧಾನಮಂತ್ರಿ ಉದ್ಯೋಗ ಕೇಂದ್ರದ ಪ್ರವೀಣಕುಮಾರ ತುಬಚಿ, ಪ್ರಭಾವತಿ ಬೋರಗಾಂವಕರ, ಶಶಿಕಾಂತ ದೊಡಮನಿ, ಎಸ್.ಕೆ. ಹೊಳೆಪ್ಪನವರ, ಶಿವಪುತ್ರ ಯಾದವಾಡ, ಪ್ರಕಾಶ ಮಹಾಜನ, ರೊಹಿಣಿ ಯಾದವಾಡ, ಕೈಲಾಸ ಮದಬಾವಿ, ವಿ.ಬಿ. ಮಠಪತಿ, ರಾಮಣ್ಣ ದೊಡ್ಡನಿಂಗಪ್ಪಗೋಳ, ಸಂತೋಷ ಬಡಕಂಬಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಸುದ್ದಿ ಓದಿ