ಶ್ರಾವಣ ಮಾಸ ಅತ್ಯಂತ ಮಹತ್ವ ಹೊಂದಿದೆ: ಮುರುಘೇಂದ್ರ ಶ್ರೀ
ಸಿಂದಗಿ 11: ಶ್ರಾವಣ ಮಾಸ ಅತ್ಯಂತ ಮಹತ್ವ ಹೊಂದಿದೆ ಎಂದು ಬೀಳೂರಿನ ವಿರಕ್ತಮಠದ ಮುರುಘೇಂದ್ರ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಉದ್ಯಮಿ ಬಿ.ಟಿ. ಸುಣಗಾರ ಅವರ ಮನೆಗೆ ಶ್ರಾಮಣ ಮಾಸದ ನಿಮಿತ್ತ ಆಗಮಿಸಿದ ಶ್ರೀಗಳು ಭಕ್ತರಿಗೆ ಆರ್ಶೀವದಿಸಿ ಅವರು ಆಶೀರ್ವಚನ ನೀಡಿದರು.
ಶ್ರಾಮವಣ ಮಾಸದಲ್ಲಿ ಸಾಲು-ಸಾಲು ಹಬ್ಬಗಳು ಶುರುವಾಗುವುದು. ಶ್ರಾಮವಣ ಮಾಸದ ಪ್ರತಿ ದಿನವು ಹಬ್ಬದ ದಿನವಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದರು.ಸಾತ್ವಿಕ ಜೀವನ ಸಾಗಿಸಬೇಕು. ಆಗ ಸುಖ ಜೀವನ ನಮ್ಮದಾಗುತ್ತದೆ ಎಂದು ಹೇಳಿದರು.
ಮುರುಘೇಂದ್ರ ಮಹಾಸ್ವಾಮಿಗಳಿಗೆ ಪೂಜ್ಯನೀಯ ಸನ್ಮಾನ ಮಾಡಿ ಆಶೀರ್ವಾದ ಪಡೆದರು. ಅಶೋಕ ಸುಣಗಾರ, ಅಪ್ಪಾಜಿ ಸುಣಗಾರ ಸೇರಿದಂತೆ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
11ಎಸ್‌ಎನ್‌ಡಿ1