ಕಾಮರ್ಿಕ ಇಲಾಖೆಯ ವೃತ್ತಿ ಕೌಶಲ್ಯ ತರಬೇತಿ ಸಮಾರೋಪಕ್ಕೆ ತೆರೆ
ಬಳ್ಳಾರಿ 13: ನೋಂದಾಯಿತ ಕಟ್ಟಡ ಕಾಮರ್ಿಕರು ವೃತ್ತಿ ಕೌಶಲ್ಯ ಕುರಿತು ಅತ್ಯಂತ ಸಮರ್ಪಕವಾಗಿ ತರಬೇತಿ ಪಡೆದುಕೊಂಡು ಅದನ್ನು ತಮ್ಮ ವೃತ್ತಿಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸ ಮಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಎಸ್.ಬಿ.ಹಂದ್ರಾಳ್ ಅವರು ಹೇಳಿದರು.
ಜಿಲ್ಲಾ ಕಾಮರ್ಿಕ ಇಲಾಖೆ ಮತ್ತು ನಿಮರ್ಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ನಗರದ ನಿಮರ್ಿತಿ ಕೇಂದ್ರದ ಕಚೇರಿ ಆವರಣದಲ್ಲಿ ಗುರುವಾರ ಶ್ರಮ ಸಾಮಥ್ರ್ಯ ಯೋಜನೆ ಅಡಿ "ಟ್ರೈನಿಂಗ್ ಕಂ ಟೂಲ್ ಕಿಟ್ ಕಾರ್ಯಕ್ರಮ ಮತ್ತು ವೃತ್ತಿ ಕೌಶಲ್ಯ ತರಬೇತಿ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಕಟ್ಟಡ ಕಾಮರ್ಿಕರು ಹಾಗೂ ನೋಂದಾಯಿತ ಕಾಮರ್ಿಕರಿಗಾಗಿ ಸರಕಾರದಿಂದ ಅನೇಕ ಸೌಲಭ್ಯಗಳಿದ್ದು,ಅವುಗಳ ಬಗ್ಗೆ ತಾವು ಸಮರ್ಪಕವಾಗಿ ತಿಳಿದುಕೊಳ್ಳಬೇಕು ಮತ್ತು ಅವುಗಳನ್ನು ಪಡೆದುಕೊಳ್ಳಬೇಕು ಎಂದು ಹೇಳಿದ ನ್ಯಾ.ಹಂದ್ರಾಳ್ ಅವರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ಕಾಮರ್ಿಕರು ಸೇರಿದಂತೆ ವಿವಿಧ ಅಸಂಘಟಿತ ಕಾಮರ್ಿಕರಿಗೆ ಕಾನೂನು ಅರಿವು ಮೂಡಿಸುವಲ್ಲಿ ಅನೇಕ ವರ್ಷಗಳಿಂದ ಶ್ರಮಿಸುತ್ತಿದೆ ಎಂದರು.
ಕಾಮರ್ಿಕ ನಿರೀಕ್ಷಕ ರವಿದಾಸ್ ಅವರು ಕಾಮರ್ಿಕ ಇಲಾಖೆಯಿಂದ ಸಿಗುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿದರು.
ನಿಮರ್ಿತಿ ಕೇಂದ್ರದ ಯೋಜನಾ ನಿದರ್ೇಶ ಅನಿಲ್ ಕುಮಾರ್ ಕುಲಕಣರ್ಿ ಮಾತನಾಡಿದರು. ಜಿಲ್ಲಾ ಕಾಮರ್ಿಕ ಇಲಾಖೆಯ ಕಾರ್ಯನಿವರ್ಾಹಕ ಆರ್.ಎನ್.ಶಿವರಾಜ ನಿರೂಪಿಸಿ ವಂದಿಸಿದರು. ಮಂಜುಳಾ ಡಿ.ವಿ., ಮಿತಿಲಾ ರೆಡ್ಡಿ, ನಡ್ಲಿಕೇರಿ ನಾಗರಾಜ ಸೇರಿದಂತೆ ನೋಂದಾಯಿತ ಕಟ್ಟಡ ಕಾಮರ್ಿಕರು ಇದ್ದರು. ಈ ಸಂದರ್ಭದಲ್ಲಿ ನೋಂದಾಯಿತ ಕಟ್ಟಡ ಕಾಮರ್ಿಕರಿಗೆ ಪರಿಕರಗಳನ್ನು ವಿತರಿಸಲಾಯಿತು.