ವಿಜೃಂಭಣೆಯಿಂದ ಜರುಗಿದ ಯೋಗಾಶ್ರಮದ ನಿತ್ಯ ಸತ್ಸಂಗದ ದಶಮಾನೋತ್ಸವ
ಗೋಕಾಕ್ 25: ತಾಲೂಕಿನ ಕೊಣ್ಣೂರಿನಲ್ಲಿ ಓಂ ಆಧ್ಯಾತ್ಮಿಕ ಹಾಗೂ ಯೋಗಾಶ್ರಮದ ನಿತ್ಯ ಸತ್ಸಂಗದ ದಶಮಾನೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ಜರುಗಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ಮ.ಘ.ಚ.ಡಾ.ಪವಾಡೇಶ್ವರ ಮಹಾಸ್ವಾಮಿಗಳು ಮರಡೀಮಠ. ಉದ್ಘಾಟಕರಾಗಿ ದಾಸೋಹಿ ಜಗದ್ಗುರು ಶಿವಲಿಂಗೇಶ್ವರ ಮಹಾಸ್ವಾಮಿಗಳು ನಿಡಸೋಸಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಯ್ಯ ಮಹಾಸ್ವಾಮಿಗಳು ಶಿವಾನಂದ ಮಠ ಘೋಡಗೇರಿ ಮುಖ್ಯ ಅತಿಥಿಗಳಾಗಿ ಜನ ಅಬ್ದುಲ್ ಖಾದರ್ ಪಿರಜಾದೆ ಕೊಣ್ಣೂರ ಭಂತೆ ವರಜ್ಯೋತಿ ಭೌದವಿಹಾರ ಬೀದರ ರೆವೆರೆಂಡ್ ಎಂ ಜಗದೀಶ್ ಅಧ್ಯಕ್ಷರು ಕ್ರೈಸ್ತ ಸಮುದಾಯ ಟ್ರಸ್ಟ್ ಗೋಕಾಕ್ ಎಸ್ ವಿ ಸೌದತ್ತಿ ಜೀಸಸ್ ರೈಚೆಸ್ನೆಸ ಟ್ರಸ್ಟಿನ ಸಂಸ್ಥಾಪಕರು ಅತಿಥಿ ಉಪನ್ಯಾಸಕರಾಗಿ ಪ್ರೊ ಶಾಂತಿನಾಥ್ ದಿಬ್ಬದ ವಿಶ್ರಾಂತ ಕನ್ನಡ ಪ್ರಾಧ್ಯಾಪಕರು ಧಾರವಾಡ ಸಯ್ಯದ್ ಬಶೀರ್ ಅಲಿ ಎಲ್ಐಸಿ ಡೆವಲಪ್ಮೆಂಟ್ ಆಫೀಸರ್ ಗೋಕಾಕ್ ಅತಿಥಿಗಳಾಗಿ ಅಪ್ಪಾಸಾಹೇಬ್ ಜ ಪಾಟೀಲ್ ಎಸ್ ಕೆ ಎಸ್ ಸಮಿತಿ ಕೊಣ್ಣೂರು ಮರಡಿಮಠ ಕುಮಾರ್ ಎಸ್ ಕರನಿಂಗ ನೀವ್ರತ್ತ ಎಸ್ ಪಿ ನಿರ್ದೇಶಕರು ಎಸ್ ಕೆ ಎಸ್ ಸಮಿತಿ ಕೊನ್ನೂರು ಮರಡಿಮಠ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವದರ ಮೂಲಕ ಪ್ರಾಂಭಿಸಲಾಯಿತು ಶಿಕ್ಷಕರಾದ ಪ್ರಕಾಶ್ ಬಡೇಸ್ ಗೋಳ್ ಸರ್ ಕಾರ್ಯಕ್ರಮದ ಮುಖ್ಯ ಕಾರ್ಯನಿರ್ವಾಹಕರಾಗಿ ಶಿಕ್ಷಕರ ವೃತ್ತಿಯಂತದ್ದು ಶಿಕ್ಷಕರಿಂದ ಆಗ ತಕ್ಕಂತ ಕಾರ್ಯಗಳು ಏನು ಶಿಕ್ಷಕರು ಸಮಾಜ ಸುಧಾರಕರಷ್ಟೇ ಅಲ್ಲ ವ್ಯಕ್ತಿತ್ವವನ್ನು ಬದಲಾಯಿಸುವಂತ ಶಕ್ತಿ ಶಿಕ್ಷಕರಲ್ಲಿದೆ ಎಂಬುದಾಗಿ ಮಾತನಾಡಿದರು.
ಶ್ರೀಕುಮಾರ್ ಎಸ್ ಕರಣಿಂಗ್ ಅವರು ನೀವು ನನ್ನ ಆಹ್ವಾನಿಸಿ ಅರ್ಥಪೂರ್ಣ, ಅರ್ಥಗರ್ಭಿತ, ಸಮಯೋಚಿತ ಸರ್ವಧರ್ಮ ಸಮ್ಮೇಳನ ಸಮಾರಂಭದಲ್ಲಿ ಭಾಗವಹಿಸಲಿಕ್ಕೆ ಎಲ್ಲರೊಂದಿಗೆ ಬೆರೆಯಲಿಕ್ಕೆ ಅವಕಾಶ ಮಾಡಿಕೊಟ್ಟ ನಿಮಗೆ ಹೃತ್ಪೂರ್ವಕವಾಗಿ ವಂದನೆಗಳನ್ನು ತಿಳಿಸುತ್ತೇನೆ ಎಂದು ಹೇಳಿ ಭಾವೈಕ್ಯದ ಬಗ್ಗೆ ಅರ್ಥಪೂರ್ಣವಾಗಿ ಮಾತನಾಡಿದರು. ಶಿವಲಿಂಗೇಶ್ವರ ಮಹಾಸ್ವಾಮಿಗಳು ಇವರು ಕೂಡ ಮಾನವನ ಧರ್ಮ ಭಾವೈಕ್ಯ ಏನು ಎಂಬುದರ ಬಗ್ಗೆ ಎಲ್ಲರೊಂದಿಗೆ ಪ್ರೀತಿ ಅನ್ಯೋನ್ಯತೆಯಿಂದ ಇರಬೇಕು ಹಾಗೂ ಈ ಯೋಗಾಶ್ರಮ ನಡೆದು ಬಂದ ರೀತಿ ದಶಮಾನೋತ್ಸವದ ಶುಭಾಶಯಗಳು ಅದರ ಜೊತೆಗೆ ನಿತ್ಯ ಸತ್ಸಂಗದ ದಶಮಾನೋತ್ಸವ ಶರಣರ ಅನುಭವಾಮೃತ ಎಂಬ ಪುಸ್ತಕವನ್ನು ಕೂಡ ಎಲ್ಲ ಧರ್ಮ ಗುರುಗಳಿಂದ ಗ್ರಂಥ ಬಿಡುಗಡೆ ಮಾಡಲಾಯಿತು ಪ್ರೊಫೆಸರ್ ಶಾಂತಿನಾಥ ದಿಬ್ಬದ ಶಾಂತಿ ಧರ್ಮದ ಬಗ್ಗೆ ಉದಾಹರಣೆಗಳೊಂಗೆ ಅರ್ಥಗರ್ಭೀತವಾಗಿ ಮಾತನಾಡಿದರು.
ರೆವರೆಂಡ್ ಎಂ ಜಗದೀಶ್ ಅಧ್ಯಕ್ಷರು ಕ್ರೈಸ್ತ ಸಮುದಾಯ ಟ್ರಸ್ಟ ಗೋಕಾಕ ಇವರುಗಳು ಕೂಡ ಧರ್ಮ ಎಂದರೇನು ಹೆತ್ತ ತಂದೆ ತಾಯಿಗಳನ್ನು ಸನ್ಮಾನಿಸುವುದೇ ಮೂಲ ಧರ್ಮ ಈ ಧರ್ಮವನ್ನು ಬಿಟ್ಟು ಬೇರೆ ಯಾವ ಧರ್ಮಗಳು ಇಲ್ಲ ಅನ್ನುವುದರ ಬಗ್ಗೆ ಸಂಪೂರ್ಣ ವಿವರ ದೊಂದಿಗೆ ಮಾತನಾಡಿದರು ಯಾಕೆ ಅಂತಂದ್ರೆ ತಾಯಿಯ ಗರ್ಭದಿಂದ ಬಂದು 25 ವರ್ಷಗಳ ಕಾಲ ತಂದೆ ತಾಯಿಗಳ ಜೊತೆಗಿದ್ದು ಆತನು ಕುಟುಂಬಸ್ಥ ನಾದ ನಂತರ ಹೆತ್ತವರನ್ನು ವ್ರದ್ದಾಶ್ರಮಕ್ಕೆ ಕಳಿಸುವಂತಹ ಸ್ಥಿತಿಗತಿಗಳು ಲೋಕದಲ್ಲಿ ವಾಸ್ತವದಲ್ಲಿ ಇದೆ ಇಂಥ ಸಂದರ್ಬದಲ್ಲಿ ಹೇಗೆ ಗೌರವ ಮಾನ್ಯತೆ ಯಾವ ರೀತಿ ಕೊಡಬೇಕು ಎಂಬುದನ್ನ ಮಾರ್ಮಿಕವಾಗಿ ಮಾತನಾಡಿದರು ಬಿಷಪ್ ಎಸ್ ವಿ ಸೌದತ್ತಿ ಅವರು ಕೂಡ ಒಂದು ಹೂವು ಯಾವ ರೀತಿಯ ಒಂದು ಪರಿಮಳ ಸುಗಂಧ ಅದಕ್ಕೆ ಎಷ್ಟು ಸೌಂದರ್ಯವಿದ್ದರೂ ದೇವರ ಪಾದಕ್ಕೆ ಸೇರಬೇಕು ಎನ್ನುವಂತಹ ಒಂದು ಕುತೂಹಲ ಆ ಹೂವಿಗೆ ಇರುತ್ತದೆಎನ್ನುವುದರ ಬಗ್ಗೆ ಅದೇ ರೀತಿ ಮನುಷ್ಯನು ತಿಳುಕೊಳ್ಳಬೇಕು ನಾವು ದೇವರಿಗೆ ಏನಾಗಿದೆ ಎಂಬುದಾಗಿ ಜೀವಿಸಿದರೆ ನಿಜವಾಗಲೂ ಆ ಒಂದು ಜೀವನ ಸಾರ್ಥಕವಾಗುತ್ತದೆ ಎಂದು ಮಾತನಾಡಿದರು ಮತ್ತು ಕಾರ್ಯಕ್ರಮದಲ್ಲಿ ಸುಮಾರು ಒಂದು ಸಾವಿರ ಜನ ಭಕ್ತಾದಿಗಳು ಸೇರಿ ಬಂದಿದ್ದರು ಕಾರ್ಯಕ್ರಮದ ಮುಖ್ಯ ಅಜೆಂಡ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ಒಂದು ಶಾಂತಿ ಸಂದೇಶ ಸಮಾಧಾನ ಎಲ್ಲರಿಗೂ ಯಾವ ರೀತಿ ಸಿಗಬೇಕೆನ್ನುವ ವಿಚಾರದ ಬಗ್ಗೆ ಸರ್ವ ಧರ್ಮದ ಗುರುಗಳು ಅರ್ಥಪೂರ್ಣವಾಗಿ ಮಾತನಾಡಿದರು. ಕಾರ್ಯಕ್ರಮಕ್ಕೆ ಕೊಣ್ಣೂರಿನ ಹಾಗೂ ಇನ್ನುಳಿದ ಗ್ರಾಮದ ಜನ ಸೇರಿ ಬಂದಿದ್ದರು ಕಾರ್ಯಕ್ರಮ ಅದ್ಭುತವಾಗಿ ನಡೆಯಿತು ಈ ಕಾರ್ಯಕ್ರಮದ ರೂವಾರಿಗಳಾಗಿರುವಂಥ ಶಿಕ್ಷಕ ಪ್ರಕಾಶ್ ಬಡೇಸರ್ ಕಾರ್ಯಕ್ರಮದ ಮುಖ್ಯ ನಿರ್ವಾಹಕರಾಗಿ ಸುರೇಶ್ ಕುಂಬಾರವರು ಕಾರ್ಯಕ್ರಮ ನಿರೂಪಿಸಿದರು ಹಾಗೂ ಕಾರ್ಯಕ್ರಮದಲ್ಲಿ ದಾನಿಗಳಿಗೆ ಶಾಲ್ ಮತ್ತು ಫಲ ಮಾಲೆಗಳನ್ನು ಹಾಕಿ ಗೌರವಿಸಲಾಯಿತು ಶರಣರ ಅನುಭವಾಮೃತ ಪುಸ್ತಕ ಕೂಡ ಬಿಡುಗಡೆಗೊಳಿಸಲಾಯಿತು.
ಈ ಒಂದು ಕಾರ್ಯಕ್ರಮಕ್ಕೆ ಯಾರ್ಯಾರು ದಾನಿಗಳಾಗಿ ಬಂದಿದ್ದರು, ಯಾರ್ಯಾರು ಕೈ ಜೋಡಿಸಿ ಕಾರ್ಯಕ್ರಮಕ್ಕೆ ಸಹಾಯ ಮಾಡಿದರು ಅವರನ್ನು ಗೌರವಿಸಲಾಯಿತು ಮತ್ತು ಕಾರ್ಯಕ್ರಮದ ಮಧ್ಯದಲ್ಲಿ ಕುಮಾರಿಯರಿಂದ ಭರತನಾಟ್ಯವನ್ನು ಏರಿ್ಡಸಲಾಗಿತ್ತು ಮಲ್ಲಯ್ಯ ಮಹಾಸ್ವಾಮಿಗಳು ಶಿವಾನಂದ ಮಠ ಗೋಡ್ಗೇರಿ ಇವರಿಂದ ಆಶೀರ್ವಚನವನ್ನು ಬಹಳ ಅರ್ಥಗರ್ಭಿತವಾಗಿ ಎಲ್ಲರ ಉಪನ್ಯಾಸದ ಒಂದೊಂದು ವಿಚಾರಗಳನ್ನು ವಿವರಿಸಿ ಇದು ಹೇಗೆ ಯಾರ್ಯಾರು ಯಾವ ರೀತಿ ಉಪನ್ಯಾಸ ಕೊಟ್ಟರು ಅನ್ನೋದರ ಬಗ್ಗೆ ಸಂಪೂರ್ಣವಾದ ವಿವರಣೆಯೊಂದಿಗೆ ಆಶೀರ್ವಚನ ನೀಡಿ ಕಾರ್ಯಕ್ರಮವನ್ನು ಅಂತ್ಯಗೊಳಿಸಲಾಯಿತು