ಬೆಳಗಾವಿ

ಶಿಕ್ಷಕ ಯುವಜನತೆಗೆ ಸರಿಯಾದ ದಿಕ್ಕು ತೋರಿಸುವ ಮಾರ್ಗದರ್ಶಕ: ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ

ಶಿಕ್ಷಕ ಯುವಜನತೆಗೆ ಸರಿಯಾದ ದಿಕ್ಕು ತೋರಿಸುವ ಮಾರ್ಗದರ್ಶಕ: ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ
Teachers are guides who show the right direction to the youth: Vice-Chancellor Prof. C.M. Thyagaraj

                ಬೆಳಗಾವಿ  17: ಎನ್‌ಎಸ್‌ಎಸ್ ಕೇವಲ ಒಂದು ಪಠ್ಯೇತರ ಚಟುವಟಿಕೆಯಲ್ಲ, ಯುವಕರು ಮೌಲ್ಯಯುತವಾದ ಸತ್ವ, ತತ್ವಗಳಿಂದ ತುಂಬಿದ ನಿಸ್ವಾರ್ಥ ಬದಕಿನ ಜೊತೆಗೆ ಸೇವಾ ಮನೋಭಾವ, ಶಿಸ್ತು, ಕೌಶಲ್ಯಾಭಿವೃದ್ಧಿ ಮತ್ತು ರಾಷ್ಟ್ರೇ​‍್ರಮವನ್ನು ಬೆಳೆಸುವ ಶಕ್ತಿಶಾಲಿ ವೇದಿಕೆಯಾಗಿದೆ ಎಂದು ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಎಂ. ತ್ಯಾಗರಾಜ ಅವರು ನುಡಿದರು.

             ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ, ಬೆಳಗಾವಿಯ ಕಿತ್ತೂರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಹಾಗೂ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಇವುಗಳ ಸಂಯುಕ್ತಾಶ್ರಯದಲ್ಲಿ ನೆಹರು ನಗರದ ಡಾ. ವಿ.ಡಿ. ಪಾಟೀಲ ಸಭಾಭವನದಲ್ಲಿ ಮಂಗಳವಾರ ಜರುಗಿದ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿಗಳಿಗಾಗಿ ಹಮ್ಮಿಕೊಂಡಿರುವ ಐದು ದಿನಗಳ ತರಬೇತಿ ಮತ್ತು ಪುನಶ್ಚೇತನ ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

              ಕಾರ್ಯಕ್ರಮಾಧಿಕಾರಿಗಳು ಕೇವಲ ಶಿಕ್ಷಕರಾಗಿರದೆ, ಯುವಜನತೆಗೆ ಸರಿಯಾದ ದಿಕ್ಕು ತೋರಿಸುವ ಮಾರ್ಗದರ್ಶಕರಾಗಬೇಕು. ಈ ಐದು ದಿನಗಳ ತರಬೇತಿಯಲ್ಲಿ ಪಡೆಯುವ ಜ್ಞಾನವನ್ನು ತಮ್ಮ ಕಾಲೇಜುಗಳಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಸಮಾಜಮುಖಿ ಕಾರ್ಯಕ್ರಮಗಳನ್ನು ರೂಪಿಸಬೇಕು, ಎಂದು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಕುಲಪತಿ ಡಾ. ಸಂದೀಪ್ ಶ್ರೀವಾಸ್ತವ ಮಾತನಾಡಿ, ಇಂದಿನ ಯುವಪೀಳಿಗೆಯಲ್ಲಿ ಅಪಾರ ಸಾಮರ್ಥ್ಯವಿದೆ.

             ಅದನ್ನು ಸಕಾರಾತ್ಮಕವಾಗಿ ಸಮಾಜದ ಅಭಿವೃದ್ಧಿಗೆ ಬಳಸಿಕೊಳ್ಳುವ ಜವಾಬ್ದಾರಿ ಎನ್‌ಎಸ್‌ಎಸ್ ಅಧಿಕಾರಿಗಳ ಮೇಲಿದೆ. ಸ್ವಚ್ಛತೆ, ಪರಿಸರ ಸಂರಕ್ಷಣೆ, ಆರೋಗ್ಯ ಜಾಗೃತಿ ಮತ್ತು ಗ್ರಾಮೀಣಾಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಸ್ವಯಂಸೇವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ಸದೃಢ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು. ಗೌರವ ಅತಿಥಿಗಳಾಗಿ ಆಗಮಿಸಿದ್ದ ಎನ್‌ಎಸ್‌ಎಸ್ ತರಬೇತಿ ಕಾರ್ಯಕ್ರಮದ ನಿರ್ದೇಶಕ ಪ್ರೊ. ಜಿ. ಬಿ. ಶಿವರಾಜು ಮಾತನಾಡಿ, ಕಾಲಕ್ಕೆ ತಕ್ಕಂತೆ ಎನ್‌ಎಸ್‌ಎಸ್ ಕಾರ್ಯವೈಖರಿಯಲ್ಲೂ ಹೊಸತನ ತರುವ ಅಗತ್ಯವಿದೆ.                 ಕಾರ್ಯಕ್ರಮಾಧಿಕಾರಿಗಳ ವೃತ್ತಿಪರ ಕೌಶಲ್ಯಗಳನ್ನು ವೃದ್ಧಿಸಲು ಮತ್ತು ಯೋಜನೆಯ ಆಶಯಗಳನ್ನು ತಳಮಟ್ಟಕ್ಕೆ ತಲುಪಿಸಲು ಇಂತಹ ಪುನಶ್ಚೇತನ ಕಾರ್ಯಾಗಾರಗಳು ಪೂರಕವಾಗಿವೆ ಎಂದು ತಿಳಿಸಿದರು.ಮತ್ತೋರ್ವ ಗೌರವ ಅತಿಥಿ, ಸಹಾಯಕ ನಿರ್ದೇಶಕ ಡಾ. ಕೆ. ಎಂ. ವೀರಯ್ಯ ಮಾತನಾಡಿ, ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಲ್ಲಿ ಕಾರ್ಯಕ್ರಮಾಧಿಕಾರಿಗಳ ಪಾತ್ರ ನಿರ್ಣಾಯಕವಾಗಿದೆ.

           ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದು ಮಾದರಿ ಘಟಕಗಳನ್ನು ರೂಪಿಸಿ ಎಂದು ಸಲಹೆ ನೀಡಿದರು.ಕು. ರೇಖಾ ಆಗಾರಿ ಹಾಗೂ ಸಂಗಡಿಗರು ಎನ್‌ಎಸ್‌ಎಸ್ ಗೀತೆ ಪ್ರಸ್ತುತಪಡಿಸಿದರು. ಕಿರಾಚವಿವಿ ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ. ಕನಕಪ್ಪ ಪೂಜಾರ ಸ್ವಾಗತಿಸಿದರು. ಡಾ. ಸಂಜೀವ ತಳವಾರ, ಅನೀಲ ತಳ್ಳಿ ನಿರೂಪಿಸಿದರು. ಕೆಎಲ್‌ಇ ವಿವಿ ಎನ್‌ಎಸ್‌ಎಸ್ ಕೋಶದ ಸಂಯೋಜನಾಧಿಕಾರಿ ಡಾ. ಅಶ್ವಿನ ನರಸಣ್ಣವರ ವಂದಿಸಿದರು. 


ಸುದ್ದಿ ಓದಿ