ಗಂಗಾವತಿ

ಶಿಕ್ಷಕರ ದಿನಾಚರಣೆ :ಉಚಿತ ಆರೋಗ್ಯ ತಪಾಸಣಾ ಕಾರ್ಯಕ್ರಮ

ಶಿಕ್ಷಕರ ದಿನಾಚರಣೆ :ಉಚಿತ ಆರೋಗ್ಯ ತಪಾಸಣಾ  ಕಾರ್ಯಕ್ರಮ

ಗಂಗಾವತಿ.05 :  ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಅಂಗವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಹಾಗೂ ಉಪ ವಿಭಾಗ ಆಸ್ಪತ್ರೆ ಗಂಗಾವತಿ ಹಾಗೂ ಕ್ಷಯರೋಗ ವಿಭಾಗ ಹಾಗೂ ಕರ್ನಾಟಕ ಆರೋಗ್ಯ ಸಂವರ್ಧನ ಪ್ರತಿಷ್ಠಾನ ಸಂಸ್ಥೆಯ ವತಿಯಿಂದ ಉಚಿತ ಆರೋಗ್ಯ ತಪಾಸಣಾಶಿಬಿರವನ್ನುಹಮ್ಮಿಕೊಳ್ಳಲಾಯಿತು ಈ ಶಿಬಿರದಲ್ಲಿ 170 ಶಿಕ್ಷಕ ಹಾಗೂ ಶಿಕ್ಷಕಿಯರಿಗೆ ಬಿಪಿ ಸುಗರ್ ಮತ್ತು ಸೇರಿದಂತೆ ಶಿಕ್ಷಕರ ದಿನಾಚರಣೆಯಲ್ಲಿ ಭಾಗಿಯಾದ ಗಂಗಾವತಿ ತಾಲೂಕು ಕನಕಗಿರಿ ಕಾರಟಗಿ ಆಗಮಿಸಿದ ಶಿಕ್ಷಕರು ಹಾಗೂ ಅವರ ಕುಟುಂಬದವರಿಗೆ ಆರೋಗ್ಯ ತಪಾಸಣೆ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಕ್ಷಯ ಮೇಲ್ವಿಚಾರಕರಾದ ಮಲ್ಲಿಕಾರ್ಜುನ, ರಾಘವೇಂದ್ರ ಜೋಶಿ, ಹಿರಿಯ ಮೇಲ್ವಿಚಾರಕರಾದ ಹುಸೇನ್ ಭಾಷ, ಕೆ ಎಚ್ ಪಿ ಟಿ ಸಂಸ್ಥೆಯ ಖಾಸಂಬಿ, ಹನುಮಂತಪ್ಪ, ಉಮಾ ಸೇರಿದಂತೆ ಇತರರು ಇದ್ದರು

ಸುದ್ದಿ ಓದಿ