ಜು.7 ರೊಳಗೆ ಹೆಸರನ್ನು ನೋಂದಾಯಿಸಿ: ಶಿರಗನ್ನವರ
ತಾಲೂಕ ಬಣಜಿಗ ಸಮಾಜದಿಂದ ಪ್ರತಿಭಾ ಪುರಸ್ಕಾರ
ಜಮಖಂಡಿ 02: ಜು.13 ರಂದು ತಾಲೂಕ ಬಣಜಿಗ ಸಮಾಜದ 2023-24 ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ 85ಅಕಿಂತ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭ ದಾನಮ್ಮದೇವಿ ಸಮುದಾಯ ಭವನದಲ್ಲಿ ಜರುಗಲಿದೆಂದು ತಾಲೂಕ ಬಣಜಿಗ ದೈವ ಮಂಡಳಿ ಅಧ್ಯಕ್ಷ ಅಶೋಕ ಶಿರಗನ್ನವರ ಹೇಳಿದರು.
ನಗರದ ಸರಕಾರಿ ಪ್ರವಾಸಿ ಮಂದಿರ ರಮಾ ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ85ಅ ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಜು.7 ರೊಳಗೆ ತಮ್ಮ ಹೆಸರನ್ನು ನಮ್ಮ ಸೊಸೈಟಿಗಳಲ್ಲಿ ನೋಂದಾಯಿಸಬೇಕು. ವಿದ್ಯಾರ್ಥಿಗಳಿಗೆ ಮಾತ್ರ ಸನ್ಮಾನ ಮಾಡಲಾಗುವುದು ಹೊರತು ಪಾಲಕರಿಗೆ ಸನ್ಮಾನ ಮಾಡಲಾಗುವುದಿಲ್ಲ. ಹೆಸರು ನೋಂದಾಯಿಸಲು ಇಚ್ಚಿಸಲ್ಪಡುವ ವಿದ್ಯಾರ್ಥಿಗಳು ಒಂದು ಫೋಟೋ, ಆಧಾರ್ ಕಾರ್ಡ್, ಅಂಕಪಟ್ಟಿ, ನಕಲು ಪ್ರತಿ ಸಮೇತ ಕಛೇರಿಗೆ ಭೇಟಿ ನೀಡಬೇಕು ಎಂದರು.
ಪ್ರತಿಭಾ ಪುರಸ್ಕಾರ ಸಮಿತಿಯ ಅಧ್ಯಕ್ಷ ಸಂಗಮೇಶ ಹಲವಾಯಿ ಮಾತನಾಡಿ, ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಮುತ್ತಿನಕಂತಿ ಹಿರೇಮಠ, ಸಂಸದ ಜಗದೀಶ ಶೆಟ್ಟರ, ದಾನಮ್ಮ ದೇವಿ ಟ್ರಸ್ಟ್ ಕಮಿಟಿ ಅಧ್ಯಕ್ಷ ಬಿ.ಆರ್.ಅನಂತಪುರ, ಸಂಸದ ಪಿ, ಸಿ, ಗದ್ದಿಗೌಡರ, ಶಾಸಕ ಜಗದೀಶ ಗುಡುಗುಂಟಿ, ಮಾಜಿ ಶಾಸಕ ಆನಂದ ನ್ಯಾಮಗೌಡ, ಬಣಜಿಗ ದೈವ ಮಂಡಳಿ ಅಧ್ಯಕ್ಷ ಅಶೋಕ ಶಿರಗನ್ನವರ, ಚನ್ನಪ್ಪ ಬಾಂಗಿ, ನಂದಾ ಬಾಂಗಿ, ಜೀವಮಾನ ಸಾಧನೆ ಪುರಸ್ಕಾರಕ್ಕೆ ಆಯ್ಕೆಯಾದ ನಿವೃತ್ತ ಪ್ರಾಚಾರ್ಯ ಸಿ.ಎಸ್.ಝಳಕಿ, ಗಿರೆಪ್ಪ ಮಲ್ಲಪ್ಪ ಬಂದರ ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಸವರಾಜ ಕೋತಿನ, ಶಿವಾನಂದ ಕುಲಹಳ್ಳಿ, ಗೀರೀಶ ಬಾಂಗಿ, ಗುರುಲಿಂಗಪ್ಪ ಕುಂಚನೂರ, ಬಸವರಾಜ ಬಾಗೇವಾಡಿ, ಮಲ್ಲು ಪಟ್ಟಣಶೆಟ್ಟಿ, ಪ್ರಭು ಕಲ್ಯಾಣಶೆಟ್ಟಿ, ರಮೇಶ ಉಪ್ಪಿನ, ಮಲ್ಲಪ್ಪ ಜೈನಾಪುರ, ಮಲಕಾಜಪ್ಪ ಇಂಗಳಗಿ, ಸೋಮು ಶೀಲವಂತರ, ಸಚೀನ ಚನಾಳ, ಮುರಿಗೆಪ್ಪ ಕುರಿ, ಸುನೀಲ ಮುರಗೋಡ ಸೇರಿದಂತೆ ಅನೇಕರು ಇದ್ದರು.