ಗಂಗಾವತಿ

ಬಕ್ರೀದ್ ತ್ಯಾಗ ಬಲಿದಾನಗಳ ಸಂಕೇತ:ಶಾಸಕ ಗಾಲಿ ಜನಾರ್ಧನ ರೆಡ್ಡಿ

ಬಕ್ರೀದ್ ತ್ಯಾಗ ಬಲಿದಾನಗಳ ಸಂಕೇತ:ಶಾಸಕ ಗಾಲಿ ಜನಾರ್ಧನ ರೆಡ್ಡಿ

ಗಂಗಾವತಿ: ಬಕ್ರೀದ್ ಮತ್ತು ರಂಜಾನ್ ಆಚರಣೆ ಮುಸ್ಲಿಂರ ಪವಿತ್ರ ಹಬ್ಬಗಳಾಗಿದ್ದು, ಬಕ್ರೀದ್ ತ್ಯಾಗ ಬಲಿದಾನಗಳ ಸಂಕೇತವಾಗಿದೆ ಎಂದು ಶಾಸಕ ಗಾಲಿ ಜನಾರ್ಧನರೆಡ್ಡಿ ತಿಳಿಸಿದರು. ಜಯನಗರದ ಈದ್ಗಾ ಮೈದಾನದಲ್ಲಿ ಗುರುವಾರ ಮುಸ್ಲಿಂ ಸಮಾಜದವರು ಹಮ್ಮಿಕೊಂಡಿದ್ದ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡು ಅವರು ನಂತರ ಮಾತನಾಡಿದರು. 

ಇಸ್ಲಾಂ ಪ್ರೀತಿ, ಸಹನೆ ಮತ್ತು ಮಾನವೀಯತೆಯನ್ನು ಹೇಳುತ್ತದೆ. ಹಿಂದು ಮುಸ್ಲಿಂರು ಸಹೋದರರಂತೆ ಜೀವನ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು. ಮುಸ್ಲಿಂ ಬಾಂಧವರಿಗೆ ರೆಡ್ಡಿ ಶುಭಾಷಯ ಕೋರಿದರು. 

ಸಾಮೂಹಿಕ ಪ್ರಾರ್ಥನೆಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿಯವರು ಸಹ ಪಾಲ್ಗೊಂಡಿದ್ದರು. ರೆಡ್ಡಿ ಜೊತೆಗೆ ಮುಸ್ಲಿಂ ಮುಖಂಡರಾದ ಸೈಯದ್ ಅಲಿ, ಜಿಲಾನಿಪಾಷಾ ಖಾದ್ರಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಜಿಲ್ಲಾ ಅಧ್ಯಕ್ಷ ಮನೋಹರಗೌಡ ಹೇರೂರು, ವೀರೇಶ ಬಲಕುಂದಿ, ಸೂಳೆಕಲ್ ವೀರೇಶ, ಸಿಂಗನಾಳ ಪಂಪಾಪತಿ ಪಾಲ್ಗೊಂಡಿದ್ದರು. 


ಸುದ್ದಿ ಓದಿ