ಗೋಕಾಕ್

ಸಂಸ್ಕಾರದಿಂದಲೇ ಸಂಸ್ಕೃತಿಯ ಉಳಿವು ಸಾಧ್ಯ : ಅರುಣ ಪೂಜೇರಿ

ಸಂಸ್ಕಾರದಿಂದಲೇ ಸಂಸ್ಕೃತಿಯ ಉಳಿವು ಸಾಧ್ಯ : ಅರುಣ ಪೂಜೇರಿ

ಗೋಕಾಕ 20:  ಪ್ರಕೃತಿ ದತ್ತವಾದ ವಸ್ತುಗಳಿಗೆ ಸಂಸ್ಕಾರ ನೀಡಿದಾಗ ಅದು ಸಂಸ್ಕೃತಿಯಾಗುತ್ತದೆ. ಹಾಗೆಯೇ ಮಾನವನಿಗೆ ಸಂಸ್ಕಾರ ನೀಡಿದಾಗ ಆತ ಸುಸಂಸ್ಕೃತನಾಗುತ್ತಾನೆ. ಸುಸಂಸ್ಕೃತ ಜನಾಂಗವೇ ದೇಶದ ಅಮೂಲ್ಯ ಆಸ್ತಿ ಎಂದು ಪ್ರಾಚಾರ್ಯರಾದ ಅರುಣ ಪೂಜೇರಿ ಅಭಿಪ್ರಾಯಪಟ್ಟರು. ಅವರು ಸ್ಥಳೀಯ ಆದರ್ಶ ಶಿಕ್ಷಣ ಸಂಸ್ಥೆಯ 2024-25 ನೇ ಸಾಲಿನ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಿದ್ದರು.  

ಮುಂದುವರೆದು ಮಾತನಾಡಿದ ಅವರು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಂದ ವಿದ್ಯಾರ್ಥಿಗಳಲ್ಲಿ ಹುದುಗಿದ ಅನೇಕ ಕೌಶಲ್ಯಗಳನ್ನು ಗುರುತಿಸಿ ಮಾರ್ಗದರ್ಶನ ಮಾಡಿದರೆ ಮಕ್ಕಳು ಪ್ರತಿಭಾ ಸಂಪನ್ನ ವ್ಯಕ್ತಿಗಳಾಗಿ ನಿರ್ಮಾಣಗೊಳ್ಳುತ್ತಾರೆ ಎಂದು ಹೇಳಿದರು.  ಪ್ರಾಸ್ತಾವಿಕವಾಗಿ ಮಾತನಾಡಿದ ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ರಾಮಚಂದ್ರ ಕಾಕಡೆ ಸಾಂಸ್ಕೃತಿಕವಾಗಿ ಶಾಲೆಯು ಮಾಡಿದ ಸಾಧನೆಯನ್ನು ವಿವರಿಸಿದರು. ಮುಖ್ಯೋಪಾಧ್ಯಾಯ ಆರ್‌. ಎಸ್‌. ಹೆಬ್ಬಾಳೆಯವರು ಸಂಸ್ಥೆಯು ಸಾಗಿ ಬಂದ ದಾರಿಯನ್ನು ಮತ್ತು ಕಾರ್ಯಯೋಜನೆಗಳ ಬಗ್ಗೆ ಮಾತನಾಡಿದರು.  

ಈ ಸಾಲಿನ ಶಾಲಾ ಸಂಸತ್ತಿನ ಪದಾಧಿಕಾರಿಗಳಿಗೆ ಹಾಗೂ ವಿವಿಧ ಸಮಿತಿಗಳ ಮುಖ್ಯಸ್ಥರಿಗೆ ಸಂಸ್ಥೆಯ ಅಧ್ಯಕ್ಷ  ಬಿ. ಎಮ್‌. ಹಿಂಡಿಹೊಳಿ ಪ್ರಮಾಣ ವಚನ ಬೋಧಿಸಿದರು. ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಸಂಸ್ಥೆಯ ಕೋಶಾಧ್ಯಕ್ಷರಾದ ವ್ಹಿ. ಬಿ. ಗಚ್ಚಿ, ಸಹ ಕಾರ್ಯದರ್ಶಿ ಆರ್‌. ಜಿ. ದೊಡಮನಿ, ಆಡಳಿತ ಮಂಡಳಿ ಸದಸ್ಯ ಬಿ. ಜಿ. ಭೂತಿ, ಪ್ರಧಾನ ಗುರುಮಾತೆ ಎಸ್‌. ಎಚ್‌. ಶಿಂಧೆ ಹಾಗೂ ಶಾಲಾ ಸಂಸತ್ತಿನ ಪ್ರತಿನಿಧಿಗಳು ಉಪಸ್ಥಿತರಿದ್ದರು. ಶಿಕ್ಷಕ ಆಯ್‌. ಎಸ್‌. ಜನ್ಮಟ್ಟಿ ಸ್ವಾಗತಿಸಿದರು. ಕೆ. ಎಚ್‌. ಅಖಾನಿ ಕಾರ್ಯಕ್ರಮ ನಿರೂಪಿಸಿದರು. ಸಿ. ಎಲ್‌. ಮಗದುಮ್ ಗುರುಗಳು ವಂದಿಸಿದರು. 


ಸುದ್ದಿ ಓದಿ