ಬೆಳಗಾವಿ ಸಮಾವೇಶಕ್ಕೆ ಇಂಡಿ ವಕೀಲರ ಬೆಂಬಲ
ಇಂಡಿ 21: ಬೆಳಗಾವಿಯಲ್ಲಿ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಪ್ರವರ್ಗ 2ಂ ಮೀಸಲಾತಿ ಹೋರಾಟದಲ್ಲಿ ಇಂಡಿ ತಾಲ್ಲೂಕಿನ ಪಂಚಮಸಾಲಿ ಸಮಾಜದ ಸರ್ವ ವಕೀಲರು ಪಾಲ್ಗೊಂಡು ಬೆಂಬಲಿಸುವುದಾಗಿ ವಕೀಲರ ಸಂಘದ ಜಿಲ್ಲಾ ಸಂಘಟನಾ ಸಮಿತಿಯ ಸದಸ್ಯರಾದ ಬಿ ಬಿ ಬಿರಾದಾರ (ಜೇವೂರ) ಹೇಳಿದರು.ಸಮಾಜದ ಪೂಜ್ಯ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮಿಗಳು ದಶಕಗಳಿಂದ ಹಲವು ಹೋರಾಟ ನಡೆಸಿದ್ದರು ಸಹ ಯಾವ ಸರ್ಕಾರವೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದ ಹಿನ್ನೆಲೆಯಲ್ಲಿ ಶ್ರೀಗಳ ಕಳಕಳಿಯ ಮೆರೆಗೆ ಕಾನೂನು ಹೋರಾಟ ಮಾಡಲು ಎಲ್ಲಾ ವಕೀಲರು ಸಂಘಟಿತರಾಗಿದ್ದು.
ಬೆಳಗಾವಿಯಲ್ಲಿ ಕಾನೂನು ಹೋರಾಟದ ಕುರಿತು ದೀರ್ಘ ಸಮಾವೇಶದಲ್ಲಿ ಪೂಜ್ಯರ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಎಲ್ಲಾ ಜಿಲ್ಲೆಗಳ ಪಂಚಮಸಾಲಿ ಸಮಾಜದ ವಕೀಲರು ಬೆಂಬಲ ಸೂಚಿಸಿ ಕಾನೂನು ಹೋರಾಟಕ್ಕೆ ಮುಂದಾಗುತ್ತಿದ್ದು.
ಇಂಡಿ ತಾಲ್ಲೂಕಿನ ವಕೀಲರು ಸಹ ಈ ಸಮಾವೇಶದಲ್ಲಿ ಪಾಲ್ಗೊಂಡು ಸಮಾಜದ ಬಡ ಮಕ್ಕಳಿಗೆ ಮೀಸಲಾತಿ ಕೊಡಿಸುವ ಹೋರಾಟ ನಡೆಯಲಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿಗಳಾದ ಎಸ್ ಬಿ ಬೂದಿಹಾಳ,ಬಿ ಬಿ ಕೊಟ್ಟಲಿಗಿ,ಎ ಎಂ ಬಿರಾದಾರ, ಎ ಪಿ ಬಿರಾದಾರ, ಜಿ ಎಸ್ ಪಾಟೀಲ, ವೀರೇಂದ್ರ ಪಾಟೀಲ್, ಡಿ ಜಿ ಜೋತಗೊಂಡ,ಪಿ ಡಿ ಲವಗಿ, ಆರ್ ಎಸ್ ಪಾಟೀಲ, ಎಸ್ ಆರ್ ಮುಜಗೊಂಡ, ಎಂ ಸಿ ಬಿರಾದಾರ,ಎ ಬಿ ಆಳೂರ, ಎಸ್ ಆರ್ ಬಿರಾದಾರ, ಎಸ್ ಎ ಚಾಂದಕೋಟೆ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.