ಗಂಗಾವತಿ

ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಕನಸಿಗೆ ಬೆಂಬಲ : ಡಾ. ಅಮರ್

ಮಹಿಳೆಯರ ಆರ್ಥಿಕ ಸ್ವಾವಲಂಬನೆಯ ಕನಸಿಗೆ ಬೆಂಬಲ : ಡಾ. ಅಮರ್

ಗಂಗಾವತಿ 19 : ಉಚಿತ ಹೊಲಿಗೆ ತರಬೇತಿ ಆರಂಭದೊಂದಿಗೆ ಮಹಿಳಾ ಸ್ವಾವಲಂಬನೆಯ ಹಾದಿ ಯಶಸ್ಸಿನ ಮೈಲಿಗಲ್ಲು ಸಾಧಿಸುತ್ತಿದೆ. ಲಯನ್ಸ್‌ ಕ್ಲಬ್ ಅಧ್ಯಕ್ಷ ಡಾ. ಅಮರ್  ಹೇಳಿದರು.ಬುದುವಾರ  ಲಯನ್ಸ್‌ ಕ್ಲಬ್ ನಲ್ಲಿ ಮಹಿಳೆಯರಿಗೆ ಉಚಿತ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಲಯನ್ಸ್‌ ಕ್ಲಬ್ ಅಧ್ಯಕ್ಷ ಡಾ.ಅಮರ್  ಉದ್ಘಾಟಿಸಿ ಗಂಗಾವತಿ ಹಾಗೂ ಗ್ರಾಮೀಣ ಭಾಗದ ಮಹಿಳೆಯರಿಗೆ  ಈ ಹೊಲಿಗೆ ತರಬೇತಿ ಕಾರ್ಯಗಾರ  ಅನುಕೂಲವಾಗಿದೆ.ಸ್ವಂತ ಉದ್ಯೊ?ಗ ಮಾಡುವವರಿಗೆ  ನಮ್ಮ ಲಯನ್ಸ್‌  ಸಂಸ್ಥೆ ವತಿಯಿಂದ ಉಚಿತವಾಗಿ ಹೊಲಿಗೆ ತರಬೇತಿ ನೀಡುವ ಕೆಲಸ ಮಾಡಲಾಗುತ್ತಿದೆ.ಸ್ವಾವಲಂಬಿ ಉದ್ಯೊ?ಗ ಮಾಡುವವರಿಗೆ ಸಹಕಾರಿಯಾಗಲಿದೆ . ಮಹಿಳೆಯರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ.ಇತರ ಪರಿಸರದ ಆಸಕ್ತರಿಗೂ ತರಬೇತಿ ಪಡೆಯುವ ಅವಕಾಶವನ್ನೂ ನೀಡಲಾಗುತ್ತಿದೆ. ಒಬ್ಬರು ತರಬೇತುದಾರರು ಹೊಲಿಗೆ, ಫ್ಯಾಷನ್ ಡಿಸೈನ್, ಎಂಬ್ರಾಯಿಡರಿ ಡಿಸೈನ್ ಮತ್ತಿತರ ವಿಷಯಗಳ ಬಗ್ಗೆ ತರಬೇತಿ ನೀಡುತ್ತಿದ್ದಾರೆ.ಪರಿಸರ ಸ್ನೆ?ಹಿ ಬಟ್ಟೆ ಬ್ಯಾಗ್ ತಯಾರಿಸುವ ಗುರಿ ನಮ್ಮ ಸಂಸ್ಥೆ ಹೊಂದಿದೆ,ಸದ್ಯ ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟುವ ಉದ್ದೆ?ಶದಿಂದ ಬಟ್ಟೆ ಬ್ಯಾಗ್‌ಗಳನ್ನು ಬಳಕೆ ಬಗ್ಗೆ ಜಾಗೃತಿ ಹುಟ್ಟಿಸಲಾಗುತ್ತಿದೆ.ಈ ನಿಟ್ಟಿನಿಂದ ಮುಂದಿನ ದಿನಗಳಲ್ಲಿ ಇಲ್ಲಿ ಬಟ್ಟೆ ಬ್ಯಾಗ್‌ಗಳನ್ನು ಸಿದ್ಧ ಮಾಡುವ ಮಹತ್ವಾಕಾಂಕ್ಷಿ ಯೋಜನೆ ಹಾಕಿಕೊಂಡಿದ್ದೇವೆ ಎಂದರು.ಈ ಸಂಧರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ರವಿ ಚೈತನ್ಯ ರೆಡ್ಡಿ, ನಿಕಟ ಪೂರ್ವ ಅಧ್ಯಕ್ಷರಾದ ರಾಮಕೃಷ್ಣ, ಚೇತನ್ ಹಿರೇಮಠ, ಸೇವಾ ವಲಯದ ಅಧ್ಯಕ್ಷರಾದ ಎನ್‌.ಆರ್ ಸೂರ್ಯನಾರಾಯಣ, ಶ್ರೀಕಾಂತ ಮಕ್ಕಿನೇನಿ, ನಾಗೇಶ್ ಜನಾದ್ರಿ, ರಾಘವೇಂದ್ರ ಶಿರಿಗೇರಿ, ಅಭಿಷೇಕ್ ಬಿ ಎಂ, ಸತೀಶ್ ಭೋಜೆಶ್ ಶೆಟ್ಟರ್, ವೀರನ ಗೌಡರು, ಶಿಕ್ಷಕಿ ಸುನೀತ ಮೌನೇಶ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. 


ಸುದ್ದಿ ಓದಿ