ಕುಷ್ಟಗಿ

ಪೊಲೀಸ್ ವಸತಿ ಗೃಹಗಳ ದುರಸ್ತಿ ಕಾಮಗಾರಿ ವರಿಷ್ಠಾಧಿಕಾರಿ ನಟರಾಜ ವೀಕ್ಷಣೆ

ಪೊಲೀಸ್ ವಸತಿ ಗೃಹಗಳ ದುರಸ್ತಿ ಕಾಮಗಾರಿ ವರಿಷ್ಠಾಧಿಕಾರಿ ನಟರಾಜ ವೀಕ್ಷಣೆ

ಲೋಕದರ್ಶನ ವರದಿ  

ಕುಷ್ಟಗಿ 22:  ಪಟ್ಟಣದ ಪೊಲೀಸ್ ವಸತಿ ಗೃಹಗಳ  ತುಂಡು ಗುತ್ತಿಗೆಯ ದುರಸ್ತಿ ಕಾಮಗಾರಿಗಳನ್ನು ಬಳ್ಳಾರಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ ನಟರಾಜ ಬುಧವಾರ ಮಧ್ಯಾಹ್ನ ವೀಕ್ಷಣೆ ಮಾಡಿದರು.  


ಕರ್ನಾಟಕ ಹೌಸಿಂಗ್ ಕಾರ​‍್ೊರೇಷನ್ ವತಿಯಿಂದ ಪಟ್ಟಣದ ಪೊಲೀಸ್ ರ ವಸತಿ ಗೃಹಗಳ ತುಂಡು ಗುತ್ತಿಗೆ ದುರಸ್ಥೆ ಕಾಮಗಾರಿಗಳನ್ನು ವೀಕ್ಷಣೆ ಮಾಡಿ  ಕಾಮಗಾರಿಗಳ ದುರಸ್ಥೆ ಭಾವಚಿತ್ರ ಹಾಗೂ ನಂತರದ  ಭಾವಚಿತ್ರಗಳನ್ನು ಕಡ್ಡಾಯವಾಗಿ ಕಾಮಗಾರಿ ತಪಾಸಣೆ ಸಮಯದಲ್ಲಿ ತೋರಿಸಬೇಕು ಕರ್ನಾಟಕ ಹೌಸಿಂಗ್ ಕಾರ​‍್ೊರೇಷನ್ ಅಧಿಕಾರಿಗಳಿಗೆ ಸೂಚಿಸಿದರು.  

ಕಟ್ಟಡದ ಕಾಮಗಾರಿ ಗುತ್ತಿಗೆ ಪಡೆದ ಕೆಲವು ಗುತ್ತಿಗೆದಾರರು ಹಣದ ಆಸೆಗೆ ಬಿಲ್ ಪಾವತಿಸಿಕೊಳ್ಳಲು ದುರಸ್ತಿ ಕಾಮಗಾರಿ ಸ್ಥಳ ಪೋಟೋ ಬದಲಿಸುತ್ತಾರೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.  


ಕುಷ್ಟಗಿ ಪೊಲೀಸ್ ವಸತಿ ಗೃಹಗಳ ತುಂಡು ಗುತ್ತಿಗೆ  ಪಡೆದ ಗುತ್ತಿಗೆದಾರರು ಕಾಮಗಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.  


ಈ ಸಂದರ್ಭದಲ್ಲಿ ಡಿ.ಆರ್ ಡಿವಾಯ್ ಎಸ್ಪಿ ಶಶಿಧರ ಹಿರೇಮಠ, ಕರ್ನಾಟಕ ಹೌಸಿಂಗ್ ಕಾರ​‍್ೊರೇಷನ್ ಎಇಇ ವೀರಭದ್ರ​‍್ಪ, ಜೆ.ಇ ರವಿಕುಮಾರ, ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು. 


ಸುದ್ದಿ ಓದಿ