ಅನೈತಿಕ ಸಂಬಂಧ: ಕೊಲೆ ಆರೋಪಿಗಳ ಬಂಧನ
ಕುಷ್ಟಗಿ 09: ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಮನ್ನಾಪುರ ಗ್ರಾಮದಲ್ಲಿ ಸೆಪ್ಟೆಂಬರ 29ರಂದು ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶಕ್ಕೆ ಶರಣಪ್ಪ ತಂದೆ ಶಿವಪ್ಪ ಮಸ್ಕಿ ವಯ:24 ವರ್ಷ ಈತನನ್ನು ಕೊಲೆ ಮಾಡಿ ಮನೆಯ ಹಾಸಿಗೆ ಮೇಲೆ ಹಾಕಿ, ದೇಹದ ಮೇಲೆ ಹಾಸಿಗೆ ಹಾಕಿ ಬೆಂಕಿ ಹಚ್ಚಿದ ಘಟನೆ ಕುರಿತು ಮೃತನ ತಂದೆ ಶಿವಪ್ಪ ಮಸ್ಕಿ ಅವರು ನೀಡಿದ ದೂರಿನ ಮೇಲಿಂದ ಕುಷ್ಟಗಿ ಪೊಲೀಸ್ ಠಾಣೆ ಗುನ್ನೆ ನಂ.171/2024 ಕಲಂ-103, 238(ಬಿ) ಬಿಎನ್ಎಸ್ ಅಡಿಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದ ಪತ್ತೆ ಕುರಿತು ರಚಿಸಿದ ತಂಡದಲ್ಲಿನ ಅಧಿಕಾರಿ ಹಾಗೂ ಸಿಬ್ಬಂಧಿಯವರು ಕಾರ್ಯಪ್ರವೃತ್ತರಾಗಿ ಮಾಹಿತಿಯನ್ನು ಸಂಗ್ರಹಿಸಿ ಭಾಗ್ಯಶ್ರೀ ಗಂಡ ಹನುಮಂತ ಡೋಣಿ, ಇಬ್ರಾಹಿಂ ತಂದೆ ದರಸಾಬ ಎಲಿಗಾರ ಮುಗಳಖೋಡ ತಾ:ರಾಯಭಾಗ ಜಿ: ಬೆಳಗಾವಿ ಇವರನ್ನು ಪತ್ತೆ ಮಾಡಿ ಅಕ್ಟೋಬರ 06 ರಂದು ವಶಕ್ಕೆ ಪಡೆದು ಕೂಲಂಕುಷವಾಗಿ ವಿಚಾರಣೆ ಮಾಡಿದಾಗ ಅನೈತಿಕ ಸಂಬಂಧ ಪ್ರಕರಣದಲ್ಲಿ ಕೊಲೆ ಮಾಡಿರುವದಾಗಿ ಒಪ್ಪಿಕೊಂಡಿದ್ದು, ಕೃತ್ಯಕ್ಕೆ ಉಪಯೋಗಿಸಿದ ಮೋಟಾರ್ ಸೈಕಲ್, ಮೊಬೈಲ್ ಇತರೆ ಸಾಮಗ್ರಿಗಳನ್ನು ವಶಪಡಿಸಿಕೊಂಡು ಆಪಾದಿತರ ಮೇಲೆ ಮುಂದಿನ ಕಾನೂನು ಕ್ರಮ ಜರುಗಿಸಲಾಗಿದೆ.
ಪ್ರಕರಣದಲ್ಲಿ ಕೊಲೆ ಮಾಡಿದ ಆಪಾದಿತರ ಪತ್ತೆ ಕುರಿತು ಹೇಮಂತ್ ಕುಮಾರ್ ಆರ್. ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ, ಮತ್ತು ಸಿದ್ದಲಿಂಗಪ್ಪಗೌಡ ಪಾಟೀಲ್ ಡಿ.ವೈಎಸ್.ಪಿ. ಗಂಗಾವತಿ ಮಾರ್ಗದರ್ಶನದಲ್ಲಿ ಯಶವಂತ ಸಿಪಿಐ ಕುಷ್ಟಗಿ ವೃತ್ತ ನೇತೃತ್ವದಲ್ಲಿ ಹನುಮಂತಪ್ಪ ತಳವಾರ ಪಿ.ಎಸ್.ಐ ಕುಷ್ಟಗಿ, ಎ.ಎಸ್.ಐ ದುರಗಪ್ಪ, ಹೆಚ್ಸಿ-48 ಶ್ರೀಧರ, ಹೆಚ್ಸಿ-168 ಅಮರೇಶ, ಹೆಚ್ ಸಿ-180 ಸಂಗಮೇಶ, ಪಿಸಿ-388 ಪರಶುರಾಮ, ಪಿಸಿ-162 ಪರಶುರಾಮ, ಎಪಿಸಿ-166 ಪ್ರಸಾದ, ಎಪಿಸಿ-87 ಮಂಜುನಾಥ ರವರನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚನೆ ಮಾಡಲಾಗಿತ್ತು. ಸುಳಿವು ಇಲ್ಲದ ಕೊಲೆ ಪ್ರಕರಣದಲ್ಲಿಯ ಆಪಾದಿತರನ್ನು ಪತ್ತೆ ಮಾಡಿ, ಕೊಲೆ ಪ್ರಕರಣವನ್ನು ಭೇದಿಸಿದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡಕ್ಕೆ ಡಾ: ರಾಮ್ ಎಲ್. ಆರಸಿದ್ದಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಕೊಪ್ಪಳ ಪ್ರಶಂಸನೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿತು.