ಕುಷ್ಟಗಿ

ಗ್ರಾಮ ಪಂಚಾಯತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

ಗ್ರಾಮ ಪಂಚಾಯತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧವಾಗಿ ಆಯ್ಕೆ

ಕುಷ್ಟಗಿ 27: ಕಂದಕೂರು ಗ್ರಾಮ ಪಂಚಾಯತಿಗೆ ನೂತನವಾಗಿ ಬುಧುವಾರ  ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ದುರಗಮ್ಮ ಸತ್ಯಪ್ಪ ಹಾದಿಮನಿ,  ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಜಯಮ್ಮ ಬಸವರಾಜ ಉಪ್ಪಲದಿನ್ನಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಬುಧುವಾರ ಆಯ್ಕೆಯಾದರು. ಕಂದಕೂರು ಗ್ರಾಪಂ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಜಾತಿ (ಎಸ್ ಸಿ)  ಮೀಸಲಾತಿಗೆ ದುರಗಮ್ಮ ಸತ್ಯಪ್ಪ ಹಾದಿಮನಿ, ಒಬ್ಬರೇ ನಾಮಪತ್ರ ಸಲ್ಲಿಸಿದ್ದರು, ಅದರಂತೆ  ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆ ಸ್ಥಾನಕ್ಕೆ ಜಯಮ್ಮ ಬಸವರಾಜ ಉಪ್ಪಲದಿನ್ನಿ ಇವರೊಬ್ಬರೇ ನಾಮ ಪತ್ರ ಸಲ್ಲಿಸಿದ್ದರು, ಹಾಗಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ  ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿರುವದರಿಂದ ತಹಸೀಲ್ದಾರ ಅಶೋಕ ಶಿಗ್ಗಾವಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.  

ಒಟ್ಟು 16 ಜನ ಸದಸ್ಯರಲ್ಲಿ 15 ಜನ ಸದಸ್ಯರು ಹಾಜರಿದ್ದರು, ಒಬ್ಬ ಸದಸ್ಯರು ಮಾತ್ರ ಗೈರಾಜರಿದ್ದರು. ಸಹಾಯಕ ಚುನಾವಣಾಧಿಕಾರಿಯಾಗಿ ಕಂದಾಯ ಇಲಾಖೆಯ ಅಜೀತ್, ಪಿಡಿಓ ರಮೇಶ ಬೆಳ್ಳಿಹಾಳ ಕಾರ್ಯನಿರ್ವಹಿಸಿದರು. ವಿಜಯೋತ್ಸವ ಆಚರಣೆ ಕಂದಕೂರು ಗ್ರಾಮ ಪಂಚಾಯತಿಗೆ ನೂತನವಾಗಿ ಬುಧುವಾರ ಅಧ್ಯಕ್ಷರಾಗಿ ದುರಗಮ್ಮ ಸತ್ಯಪ್ಪ ಹಾದಿಮನಿ,  ಉಪಾಧ್ಯಕ್ಷರಾಗಿ ಜಯಮ್ಮ ಬಸವರಾಜ ಉಪ್ಪಲದಿನ್ನಿ ಉಪಾಧ್ಯಕ್ಷರಾಗಿ ವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಗ್ರಾಪಂ ಕಚೇರಿಯ ಹತ್ತಿರ ಪಟಾಕಿ ಸಿಡಿಸಿ, ವಿಜೋತ್ಸವ ಆಚರಿಸಿದರು. ಮುಖಂಡರಾದ ಕಂದಕೂರ​‍್ಪ ವಾಲ್ಮೀಕಿ, ಚಂದ್ರಹಾಸ ಬಾವಿಕಟ್ಟಿ, ಆಂಜನೇಯ ಹಾದಿಮನಿ, ಬಸವರಾಜ ಕಾಮನೂರ ರಾಮಣ್ಣ ವಾಲ್ಮೀಕಿ  ಬಸವರಾಜ ಉಪಲದಿನ್ನಿ, ಶಿವಪುತ್ರ​‍್ಪ, ಮಾರುತಿ,  ಶರಣಪ್ಪ ಉಪ್ಪಾರ ಭೀಮಣ್ಣ ಬಿಜಕಲ್, ಸಲಿಂಸಾಬ ಟೆಂಗುಂಟಿ, ಬಸವರಾಜ ದಳಪತಿ, ಹಾಗೂ ಗ್ರಾಮದ ಗುರು, ಹಿರಿಯರು ಹಾಗೂ ಮುಖಂಡರು ಇದ್ದರು. 


ಸುದ್ದಿ ಓದಿ