ಕೃಷ್ಣಾ ತೀರದಲ್ಲಿ ಸುಪಾರಿ ಕಿಲ್ಲರ್ ಹಂತಕರ ಬಂಧನ
ಲೋಕದರ್ಶನ ವರದಿ,
ಜಮಖಂಡಿ : 23: ಕೃಷ್ಣಾ ತೀರದಲ್ಲಿ ಸುಪಾರಿ ಕಿಲ್ಲರ್ ಹಂತಕರನ್ನು ಜಮಖಂಡಿ ಗ್ರಾಮೀಣ ಠಾಣೆಯ ಪೊಲೀಸರು ಬೇಟೆಯಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆರು ಜನ ಸುಪಾರಿ ಕಿಲ್ಲರ್ಗಳನ್ನು ಬೇಟೆಯಾಡಿದ ಆರೋಪಿಗಳನ್ನು ನ್ಯಾಯಾಂಗ ವಶಕ್ಕೆ ನೀಡಿದ ಘಟನೆ ನಡೆದಿದೆ.
ಸುಪಾರಿ ಕಿಲ್ಲರ್ಗಳಿಂದ ಪಿಸ್ತೂಲ್, ಲಾಗ್ಗಳನ್ನು ಹಾಗೂ 5350 ರೂ,ಗಳಷ್ಟು ನಗದು ಹಣ ವಶ ಪಡೆಸಿಕೊಂಡಿದ್ದಾರೆ. ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಸುಪಾರಿ ಕಿಲ್ಲರ್ ಹಂತಕರನ್ನು ಕೊಲೆಯಾಗುವ ಮುನ್ನ ಆರೋಪಗಳನ್ನು ಬಂಧಿಸಲಾಗಿದೆ.
ತಾಲ್ಲೂಕಿನ ಮುತ್ತೂರ ಪುನರ್ವಸತಿ ಕೇಂದ್ರದಲ್ಲಿ ಆರು ಜನ ಸುಪಾರಿ ಕಿಲ್ಲರ್ ಆರೋಪಿಗಳು ಸೇರಿಕೊಂಡು ಕೊಲೆಗೆ ಸಂಚು ರೂಪಿಸುವ ವೇಳೆ ಖಚಿತ ಮಾಹಿತಿ ಮೇರೆಗೆ ಪೋಲಿಸರು ಆರೋಪಗಳನ್ನು ಬಂಧಿಸಿ. ವಿಚಾರಣೆ ನಡೆಸಿದ ವೇಳೆಯಲ್ಲಿ ಎಲ್ಲ ರಹಸ್ಯವನ್ನು ಆರೋಪಿತರು ಬಾಯಿಬಿಟ್ಟಿದ್ದಾರೆಂದು ಡಿವೈಎಸ್ಪಿ ಶಾಂತವೀರ ಸುದ್ದಿಗಾರರಿಗೆ ತಿಳಿಸಿದರು.
ಕೊಲೆಗೆ ಸಂಚು ರೂಪಿಸಿದ ಕಿಲ್ಲರ್ ಹಂತಕ ಆರೋಪಿಗಳಾದ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕಣದಾಳ ಗ್ರಾಮದ ಕಿರಣ ಭೀಮಪ್ಪ ಚಿಗರಿ,(21) ಬಸ್ತವಾಡದ ಸಿದ್ದಪ್ಪ ಶಿವಪ್ಪ ಲಟ್ಟೆ (30), ಕಣದಾಳದ ಪರುಸುರಾಮ,ಭರಮಪ್ಪ ಕರಿಹೋಳೆ (30), ಹಾಗೂ ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸಿದ್ದಾರ್ಥ ಶಿವಾನಂದ ಹಿರೇಮಠ (21), ರಬಕವಿ-ಬನಹಟ್ಟಿ ತಾಲೂಕಿನ ಕುಲಹಳ್ಳಿ ಗ್ರಾಮದ ದಾನೇಶ ಮಾರುತಿ ಭಂಜತ್ರಿ (19), ಜಮಖಂಡಿ ನಗರದ ರುದ್ರಾಸ್ವಾಮಿಪೇಠ ಗಲ್ಲಿಯ ಸಂಜು ವಿಠ್ಠಲ ಕಡಕೋಳ ಎಲ್ಲರೂ ಸೇರಿಕೊಂಡು ಕೊಲೆಗೆ ಸಂಚು ರೂಪಿಸಿ,ಲಕ್ಷಾಂತರ ರು,ಗಳ ಸುಪಾರಿಗೆ ಕೈ ಹಾಕಿದರು ಎನ್ನಲಾಗಿದೆ. ನಗರದ ರುದ್ರಾಸ್ವಾಮಿಪೇಠ ಗಲ್ಲಿಯ ಆರೋಪಿ ಸಂಜು ವಿಠ್ಠಲ ಕಡಕೋಳ ಪೋಲಿಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದು, ಆತನ ಪತ್ತೆಗೆ ಕಾಯರ್ಾ ಚರಣೆ ನಡೆಸಲಾಗಿದೆಂದು ಡಿವೈಎಸ್ಪಿ ಶಾಂತವೀರ ತಿಳಿಸಿದ್ದಾರೆ.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ಡಿವೈಎಸ್ಪಿ ಶಾಂತವೀರ ಈ, ಸಿಪಿಐ ಗುರುನಾಥ ಚವ್ಹಾಣ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆ ಎಸೈ ಮಹೇಶ ಸಂಕ ಹಾಗೂ ಸಿಬ್ಬಂದಿ ಗಳಾದ ಕೆ.ಪಿ.ಸವದತ್ತಿ,ಬಿ.ಎಸ್.ಬಿರಾದಾರ,ಎಸ್.ಎಸ್.ನಾಯಕ, ಬಾಬು ಗುಳಬಾಳ, ಬಿ.ಪಿ.ಕುಸನಾಳ,ಎಲ್.ಎಚ್. ಲಾಯಣ್ಣವರ, ಎಸ್.ಜಿ. ಸಾಲಮನಿ, ಎಸ್.ಎಸ್. ಹಿರೇಮಠ,ವಿ.ಎಸ್.ಜಾಧವ,ಎಸ್.ಎಂ.ಬಡಿಗೇರ,ಪಿ.ಎಂ.ಹೊಸಮನಿ,ಎಸ್.ಎಸ್.ಜಕಾತಿ, ಆರ್.ಹೆಚ್.ಪೂಜಾರಿ,ಬಿ.ಬಿ.ವನಜೋಳ,ಎಂ.ಎಸ್.ಸನದಿ,ಎನ್.ಬಿ. ಬಿಸಲದಿನ್ನಿ,ಕೆಲೂಡಿ, ಗನಸೈದ ನಡಗಡ್ಡಿ, ಬಸವರಾಜ ಜಗಲಿ,ಚಂದ್ರಶೇಖರ ಜಿಟ್ಟೆಪ್ಪಗೋಳ,ಮುತ್ತು ಬಿಸನಾಳ ಆರೋಪಿಗಳನ್ನು ಬಂಧಿಸಲು ಕಾರಣಿಭೂತರಾಗಿದ್ದು, ಜಿಲ್ಲಾ ಎಸ್ಪಿ ಶ್ಲಾಘಿಸಿದ್ದಾರೆ. ಡಿವೈಎಸ್ಪಿ ಶಾಂತವೀರ ಈ, ಅವರು ಉತ್ತಮ ಕಾರ್ಯ ನಿರ್ವಹಿಸಿದ ಸಿಬ್ಬಂದಿಗೆ ನಗದು ಬಹುಮಾನ ನೀಡಿದರು.