ಇಂಡಿ

ಸರದಿ ಸಾಲಿನಲ್ಲಿ ಕುಳಿತು ಬಿಸಿಯೂಟ ಸವಿದ ಸುಜಾತಾ ಪೂಜಾರಿಲೋಕದರ್ಶನ ವರದಿ

ಸರದಿ ಸಾಲಿನಲ್ಲಿ ಕುಳಿತು ಬಿಸಿಯೂಟ ಸವಿದ ಸುಜಾತಾ ಪೂಜಾರಿಲೋಕದರ್ಶನ ವರದಿ

ಇಂಡಿ 23: ತಾಲೂಕಿನ ತಡವಲಗಾ ಗ್ರಾಮದ ಸರ್ಕಾರಿ ಹಿರಿಯ ಕನ್ನಡ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆಯ ಮಕ್ಕಳೊಂದಿಗೆ ಸರದಿ ಸಾಲಿನಲ್ಲಿ ಕುಳಿತು ಮಕ್ಕಳೊಂದಿಗೆ ಬಿಸಿಯೂಟ ಸವಿದ ಇಂಡಿ ತಾಲೂಕು ಅಕ್ಷರ ದಾಸೋಹ ಅಧಿಕಾರಿ ಸುಜಾತಾ ಪೂಜಾರಿ ಅವರು ಇಂಡಿ ತಾಲೂಕಿನ ತಡವಲಗಾ ಗ್ರಾಮದ ಹೆಣ್ಣು ಮಕ್ಕಳ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಸಮಸ್ಯೆಗಳನ್ನು ಆಲಿಸಿದರು. 

ಅಡುಗೆ ಮಾಡುವ ಅಡುಗೆ ಸಹಾಯಕಿಯರಿಗೆ ಕೈಗವಸು, ತಲೆಗವಸು ಕಡ್ಡಾಯವಾಗಿ ಧರಿಸಿ ಸ್ವಚ್ಛೆತೆಯಿಂದ ಅಡುಗೆ ಮಾಡಿ ಎಲ್ಲಾ ಮಕ್ಕಳಿಗೂ ಕೂಡಿಸಿ ಅಡುಗೆ ಸಿಬ್ಬಂಧಿಯವರೆ ಊಟವನ್ನು ಬಡಿಸಬೇಕು ಹಾಗೂ ಜಾಗೃತಿಯಿಂದ ಕೆಲಸ ಮಾಡಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಕೆಲ ವಿದ್ಯಾರ್ಥಿನಿಯರು ಬಿಸಿಯೂಟದ ಜೊತೆ ಮೊಟ್ಟೆ ತಿನ್ನಲು ನಿರಾಕರಿಸಿದನ್ನು ಗಮನಿಸಿದ ಅಧಿಕಾರಿಗಳು, ಮಕ್ಕಳಿಗೆ ಪೋಷಕಾಂಶಗಳ ಬಗ್ಗೆ ತಿಳುವಳಿಕೆ ಹೇಳಿದರು. ಹಾಗೆಯೇ ಮುಖ್ಯಗುರುಗಳಿಗೆ ಕರೆದು ಮಗು ಮೊಟ್ಟೆ ತಿನ್ನಲು ನಿರಾಕರಿಸಿದಾಗ ಮಾತ್ರ ಆ ಮಗುವಿಗೆ ಮೊಟ್ಟೆ ಬದಲಿಗೆ ಶೇಂಗಾ ಚಿಕ್ಕಿ ಅಥವಾ ಬಾಳೆ ಹಣ್ಣು ಕೊಡಿ ಎಂದು ಸೂಚಿಸಿದರು. 

ನಂತರ ಮಾತನಾಡಿದ ಅವರು 2002-03ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರವು ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ರಾಜ್ಯಾದ್ಯಂತ ಆರಂಭಿಸಿದ್ದು, ಶಾಲಾ ಮಕ್ಕಳಿಗೆ ಉತ್ತಮ ಪೋಷಕಾಂಶ ಭರಿತ ಆಹಾರವನ್ನು ಒದಗಿಸುವ ದೃಷ್ಟಿಯಿಂದ ಸರ್ಕಾರವು ಊಟದಲ್ಲಿ ಪೂರಕ ಪೌಷ್ಠಿಕ ಆಹಾರಗಳಾದ ಮೊಟ್ಟೆ, ಬಾಳೆಹಣ್ಣು, ಶೆಂಗಾ ಚಿಕ್ಕಿ ಹಾಗೂ ಬೆಳಗ್ಗೆ ಹಾಲು ಮತ್ತು ರಾಗಿ ಮಾಲ್ಟ್‌ ನೀಡಲಾಗುತ್ತಿದ್ದು ಎಲ್ಲಾ ಮಕ್ಕಳು ಅದರ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.   

ತಡವಲಗಾ ವೃತ್ತದ ಶಿಕ್ಷಣ ಸಂಯೋಜಕ ಆನಂದ ಹುಣಸಗಿ, ಹಾಗೂ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುನಂದಾ ವಾಲಿಕಾರ, ಎಸ್‌ಡಿಎಂಸಿ ಅಧ್ಯಕ್ಷ ವಿಠೋಬಾ ವಿಜಯಪೂರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. 


ಸುದ್ದಿ ಓದಿ