ಕಬ್ಬು ಕಟಾವ ಆರಂಭ: ಡಿಸಿ ರಾಮ್ ಪ್ರಸಾತ್

ಕಬ್ಬು ಕಟಾವ ಆರಂಭ: ಡಿಸಿ ರಾಮ್ ಪ್ರಸಾತ್

ಬಳ್ಳಾರಿ 11: ಎನ್ಎಸ್ಎಲ್ ಶುಗರ್ಸ್ ಕಾರಖಾನೆಯಲ್ಲಿ ಲಭ್ಯವಿರುವ ಕಬ್ಬು ಕಟಾವು ಮಾಡುವ ಗ್ಯಾಂಗ್ಗಳನ್ನು ಕ್ರೋಢಿಕರಿಸಿ ಡಿ.12ರಿಂದ ಅಕ್ಟೋಬರ್-2017 ಮತ್ತು ನವೆಂಬರ್-2017ರಲ್ಲಿ ಬಿತ್ತನೆ ಮಾಡಿದ ರೈತರ ಕಬ್ಬು ಕಟಾವುಗಳನ್ನು ಪ್ರಾರಂಭ ಮಾಡತಕ್ಕದ್ದು,ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದೇ ಕ್ರಮವಹಿಸತಕ್ಕದ್ದು ಎಂದು ಡಿಸಿ ರಾಮ್ ಪ್ರಸಾತ್ ಮನೋಹರ್ ಅವರು ಖಡಕ್ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ನಡೆದ ಕಬ್ಬು ಬೆಳೆಗಾರರ ಸಂಘದ ಮುಖಂಡರು ಹಾಗೂ ವಿವಿಧ ಸಕ್ಕರೆ ಕಾರಖಾನೆಗಳ ಪ್ರತಿನಿಧಿಗಳು ಮತ್ತು ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

ಡಿ.15ರಿಂದ ಮೈಲಾರ್ ಶುಗರ್ಸ್ರವರು 5 ಕಬ್ಬು ಕಟಾವು ಮಾಡುವ ಗ್ಯಾಂಗ್ಗಳನ್ನು, ವಿಜಯನಗರ ಶುಗರ್ಸ್ 5, ಶಾಮನೂರು ಶುಗರ್ಸ್ 10,ಕೋರ್ಗ್ರೀನ್ ಶುಗರ್ಸ್ 10 ಹಾಗೂ ದಾವಣಗೆರೆ ಶುಗರ್ಸ್ 10 ಕಬ್ಬು ಕಟಾವು ಮಾಡುವ ಗ್ಯಾಂಗ್ಗಳನ್ನು ಎನ್ಎಸ್ಎಲ್ ಶುಗರ್ಸ್ ಕಾರಖಾನೆಯ ನೊಂದಾಯಿತ ರೈತರ ಕಬ್ಬು ಕಟಾವು ಮಾಡಲು ಎನ್ಎಸ್ಎಲ್ ಶುಗರ್ಸ್ರವರು ತಯಾರಿಸಿದ ರೈತರ ಪಟ್ಟಿ ಪ್ರಕಾರ ನಿಯೋಜಿಸತಕ್ಕದ್ದು ಎಂದು ಅವರು ಸೂಚಿಸಿದರು.

ಈ ವಿವಿಧ ಸಕ್ಕರೆ ಕಾರಖಾನೆಗಳಿಗೆ ಕಟಾವು ಮಾಡಿದ ಕಬ್ಬು ಸರಬರಾಜು ಮಾಡುವ ಸಾಗಾಣಿಕೆ ವೆಚ್ಚ ಹಾಗೂ ಟೋಲ್ಗೇಟ್ ಶುಲ್ಕ ಮತ್ತು ಇತರೆ ಖಚರ್ುಗಳನ್ನು ದೇಶನೂರು ಎನ್ಎಸ್ಎಲ್ ಸಕ್ಕರೆ ಕಾರಖಾನೆ ಭರಿಸುವುದಕ್ಕೆ ಡಿಸಿ ರಾಮ್ ಪ್ರಸಾತ್ ಸೂಚನೆ ನೀಡಿದರು. ಇದಕ್ಕೆ ಎನ್ಎಸ್ಎಲ್ ಕಾರಖಾನೆಯ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.

ಹಿಂದಿನ ವರ್ಷದ ರೈತರಿಲ್ಲಿ ನೀಡಬೇಕಾದ ಬಾಕಿ ಹಣವನ್ನು ಈ ವರ್ಷದ ಕಬ್ಬು ಸಾಗಾಣಿಕೆ ಮಾಡುವಲ್ಲಿ ಬರುವ ವ್ಯತ್ಯಾಸದ ಮೊತ್ತವನ್ನು ರೈತರೊಗೆ ಭರಿಸಿದ ನಂತರ ನೀಡತಕ್ಕದ್ದು ಎಂದು ತಿಳಿಸಿದ ಅವರು ರೈತರಿಗೆ ಸಾಗಾಣಿಕೆ ವ್ಯತ್ಯಾಸದ ಮೊತ್ತ ಹಾಗೂ ಇತರೆ ಬಾಕಿಗಳನ್ನು ಸಂಪೂರ್ಣವಾಗಿ ಭರಿಸಿದ ನಂತರ ಎನ್ಎಸ್ಎಲ್ ಶುಗರ್ಸ್ ಕಾರಖಾನೆಯವರು ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳನ್ನು ತೆರವುಗೊಳಿಸಲಾಗುವುದು ಎಂದು ಸಭೆಯಲ್ಲಿ ತಿಳಿಸಿದರು.

ಎನ್ಎಸ್ಎಲ್ ಶುಗರ್ಸ್ ಕಾರಖಾನೆಯವರು ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿಗಳು ರೈತರೊಂದಿಗೆ ಸಹಕರಿಸಿ ನಿಗದಿತ ಸಮಯದಲ್ಲಿ ರೈತರ ಕಬ್ಬಿನ ಕಟಾವು ಮತ್ತು ಸಾಗಾಣಿಕೆಯಲ್ಲಿ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಿ ಎಲ್ಲ ರೈತರ ಕಬ್ಬು ಕಟಾವು ಮುಕ್ತಾಯಗೊಳ್ಳುವವರೆಗೆ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.ಎನ್ಎಸ್ಎಲ್ ಸಕ್ಕರೆ ಕಾರಖಾನೆಯವರು ಸಿಬ್ಬಂದಿಯವರ ಸಮಕ್ಷಮ ಹಾಗೂ ಜವಾಬ್ದಾರಿಯಲ್ಲಿ ಕಬ್ಬು ಕಟಾವು ಹಾಗೂ ಸಾಗಣಿಕೆಗೆ ಕ್ರಮ ಕೈಗೊಳ್ಳತಕ್ಕದ್ದು ಎಂದರು.

ಕಬ್ಬು ಕಟಾವಿಗೆ ಮೊದಲು ನಾಟಿ ಮಾಡಿದವರಿಗೆ ಮೊದಲ ಆದ್ಯತೆ: ಕಬ್ಬು ನಾಟಿ ಮಾಡಿದ ಪ್ರಕಾರ ಕಬ್ಬು ಕಟಾವಿನ ಪಮರ್ಿಟ್ನ್ನು ಕಾರಖಾನೆಯಿಂದ ಪರಿಶೀಲಿಸಿ ಮೊದಲು ನಾಟಿ ಮಾಡಿದವರಿಗೆ ಮೊದಲ ಆದ್ಯತೆ ಪ್ರಕಾರ ಕೊಡತಕ್ಕದ್ದು ಎಂದು ಡಿಸಿ ರಾಮ್ ಪ್ರಸಾತ್ ಹೇಳಿದರು.

ಎನ್ಎಸ್ಎಲ್ ಸಕ್ಕರೆ ಕಾರಖಾನೆ ವ್ಯಾಪ್ತಿಯಲ್ಲಿ ನೊಂದಾಯಿತ ಕಬ್ಬನ್ನು ಬೇರೆ ಕಾರಖಾನೆಗಳಿಗೆ ಸಾಗಿಸುವಾಗ ಸಂಬಂಧಿಸಿದ ರೈತರು ಕಬ್ಬನ್ನು ಸ್ವೀಕರಿಸುವ ಕಾರಖಾನೆವರೆಗೆ ಸಂಬಂಧಿಸಿದ ವಾಹನದಲ್ಲಿ ಖುದ್ದಾಗಿ ಇದ್ದು,ಕಬ್ಬಿನ ತೂಕವನ್ನು ಸ್ವೀಕರಿಸುವ ಕಾರಖಾನೆಯಲ್ಲಿಯೇ ತೂಕ ಮಾಡಿಸಿ ರೈತರು ದೃಢೀಕರಿಸಿಕೊಂಡು ರಸೀದಿಯನ್ನು ಕಾರಖಾನೆ ವತಿಯಿಂದ ಪಡೆಯತಕ್ಕದ್ದು. ಸಾಮಾನ್ಯವಾಗಿ ರೈತರ ಜಮೀನಿನಲ್ಲಿ ವಾಹನಕ್ಕೆ ಕಬ್ಬು ಲೋಡ್ ಆದ ನಂತರ 08-12ಗಂಟೆಗಳೊಳಗಾಗಿ ಕಬ್ಬು ಸ್ವೀಕರಿಸುವ ಕಾರಖಾನೆಗಳು ತೂಕ ಮಾಡಿ ರೈತರಿಗೆ ರಸೀದಿ ನೀಡತಕ್ಕದ್ದು. ಒಂದು ವೇಳೆ ಸ್ವೀಕರಿಸುವ ಕಾರಖಾನೆಯವರು ಟೋಕನ್ ಪದ್ದತಿ ವ್ಯವಸ್ಥೆ ಅನುಸರಿಸುತ್ತಿದ್ದಲ್ಲಿ ಅದೇ ಪದ್ದತಿಯನ್ನು ಅನುಸರಿಸಿ ತೂಕ ಮಾಡತಕ್ಕದ್ದು ಎಂದು ಅವರು ಹೇಳಿದರು.

ಸಭೆಯಲ್ಲಿ ಎನ್ಎಸ್ಎಲ್ ಸಕ್ಕರೆ ಕಾರಖಾನೆ, ಮೈಲಾರ ಶುಗರ್ಸ್, ವಿಜಯನಗರ ಶುಗರ್ಸ್, ದಾವಣಗೆರೆ ಶುಗರ್ಸ್, ಶಾಮನೂರು ಶುಗರ್ಸ್,ಕೋರಗ್ರೀನ್ ಶುಗರ್ಸ್ ಪ್ರತಿನಿಧಿಗಳು, ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರು ಮತ್ತು ಮುಖಂಡರು ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


ಸುದ್ದಿ ಓದಿ