ಸಕರ್ಾರಿ ನೌಕರರ ಕ್ರೀಡಾಕೂಟ ಸಾಂಸ್ಕೃತಿಕ ಸ್ಪಧರ್ೆ ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯಕ: ಸೋಮಶೇಖರ ರೆಡ್ಡಿ

ಸಕರ್ಾರಿ ನೌಕರರ ಕ್ರೀಡಾಕೂಟ ಸಾಂಸ್ಕೃತಿಕ ಸ್ಪಧರ್ೆ   ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಅವಶ್ಯಕ: ಸೋಮಶೇಖರ ರೆಡ್ಡಿ

ಬಳ್ಳಾರಿ 21:ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಇಂತಹ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ಸಾಹದಿಂದ ಇನ್ನೂ ಹೆಚ್ಚಿನ ಕಾರ್ಯವನ್ನು ಮಾಡಲು ಸಹಕಾರಿಯಾಗುತ್ತದೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರಿಂದ ಉತ್ತಮ ಆರೋಗ್ಯವಂತರಾಗಿರಬಹುದು ಎಂದು ನಗರ ಶಾಸಕ ಸೋಮಶೇಖರ ರೆಡ್ಡಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ, ರಾಜ್ಯ ಸಕರ್ಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪಧರ್ೆಗೆ ಚಾಲನೆ ನೀಡಿ ಮಾತನಾಡಿದರು.

ಪ್ರತಿಯೊಬ್ಬರು ಕೂಡ ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಬಹಳ ಮುಖ್ಯವಾಗಿ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಜಿಲ್ಲೆಯ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಗಳಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ರಾಜ್ಯದಿಂದ ರಾಷ್ಟ್ರಕ್ಕೆ, ರಾಷ್ಟ್ರದಿಂದ ಅಂತರಾಷ್ಟ್ರೀಯ ಮಟ್ಟಕ್ಕೆ ಭಾಗವಹಿಸಿ ಜಿಲ್ಲೆಗೆ ಕೀತರ್ಿಯನ್ನು ತರಬೇಕು ಎಂದರು. 

ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘದ ಅಧ್ಯಕ್ಷರಾದ ಡಾ. ಎಂ.ಟಿ. ಮಲ್ಲೇಶಪ್ಪ ಅವರು ಮಾತನಾಡಿ, ದೈಹಿಕವಾಗಿ ಕ್ರೀಡೆಗಳಿಗೆ ಮಹತ್ವ ನೀಡಿ, ಸ್ಫೂತರ್ಿಯಿಂದ ಒಳ್ಳೆಯ ಮನೋಭಾವದಿಂದ ಹೆಚ್ಚಿನ ಜನಸಂಖ್ಯೆಯಲ್ಲಿ ಭಾಗವಹಿಸಿ ಎಂದರು. 

ಈ ಸಂದರ್ಭದಲ್ಲಿ ರಾಜ್ಯ ಸಕರ್ಾರಿ ನೌಕರರ ಸಂಘದ ಕಾರ್ಯದಶರ್ಿ ಜಿ.ಕೆ.ರಾಮಕೃಷ್ಣ, ಖಜಾಂಚಿ ಶಿವಾಜೀ ರಾವ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕ ಖಾದರ್ ರಹಮತ್ತುಲ್ಲಾ ಸೇರಿದಂತೆ ಪಿ. ನಾಗರಾಜ್, ಕೆ. ಪಂಪನಗೌಡ್ರು, ಪಿ. ರಾಧಾ ಕೃಷ್ಣ, ಸಿ.ಲಿಂಗಪ್ಪ, ರುದ್ರ ಮುನಿ ರಾಜುಗುರು, ದಶಮೂತರ್ಿ, ಸುಂಕಣ್ಣ, ಕೆ.ಎರ್ರಿಸ್ವಾಮಿ, ಜೆ.ಬಸವರಾಜ್  ಹಾಗೂ ವಿವಿಧ ತಾಲೂಕಿನಿಂದ ಬಂದಿರುವ ಶಿಕ್ಷಕರುಗಳು ಇತರರು ಇದ್ದರು. ಅಥ್ಲೆಟಿಕ್ಸ್, ಕಬಡ್ಡಿ, ಷಟಲ್ ಬ್ಯಾಡ್ಮಿಂಟನ್, ಥ್ರೋ ಬಾಲ್, ಪುಟ್ ಬಾಲ್, ಈಜು, ವಾಲಿಬಾಲ್, ಹಾಕಿ, ಬಾಲ್ ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಟೇಬಲ್ ಟೆನ್ನಿಸ್, ಚೆಸ್ ಸ್ಪಧರ್ೆಗಳಲ್ಲಿ 300 ಕ್ಕೂ ಹೆಚ್ಚು ನೌಕರರು ಸ್ಪಧರ್ೆಯಲ್ಲಿ ಭಾಗವಹಿಸಿದರು. 


ಸುದ್ದಿ ಓದಿ