ಜಮಖಂಡಿ

ವಿದ್ಯಾರ್ಥಿಗಳು ಪರೀಕ್ಷೆಗಳಿಂದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು: ಕೌಟಿಗಿಮಠ

ವಿದ್ಯಾರ್ಥಿಗಳು ಪರೀಕ್ಷೆಗಳಿಂದ ಭವಿಷ್ಯವನ್ನು ರೂಪಿಸಿಕೊಳ್ಳಬೇಕು: ಕೌಟಿಗಿಮಠ

ಲೋಕದರ್ಶನ ವರದಿ

ಜಮಖಂಡಿ  16: ಜಿಲ್ಲಾ ವಿಶ್ವವಿದ್ಯಾಲಯದಲ್ಲಿ ನಡೆದ ವಿದ್ಯಾರ್ಥಿ ಕಲ್ಯಾಣ ಕೋಶದಿಂದ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ವೃತ್ತಿ ಯೋಜನೆ ಎಂಬ ಧ್ಯೇಯವನ್ನು ಇಟ್ಟುಕೊಂಡು ಒಂದು ದಿನದ ಕಾರ್ಯಗಾರವನ್ನು ಸಸಿಗೆ ನೀರುನಿಸುವ ಮೂಲಕ  ದಾನಯ್ಯಾ ಕೌಟಿಗಿಮಠ  ಉದ್ಘಾಟಿಸಿದರು. 

ನಂತರ ಮಾತನಾಡಿದ ಅವರು, ಸ್ಪರ್ಧಾತ್ಮಕ ಯುಗದಲ್ಲಿ ಪರೀಕ್ಷೆಯ ಪ್ರಾಮುಖ್ಯತೆ ಎಷ್ಟು ಎಂಬುದರ ಬಗ್ಗೆ ತಿಳಿಸಿ, ಸ್ಪರ್ಧಾತ್ಮಕ  ಪರೀಕ್ಷೆಗಳಾದ ಕೆಇಎ-ಕೆಸೆಟ್ ಹಾಗೂ ಯು.ಜಿ.ಸಿ. ಎನ.ಟಿ.ಎ-ನೆಟ್ ಪರೀಕ್ಷೆಗಳ ಕುರಿತಾಗಿ ವಿಸ್ತೃತವಾಗಿ ಮಾಹಿತಿ ಒದಗಿಸಿ, ಬರೆದಿರುವ ಹೊಸ ಪುಸ್ತಕ ರಚನೆಯಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗಳಿಂದ ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಮತ್ತು ಓದಿನ ಜೊತೆ ಜೊತೆಗೆ ಬರವಣಿಗೆ ಮಹತ್ವವನ್ನು ಅರಿಯಬೇಕೆಂದರು.

ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ  ಕುಲಪತಿ ಪ್ರೊ. ಆನಂದ ದೇಶಪಾಂಡೆ, ಪ್ರೊ.ಎಸ್.ಎ. ಅಂಗಡಿ,ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಡಾ.ಮಲ್ಲಿಕಾಜರ್ುನ ಮರಡಿ ಮಾತನಾಡಿದರು.  ಉಪಕುಲಸಚಿವ  ಡಾ. ರಾಜೇಶ್ವರಿ ಮಠದ, ನಿದರ್ೇಶಕ ಡಾ.ಚಿದಾನಂದ ಢವಳೇಶ್ವರ, ಸ್ಪರ್ಧಾತ್ಮಕ  ಪರೀಕ್ಷೆಗಳ ತರಬೇತುದಾರ ಅಕ್ಕಲಕೋಟ ಉಪಸ್ಥಿತರಿದ್ದರು. ಉಪನ್ಯಾಸಕ ಗಣಪತಿ ಉಪ್ಪಾರ ಸ್ವಾಗತಿಸಿದರು.ಉಪನ್ಯಾಸಕಿ ಲಕ್ಷ್ಮಿ ಮನಮಿ, ಉಪನ್ಯಾಸಕ ದಯಾನಂದ ಹುಡೆದ ನಿರೂಪಿಸಿದರು. ಉಪನ್ಯಾಸಕ ಆನಂದ ಹಿರೇಕುರುಬರ ವಂದಿಸಿದರು. 



ಸುದ್ದಿ ಓದಿ