ಸೌಂದತ್ತಿ

ಎಸ್ ಜಿ ಶಿಂತ್ರಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಎಸ್ ಜಿ ಶಿಂತ್ರಿ ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ಸವದತ್ತಿ 30: ಸ್ಥಳೀಯ ಎಸ್‌.ಜಿ.ಶಿಂತ್ರಿ ಪಿಯು ಕಾಲೇಜಿನ ಕಬಡ್ಡಿ ತಂಡವು ಹುಣಸಿಕಟ್ಟಿಯಲ್ಲಿ ನಡೆದ ಜಿಲ್ಲಾ ಮಟ್ಟದ ಪಿಯು ಕಾಲೇಜು ಕ್ರೀಡಾಕೂಟದಲ್ಲಿ ಜಯಗಳಿಸಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದೆ. ತಂಡದ ನಾಯಕ ಸಾಹಿಲ್ ಅಲ್ಲಿಸಾಬನವರ, ಉಮೇಶ ಕುರಿ, ಈರಣ್ಣ ಬಡ್ಲಿ, ಭರತ ಸಂಗ್ರೇಶಿ, ಅಭಿಷೇಕ ಹೂಲಿ, ಸಂತೋಷ ನೇಗಿನಹಾಳ, ಅಭಿಷೇಕ ಹಟ್ಟಿಹೊಳಿ, ಹನಮಂತಗೌಡ ಪಾಟೀಲ, ಉಮೇಶ ಕರೀಕಟ್ಟಿ, ನಿಂಗಪ್ಪ ದಿನ್ನಿಮನಿ ಜಯಗಳಿಸಿದ ತಂಡದ ಆಟಗಾರರಾಗಿದ್ದಾರೆ. ದೈಹಿಕ ನಿರ್ದೇಶಕ ಎಮ್‌.ಎನ್‌.ಗುಡಗಾರ ಈ ತಂಡಕ್ಕೆ ತರಬೇತಿ ನೀಡಿದ್ದಾರೆ. 

ರಾಜ್ಯ ಮಟ್ಟಕ್ಕೆ ಆಯ್ಕೆಯಾದ ತಂಡದ ಆಟಗಾರರಿಗೆ ಮತ್ತು ತರಬೇತಿದಾರರಿಗೆ ಸಂಸ್ಥೆಯ ಚೇರಮನ್‌ರಾದ ಗಂಗಮ್ಮಾತಾಯಿ ಮಾಮನಿ, ಕಾರ್ಯದರ್ಶಿಗಳಾದ ರತ್ನಾ ಆನಂದ ಮಾಮನಿ, ವ್ಯವಸ್ಥಾಪಕ ನಿರ್ದೇಶಕ ಎ.ಐ.ಶಿರಸಂಗಿ, ಪ್ರಾಚಾರ್ಯ ಸುರೇಶ ವಾರೆಪ್ಪನವರ, ಯು.ಎನ್‌.ಮನಗೂಳಿ ಸೇರಿದಂತೆ ಕಾಲೇಜು ಸಿಬ್ಬಂದಿಯವರು ಅಭಿನಂದಿಸಿದ್ದಾರೆ. 


ಸುದ್ದಿ ಓದಿ