ಜಮಖಂಡಿ

ವಿದ್ಯಾರ್ಥಿಗಳು ಆತ್ಮ ವಿಶ್ವಾಸ, ಒತ್ತಡರಹಿತ ಹಬ್ಬದಂತೆ ಪರೀಕ್ಷೆ ಎದುರಿಸಿ: ಬಸನ್ನವರ

ವಿದ್ಯಾರ್ಥಿಗಳು ಆತ್ಮ ವಿಶ್ವಾಸ, ಒತ್ತಡರಹಿತ ಹಬ್ಬದಂತೆ ಪರೀಕ್ಷೆ ಎದುರಿಸಿ: ಬಸನ್ನವರ

ಲೋಕದರ್ಶನ ವರದಿ,

ಜಮಖಂಡಿ 29: ಎಸ್.ಎಸ್.ಎಲ್.ಸಿ ಎಂಬುದು ವಿದ್ಯಾರ್ಥಿ ಜೀವನದ ಮಹತ್ತರ ಘಟ್ಟವಾಗಿದ್ದು, ವಿದ್ಯಾರ್ಥಿಗಳು ಆತ್ಮ ವಿಶ್ವಾಸ, ಒತ್ತಡರಹಿತವಾಗಿ ಹಬ್ಬದಂತೆ ಪರೀಕ್ಷೆ ಎದುರಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀಣರಾಗಿ ಶಾಲೆಗೆ, ತಂದೆ ತಾಯಿಗೆ, ಗ್ರಾಮದ ಕೀರ್ತಿ ಹೆಚ್ಚಿಸಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಬಸನ್ನವರ ಹೇಳಿದರು.

ನಗರದ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸಭಾಭವನದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ ಮತ್ತು ಪ್ರೌಢಶಾಲೆ ಸಹಶಿಕ್ಷಕರ ಸಂಘದ ಸಹಯೋಗದಲ್ಲಿ ನಡೆದ ಫೋನ್-ಇನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿದ್ಯಾರ್ಥಿಗಳ ಯಶಸ್ಸಿಗಾಗಿ ಇಲಾಖೆ ಸಾಕಷ್ಟು ಕಾರ್ಯಕ್ರಮಗಳು ಹಮ್ಮಿಕೊಂಡಿದ್ದು ಫೋನ್-ಇನ್ಕಾರ್ಯಕ್ರಮ ಕೂಡ ಒಂದು. ತಾಲೂಕಿನ, ಜಿಲ್ಲೆಯ, ರಾಜ್ಯದ ಮಕ್ಕಳು ತಮ್ಮ ಸಂದೇಹ, ಭಯದ ಪ್ರಶ್ನೆಗಳನ್ನು ನಿರ್ಭತರಾಗಿ ಕೇಳುವ ಅವಕಾಶ ಕಲ್ಪಿಸಲಾಗಿದೆ. ಪರೀಕ್ಷೆಗಳು ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಮಕ್ಕಳ ಮನಸ್ಸಿನಲ್ಲಿರುವ ತಳಮುಲ ಪ್ರಶ್ನೆಗಳ ಮೂಲಕ ಬಗೆಹರಿಸಿಕೊಳ್ಳಲು ಮುಕ್ತ ಅವಕಾಶವಿದೆ. ವಿದ್ಯಾಥರ್ಿಗಳಿಗೆ ಪರೀಕ್ಷೆಯ ಕುರಿತು ಭಯ, ಗೊಂದಲ, ಒತ್ತಡ, ಹೆಚ್ಚು ಅಂಕಗಳಿಸಲು ಸಕಾರಾತ್ಮಕ ಪರಿಹಾರಗಳನ್ನು ಕಂಡುಕೊಳ್ಳಲು ವಿದ್ಯಾಥರ್ಿಗಳಿಗೆ ಸಹಾಯ ಅಗಲಿದೆ ಎಂದರು.

ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಸ್.ಕಡಕೋಳ, ನರಸಿಂಹ ಕಲ್ಲೊಳ್ಳಿ ಮಾತನಾಡಿದರು,

ವೇದಿಕೆಯಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ವಿಜಯಕುಮಾರ ವಂದಾಲ, ಎಸ್ಎಸ್ಎಲ್ಸಿ ನೋಡಲ್ ಅಧಿಕಾರಿ ಶ್ರೀಶೈಲ ಬುಲರ್ಿ, ಬಿಆರ್ಪಿ ರಮೇಶ ಅವಟಿ, ಸಂಪನ್ಮೂಲ ಶಿಕ್ಷಕರಾದ ದುಂಡಯ್ಯ ಹಿರೇಮಠ, ಸಂಗಮೇಶ ಉಟಗಿ, ಕಾಡೇಶ ಹಂಚಿನಾಳ, ರವಿ ಹೊನಗೌಡ, ಸಂಪನ್ಮೂಲ ಶಿಕ್ಷಕರಾಗಿ ಶ್ರೀಶೈಲ ಹಲ್ಯಾಳ, ಸದಾಶಿವ ಮೇತ್ರಿ, ಎಸ್.ಎಸ್.ಚಲವಾದಿ, ಎಚ್.ಎಸ್.ಹಾಲಳ್ಳಿ, ಹೆಚ್.ವೈ.ಆಲಮೇಲ, ಬಸವರಾಜ ಜಂಬಗಿ, ಎಂ.ಎನ್.ಕಮತೆ, ಹಣಮಂತ ನ್ಯಾಮಗೌಡ, ರಾಜಕುಮಾರ ರಾಠೋಡ, ರಾಜು ಶಿಂಧೆ, ಬಿಆರ್ಪಿಗಳಾದ ರಾಜೇಂದ್ರ ಗುದಿಗೆನ್ನವರ, ಶಿವು ಯಾದವಾಡ, ಬಸವರಾಜ ಪಾಟೀಲ ಇದ್ದರು.


ಸುದ್ದಿ ಓದಿ