ವಿದ್ಯಾರ್ಥಿಗಳಿಗೆ ಬಹುಮುಖ ಪ್ರತಿಭೆಯ ಪ್ರಭಾವಳಿ ಅಗತ್ಯ: ಎಸ್.ಐ.ಕುಂದಗೋಳ
ಲೋಕದರ್ಶನ ವರದಿ
ಮಹಾಲಿಂಗಪುರ 05: ವಿದ್ಯಾರ್ಥಿಗಳು ಕೇವಲ ಪಠ್ಯ ಜ್ಞಾನಕ್ಕೆ ಸೀಮಿತವಾಗದೇ ಪ್ರತಿಭೆಯ ಪ್ರಭಾವಳಿ ಬೆಳೆಸಿಕೊಂಡು ಪ್ರಭಾವಿಯಾಗಿ ಬೆಳೆಯಬೇಕು ಎಂದು ಕೆಎಲ್ಇ ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ ಹೇಳಿದರು. ಸ್ಥಳೀಯ ಕೆಎಲ್ಇ ಸಂಸ್ಥೆಯ ಬಿಸಿಎ, ಬಿಬಿಎ ಕಾಲೇಜಿನಲ್ಲಿ ಪಿಯು ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಎಐ ಓರಾ-2026 ಎಂಬ ಪ್ರತಿಭಾ ಅನ್ವೇಷನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸುಪ್ತ ಪ್ರತಿಭೆಯ ಅನಾವರಣಕ್ಕೆ ವರದಾನದಂತಿರುವ ಇಂಥ ವೇದಿಕೆಯಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯ ಮೂಲಕ ಮಿಂಚಬೇಕು ಎಂದರು. ಉಪನ್ಯಾಸಕ ಶಿವಲಿಂಗ ಸಿದ್ನಾಳ ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿ, ವಿದ್ಯಾರ್ಥಿಗಳು ಕೌಶಲ್ಯಭರಿತ ತಾಂತ್ರಿಕ ಶಿಕ್ಷಣ ಪಡೆದು ಉದ್ಯೋಗ ಮಾಂತ್ರಿಕರಾಗಿ ಹೊರಹೊಮ್ಮಬೇಕು ಎಂದರು.
ನಾಲ್ಕು ಜಿಲ್ಲೆಗಳಿಂದ ಅಂದಾಜು 36 ಕಾಲೇಜುಗಳಿಂದ 700 ವಿದ್ಯಾರ್ಥಿಗಳು ನೋಂದಾಯಿಸಿ ಭಾಗವಹಿಸಿ ರಸಪ್ರಶ್ನೆ, ಸೋಲೋಡಾನ್ಸ್, ಪೆನ್ಸಿಲ್ ಸ್ಕೆಚ್, ಗೇಮಿಂಗ್, ನೋ ಯುವರ್ ನೇಮ್, ಪ್ರಬಂಧ, ರಂಗೋಲಿ, ರೀಲ್ ಮೇಕಿಂಗ್, ಫೋಟೋಗ್ರಾಫಿ, ಸಿಂಗಿಂಗ್, ಸ್ಪೀಚ್, ಮೆಹಂದಿ, ಎಐ ಕ್ವಿಜ್, ಎಐ ಪೋಸ್ಟರ್ ಮೇಕಿಂಗ್, ಎಐ ಗ್ರೀಟಿಂಗ್ ಕಾರ್ಡ್, ಪೋಯೆಟ್ರಿ, ಮೋನೋ ಆ್ಯಕ್ಟಿಂಗ್, ಯೂನಿಕ್ ಐಡಿಯಾ ಸೇರಿದಂತೆ 18 ಸ್ಪರ್ಧೆಗಳಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಮಧ್ಯಾಹ್ನ ಬೆಳಗಾವಿಯ ರಾ್ಯಪ್ ಕನ್ನಡ ಗಾಯಕ ಕ್ರಾಂತಿ ಕನ್ನಡ ರಾಜ್ಯೋತ್ಸವ ಗೀತೆಗಳನ್ನು ಹಾಡಿ ರಂಜಿಸಿದರು. ಬಿಸಿಎ ಸಂಯೋಜಕ ಎಸ್.ಐ.ಪಾಟೀಲ, ಬಿಬಿಎ ಸಂಯೋಜಕ ಶೀರೀಶ್ ಹಳೆಮನಿ, ಆನಂದ ಉರಬಿ, ವಿನಾಯಕ ಬಡಿಗೇರ, ಅಕ್ಷತಾ ಎಚ್, ಸುಮಾ ಕೆ, ಅಂಕಿತಾ ಕೆ, ರಶ್ಮಿ ಬಂಡಿಗಣಿ, ಕಿರಣ ಜಾಡರ, ವೈಷ್ಣವಿ ಪತ್ತಾರ, ತೈಬಾ ನಂದಗಡಕರ, ಅನ್ನಿಸಾ ಜಮಖಂಡಿ, ಪೂಜಾ ಕೊಣ್ಣೂರ, ಸನಾ ಪಕಾಲಿ, ಶ್ರೇಯಾ ಶಿವಶಿಂಪಿ, ಅಕ್ಷತಾ ಸಂತಿ ಅಶ್ವಿನಿ ಪಾಟೀಲ ಹಾಗೂ ಸಿಬ್ಬಂದಿ ಇದ್ದರು.