ಟೆಬಲ್ ಟಿನ್ನಿಸ್ ಸ್ಪರ್ಧೆಯಲ್ಲಿ ಅಥಣಿಯ ಜೆ.ಎ.ಕಾಲೇಜನ ವಿದ್ಯಾರ್ಥಿ ದ್ವಿತೀಯ ಸ್ಥಾನ
ಅಥಣಿ, 17 : ನಿಪ್ಪಾಣಿ ನಗರದ ಜಿ.ಐ.ಬಾಗೇವಾಡಿ ಮಹಾವಿದ್ಯಾಲಯದಲ್ಲಿ ನಡೆದ ಜಿಲ್ಲಾ ಮಟ್ಟದ ಟೆಬಲ್ ಟಿನ್ನಿಸ್ ಸ್ಪರ್ಧೆಯಲ್ಲಿ ಅಥಣಿಯ ಜಾಧವಜಿ ಶಿಕ್ಷಣ ಸಂಸ್ಥೆಯ ಜೆ.ಎ.ಕಾಲೇಜನ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಜೆ.ಎ.ಕಾಲೇಜ ವಿದ್ಯಾರ್ಥಿನಿ ಲಕ್ಷ್ಮೀ ಕಾಂಬಳೆ ಮತ್ತು ಭಕ್ತಿ ಪವಾರ ಟೆಬಲ್ ಟೆನ್ನಿಸ್ ಸ್ಲರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಳ್ಳುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಜೆಯಾಗಿದ್ದು, ಆಯ್ಕೆಯಾದ ವಿದ್ಯಾರ್ಥಿಗಳನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ರಾಮ ಕುಲಕರ್ಣಿ, ಸಂಚಾಲಕ ಮಂಡಳಿಯ ಸದಸ್ಯ ಸಂದೀಪ ಸಂಗೋರಾಮ, ಪ್ರಾಚಾರ್ಯ ಎಮ್.ಪಿ.ಮೇತ್ರಿ ಮತ್ತು ಸಂಚಾಲಕ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ.