ಕಂಪ್ಯೂಟರ್ ಶಿಕ್ಷಣದಲ್ಲಿ ವಿದ್ಯಾರ್ಥಿ ಸಾಧನೆ
ಲೋಕದರ್ಶನ ವರದಿ,
ಜಮಖಂಡಿ : 20; ನಗರದ ಕರ್ನಾಟಕ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಕಂಪ್ಯೂಟರ್ ಶಿಕ್ಷಣದಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಬೆಂಗಳೂರು ಕೆಎಸ್ಈಎಎಬಿ ಇವರು ನಡೆಸುವ ಕಂಪ್ಯೂಟರ್ ಪರೀಕ್ಷೆಯಲ್ಲಿ ರ್ಯಾಂಕ್ ಗಳಿಸಿ ವಿಶೇಷ ಸಾಧನೆ ಮಾಡಿದ್ದಾರೆಂದು ಸಂಸ್ಥೆಯ ಮುಖ್ಯಸ್ಥ ಮಲ್ಲಿಕಾರ್ಜುನ ಬಡಚಿ ತಿಳಿಸಿದ್ದಾರೆ.
ಕಂಪ್ಯೂಟರ್ ಪರೀಕ್ಷೆಯಲ್ಲಿ 100 ಕ್ಕೆ 100 ಫಲಿತಾಂಶ ಬಂದಿದೆ. ಪರೀಕ್ಷೆಗೆ ಒಟ್ಟು 28 ವಿದ್ಯಾರ್ಥಿಗಳು ಹಾಜರಾಗಿದ್ದು, ಅದರಲ್ಲಿ 09 ವಿದ್ಯಾರ್ಥಿಗಳು ರ್ಯಾಂಕ ಶ್ರೇಣಿ, 11 ವಿದ್ಯಾರ್ಥಿ ಗಳು ಪ್ರಥಮ ಶ್ರೇಣಿ, ಐವರು ದ್ವಿತೀಯ ಶ್ರೇಣೆ ಹಾಗೂ ಓರ್ವ ವಿದ್ಯಾರ್ಥಿ ಉತ್ತೀರ್ಣರಾಗಿದ್ದಾರೆ. ಕಂಪ್ಯೂಟರ್ ಪರೀಕ್ಷೆಯಲ್ಲಿ ಪ್ರಥಮ ಕಾಶಿಬಾಯಿ ತೇಲಿ, ದ್ವಿತೀಯ ಸೌಂದರ್ಯ ಜಕಾತಿ, ತೃತೀಯ ಸಾಗರ ಅಂತರದಾನಿ ಸಾಧನೆಗೈದು ಸಂಸ್ಥೆಗೆ ಕೀರ್ತಿ ತಂದಿದ್ದಾರೆ. ವಿದ್ಯಾಥರ್ಿಗಳ ಈ ಸಾಧನೆಗೆ ಸಂಸ್ಥೆ ಸಂಸ್ಥಾಪಕ ಮಲ್ಲಿಕಾರ್ಜುನ ಬಡಚಿ, ಪ್ರಾಚಾರ್ಯೆ ಶೋಭಾ ಬಡಚಿ ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.