ನೀರಾವರಿಯೊಂದಿಗೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮ: ರಾಜು ಕಾಗೆ
ಅಥಣಿ 26: ಕಾಗವಾಡ ಮತಕ್ಷೇತ್ರದಲ್ಲಿ ನನ್ನ ಅಧಿಕಾರವಧಿಯಲ್ಲಿ ನೀರಾವರಿಯೊಂದಿಗೆ ಎಲ್ಲ ಸಮುದಾಯಗಳ ಅಭಿವೃದ್ಧಿಗೆ ಶ್ರಮಿಸುವುದಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಮತ್ತು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಅವರು ಕಾಗವಾಡ ಮತಕ್ಷೇತ್ರದ ಉಗಾರ ಪುರಸಭೆ ವ್ಯಾಪ್ತಿಯಲ್ಲಿ ಅಲ್ಪ ಸಂಖ್ಯಾತ ಇಲಾಖೆಯಡಿ 1ಕೋಟಿ 73 ಲಕ್ಷ ರೂ.ಅನುದಾನದಲ್ಲಿ ಮಂಜೂರಾದ 7 ರಸ್ತೆಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.
ಅಲ್ಪ ಸಂಖ್ಯಾತ ಜೈನ್ ಹಾಗೂ ಮುಸ್ಲಿಂ ಸಮಾಜ ಬಾಂಧವರು ವಾಸ ಮಾಡುವ ಉಗಾರ ಖುರ್ದ ಪಟ್ಟಣದ ವಿವಿಧ ಗಲ್ಲಿಗಳಲ್ಲಿ ಸುಸಜ್ಜಿತವಾದ ಸಿಮೇಂಟ್ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುವುದು ಎಂದ ಅವರು ಮುಂದಿನ ದಿನಗಳಲ್ಲಿ ಜುಗೂಳ, ಶಿರಗುಪ್ಪಿ, ಗುಂಡೇವಾಡಿ, ಪಾರ್ಥನಹಳ್ಳಿ ಸೇರಿದಂತೆ ಇನ್ನೂ ಅನೇಕ ಗ್ರಾಮಗಳಲ್ಲಿ ಅಲ್ಪ ಸಂಖ್ಯಾತ ಸಮುದಾಯದ ಅಭಿವೃದ್ಧಿಗಾಗಿ ವಿಶೇಷ ಯೋಜನೆ ರೂಪಿಸಿ ಅನುದಾನ ತರುತ್ತೇನೆ ಎಂದರು.
ಕಾಗವಾಡ ಮತಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಸಮುದಾಯಗಳ ಅಭಿವೃದ್ಧಿಗಾಗಿ ಇತ್ತೀಚಿಗೆ ನಾನು ಸಚಿವ ಜಮೀರ ಅಹ್ಮದರನ್ನು ಭೇಟಿ ಮಾಡಿ 25 ಕೋಟಿ ಅನುದಾನ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿಕೊಂಡಿದ್ದು, ನನ್ನ ಮನವಿಗೆ ಸ್ಪಂದಿಸಿದ ಸಚಿವರು 25 ಕೋಟಿ ಅನುದಾನ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದ ಅವರು ಸಚಿವ ಜಮೀರ್ ಅಹ್ಮದ ಭರವಸೆ ನೀಡಿದ್ದಾರೆ ಎಂದು ಹೇಳಿದರು.
ಶಾಸಕ ರಾಜು ಕಾಗೆ ಉಗಾರ ಖುರ್ದ ಪಟ್ಟಣದಲ್ಲಿ ಮಾಸಾಬಿ ದರ್ಗಾದಿಂದ ಕೃಷ್ಣಾ ನದಿವರೆಗೆ, ಉರ್ದು ಶಾಲೆಯಿಂದ ಭಗವಂತ ಶಿರಗೂರ ಜೈನ್ ಮನೆಯವರೆಗೆ, ರೀಯಾಜ ಅಬ್ದುಲ್ ರಹಿಮ ಬಿಜಾಪುರ ಮನೆಯಿಂದ ಮೋಮಿನ್ ಮನೆಯವರೆಗೆ, ಹಳೆಯ ಉಗಾರ ಬಿ.ಕೆ ರಸ್ತೆಯಿಂದ ಮುನೀರ ಸಿಕಂದರ ನದಾಫ ಮನೆಯವರೆಗೆ, ಶಿಕಂದರ ಮೈಶಾಳ ಮನೆಯಿಂದ ಕೃಷ್ಣಾ ನದಿವರೆಗೆ, ಶಬ್ಬೀರ ಮುಲ್ಲಾ ಮನೆಯಿಂದ ಗುಲಾಬ ಲಾಂಡಗೆ ಮನೆಯವರೆಗೆ, ಶಬ್ಬೀರ ಅಹ್ಮದ ಹುಕ್ಕೇರಿ ಮನೆಯಿಂದ ಬಾಬು ಪಠಾಣ ಮನೆಯ ವರೆಗೆ ಕಾಂಕ್ರೀಟ್ ರಸ್ತೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಧರೀಣರಾದ ಹರುಣ ಮುಲ್ಲಾ, ಸತೀಶ ಜಗರಾಪ, ಅಮರ ಜಗತಾಪ, ಬಸು ಸಾಂಗಾವೆ, ರಾಜು ಪೂಜಾರಿ, ಮಹಾದೇವ ವಡಗಾಂವಿ, ಮದನ ದೇಶಿಂಗೆ, ರೋಹನ್ ನಾಯಕ, ಅಶೋಕ ಕಾಂಬಳೆ, ಶಂಕರ ವಾಘಮೋಡೆ, ಸುರೇಶ ವಾಘಮೋಡೆ, ಸಚೀನ ಜಗತಾಪ, ಫಿರೋಜ ಸನದಿ, ಪುರಸಭಾ ಮುಖ್ಯಾಧಿಕಾರಿ ಸುನೀಲ ಬಬಲಾದಿ, ಲ್ಯಾಂಡ್ ಆರ್ಮಿ ಇಲಾಖೆಯ ಮಲ್ಲಿಕಾರ್ಜುನ ಕೆಂಪವಾಡೆ ಉಪಸ್ಥಿತರಿದ್ದರು.