ಬೀದಿ ದೀಪಗಳ ರಿಪೇರಿ ಮಾಡುವ ಗುತ್ತಿಗೆ ಕಾಮರ್ಿಕರಿಗೆ ಕನಿಷ್ಟ ವೇತನ ನೀಡುವಂತೆ ಆಗ್ರಹ

ಬೀದಿ ದೀಪಗಳ ರಿಪೇರಿ ಮಾಡುವ ಗುತ್ತಿಗೆ ಕಾಮರ್ಿಕರಿಗೆ ಕನಿಷ್ಟ ವೇತನ ನೀಡುವಂತೆ ಆಗ್ರಹ

ಬಳ್ಳಾರಿ 02:ಮಹಾನಗರ ಪಾಲಿಕೆಯಲ್ಲಿ ವಿದ್ಯುತ್ ಬೀದಿದೀಪಗಳು ರಿಪೇರಿ ಮಾಡುವಂತ ಗುತ್ತಿಗೆ ಕಾಮರ್ಿಕರು ಸುಮಾರು 20 ವರ್ಷಗಳಿಂದ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರ ಹತ್ತಿರ ಸುಮಾರು 25 ಕಾಮರ್ಿಕರು ವಿದ್ಯುತ್ ಬೀದಿ ದೀಪಗಳನ್ನು ರಿಪೇರಿ ಮಾಡುತ್ತಾ ತಮ್ಮ ಜೀವನವನ್ನು ಸಾಗಿಸುತ್ತಿದ್ದಾರೆ. ಆದರೆ ಅದೇ ರೀತಿಯಲ್ಲಿ ಮಹಾನಗರ ಪಾಲಿಕೆಯಲ್ಲಿ ಗುತ್ತಿಗೆದಾರರ ಬಳಿ ಕೆಲಸ ನಿರ್ವಹಿಸುತ್ತಿರುವ ಪೌರಕಾಮರ್ಿಕರಿಗೆ, ವಾಹನ ಚಾಲಕರಿಗೆ ಹಾಗೂ ನೀರು ಸರಬರಾಜು ಮಾಡುವ ಕಾಮರ್ಿಕರಿಗೆ ಮೇಲ್ಕಂಡ ಸಕರ್ಾರ ಆದೇಶದ ಪ್ರಕಾರ ಸುಮಾರು ಒಂದು ವರ್ಷದ ಹಿಂದೆ ಇವರೆಲ್ಲರಿಗೆ ಗೌರವ ವೇತನ ಹೆಚ್ಚಾಗಿರುವುದರಿಂದ ಇವರೆಲ್ಲರೂ ಆಥರ್ಿಕವಾಗಿ ಹಾಗೂ ಗೌರವಪ್ರದವಾಗಿ ಜೀವನವನ್ನು ಸಾಗಿಸುತ್ತಿದ್ದಾರೆ. 

ಅಷ್ಟೇ ಅಲ್ಲದೇ ಇತ್ತೀಚೆಗೆ ಸಕರ್ಾರವು ಪೌರಕಾಮರ್ಿಕರಿಗೆ ಗುತ್ತಿಗೆದಾರ ಪದ್ದತಿಯನ್ನು ರದ್ದುಪಡಿಸಿ, ನೇರವಾಗಿ ಪಾಲಿಕೆಯಲ್ಲಿ ನೇಮಕ ಮಾಡಿಕೊಂಡು ಮತ್ತು ಉಳಿದಂತಹ ಪೌರ ಕಾಮರ್ಿಕರಿಗೆ ಪಾಲಿಕೆ ವತಿಯಿಂದಲೇ  ವೇತನವನ್ನು ನೀಡುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ಗುತ್ತಿಗೆದಾರ ಪದ್ದತಿಯನ್ನು ರದ್ದುಪಡಿಸಲಾಗುತ್ತಿದೆ. ಎಲ್ಲಾ ವಿಭಾಗಗಳಲ್ಲಿ ಗುತ್ತಿಗೆದಾರರ ಹತ್ತಿರ ಕೆಲಸ ಮಾಡುವ ಕಾಮರ್ಿಕರಿಗೆ ಸಕರ್ಾರ ಆದೇಶದ ಪ್ರಕಾರ ಗೌರವ ವೇತನ ಹೆಚ್ಚಾಗಿದ್ದು, ಆದರೆ ಕೇವಲ ವಿದ್ಯುತ್ ಬೀದಿದೀಪಗಳು ರಿಪೇರಿ ಮಾಡುವಂತಹ ಕಾಮರ್ಿಕರಿಗೆ ಮಾತ್ರ ಯಾವ ರೀತಿ ಗೌರವ ವೇತನ ಹೆಚ್ಚಾಗಿಲ್ಲ. ಎಲ್ಲರೂ ಗೌರವಪ್ರದವಾಗಿ ಆಥರ್ಿಕವಾಗಿ ಸಮಾಜದಲ್ಲಿ ಸುಖವಾಗಿ ಜೀವನ ಮಾಡಬೇಕಾದರೆ ತಮ್ಮಂತಹ ನಿಷ್ಠಾವಂತಹ ಅಧಿಕಾರಿಗಳು ಈ ಹೊಸ ವರ್ಷದಲ್ಲಾದರೂ ಬಳ್ಳಾರಿ ಮಹಾನಗರ ಪಾಲಿಕೆಯಲ್ಲಿ ವಿದ್ಯುತ್ ಬೀದಿದೀಪಗಳು ರಿಪೇರಿ ಮಾಡುವಂತ ಗುತ್ತಿಗೆ ಕಾಮರ್ಿಕರಿಗೆ ಸಕರ್ಾರ ಆದೇಶದ ಪ್ರಕಾರ 2019ನೇ ಜನವರಿ ತಿಂಗಳಿನಿಂದ ರೂ.13,365/-ಗಳ ವೇತನ ಹೆಚ್ಚಿಸಿ, 

ಈ ಕಾಮರ್ಿಕರಿಗೆ ವೇತನವನ್ನು ಗುತ್ತಿಗೆದಾರರ ಮುಖಾಂತರವಲ್ಲದೇ ನೇರವಾಗಿ ಪಾಲಿಕೆ ಮುಖಾಂತರವೇ ಎಲ್ಲರಿಗೂ ಗೌರವ ವೇತನ ನೀಡುವಂತೆ ಅವರ ಕುಟುಂಬಗಳಲ್ಲಿ ಆಥರ್ಿಕ ಬೆಳಕು ತರುವಂತೆ ಯುವಸೇನೆ ಆಕ್ಷನ್ ಕ್ಲಬ್ ನ ಅಧ್ಯಕ್ಷ ಮೇಕಲ ಈಶ್ವರೆಡ್ಡಿ ಮತ್ತು ಸಂಘಟನೆಯ ಸದಸ್ಯರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.


ಸುದ್ದಿ ಓದಿ