ಬೀದಿ ನಾಯಿ ದಾಳಿ: ಮಹಿಳೆಗೆ ಕಚ್ಚಿ ತೀವ್ರ ಗಾಯ
ಜಮಖಂಡಿ 20: ಬೀದಿ ನಾಯಿಯ ಅಟ್ಟಹಾಸದಿಂದ ಮಹಿಳೆಯೊರ್ವಳನ್ನು ನೆಲಕ್ಕೆ ಉರುಳಿಸಿ ಮನಬಂದತೆ ಮೈ ತುಂಬ ಕಚ್ಚಿ ಗಾಯಗೊಳಿಸಿದ್ದು. ಸಾರ್ವಜನಿಕ ಸಹಾಯದಿಂದ ಪ್ರಾಣಾಪಾಯದಿಂದ ಪಾರು ಮಾಡಿದ ಘಟನೆ ಬೆಳಗಿನ ಜಾವದಲ್ಲಿ ನಡೆದಿದೆ.
ನಗರದ ವಿಜಯಪೂರ ರಸ್ತೆಯ ಬಸವ ನಗರದಲ್ಲಿ ಬೆಳಗಿನ ಜಾವದಲ್ಲಿ ಮನೆಯ ಅಂಗಳದಲ್ಲಿ ಇರುವ ಸಮಯದಲ್ಲಿ ಬೀದಿ ನಾಯಿಯೊಂದು ಮಹಿಳೆಯ ಮೇಲೆ ದಾಳಿ ನಡೆಸಿ, ಸಿಕ್ಕ ಜಾಗದಲ್ಲಿ ಬಾಯಿ ಹಾಕಿ ನೆಲೆಕ್ಕೆ ಉರುಳಿಸಿ, ಕೈ ಭಾಗಕ್ಕೆ ಹಾಗೂ ಉಳಿದ ಕಡೆಗಳಲ್ಲಿ ಕಚ್ಚಿ ತೀವ್ರ ಗಾಯಗೊಳಿಸುತ್ತಿದಂತೆ ಮಹಿಳೆಯ ಕೂಗಾಟ ಚೀರಾಟದಿಂದ ಶಾಲೆಗೆ ಮಕ್ಕಳನ್ನು ಬಿಡಲು ಹೋದ ಸಾರ್ವಜನಿಕರು ಓಡಿ ಹೋಗಿ ಮಹಿಳೆಯನ್ನು ಬೀದಿ ನಾಯಿಯಿಂದ ಪಾರು ಮಾಡಿದ್ದಾರೆ. ಮಹಿಳೆಯ ಕೈ ಭಾಗ, ಭುಜ ಭಾಗಕ್ಕೆ ಕಚ್ಚಿದ ಕಾರಣ ತೀವ್ರ ರಕ್ತ ಸ್ರಾವದಿಂದ ನರಳಾಡುತ್ತಿದ್ದು ಅಲ್ಲಿದ್ದ ನಾಯಿಯನ್ನು ಸಾರ್ವಜನಿಕರು ಓಡಿಸಿದ್ದಾರೆ.
ನಗರಸಭೆ ಪೌರಾಯುಕ್ತೆ ಅವರಿಗೆ ಸಾರ್ವಜನಿಕರು ಬೀದಿ ನಾಯಿಗಳ ಅಟ್ಟಹಾಸದ ಬಗ್ಗೆ ಸಾಕಷ್ಟು ಮನವಿ ಮಾಡಿಕೊಂಡರು ಸಹ ಕ್ಯಾರೆ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ಪೌರಾಯುಕ್ತೆ ಅವರಿಗೆ ಅಲ್ಲಿದ್ದ ಜನರು ಮುಖಕ್ಕೆ ಉಗಿದು ಮಂಗಳಾರತಿ ಮಾಡಿ ಹಿಡಿಶಾಪ ಹಾಕುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.