ಕಥೆ ಮತ್ತು ವಿಶೇಷ ಲೇಖನಗಳು

ವ್ಯಕ್ತಿ ಪೂಜೆ ನಿಲ್ಲಸಿ, ರಾಷ್ಟ್ರ ತತ್ವ ಪಾಲಿಸಿ !

ವ್ಯಕ್ತಿ ಪೂಜೆ ನಿಲ್ಲಸಿ, ರಾಷ್ಟ್ರ  ತತ್ವ ಪಾಲಿಸಿ !

- ಎಫ್ ಎಸ್ ಪಾಟೀಲ, ಬೆಳಗಾವಿ

'Personality worshiping culture is antithesis to democracy',   ವ್ಯಕ್ತಿ ಪೂಜೆ ಎನ್ನುವುದು ಪ್ರಜಾಸತ್ತೆಗೆ, ರಾಷ್ಟ್ರೀಯ ಭಾವಕ್ಕೆ ಮಾರಕ. "ನಾವು ಭಾರತೀಯ ಜನಗಳು'' ಬಹು ಕಾಲದಿಂದ ಒಂದು ತಪ್ಪು ಮಾಡುತ್ತಿದ್ದೇವೆ ಅದೇನೆಂದರೆ ನಮ್ಮ ರಾಷ್ಟ್ರ ತತ್ವಗಳನ್ನು ಪಾಲಿಸದೇ, ಹಲವಾರು ವ್ಯಕ್ತಿಗಳನ್ನು ಪೂಜಿಸುತ್ತಾ ಬಂದಿದ್ದೇವೆ ಹಿಂದೆ ರಾಜರನ್ನು ದೇವರೆಂದುಕೊಳ್ಳುತ್ತಿದ್ದ ನಾವು ಗುರುಪೂಜೆಯನ್ನು ಇಂದಿಗೂ ಕೈಗೊಳ್ಳುವ  ನಾವು ವಿವೇಚನೆ, ಆತ್ಮಾವಲೋಕನವಿಲ್ಲದೇ ಇಂದಿಗೂ ಕುರುಡುತನದಲ್ಲಿ ಹಲವು ಅನರ್ಹ ವ್ಯಕ್ತಿಗಳ ಪೂಜನೆಯಲ್ಲಿ ತೊಡಗಿ ರಾಷ್ಟ್ರಾತ್ಮಕ್ಕೆ ವಂಚನೆ ಮಾಡುತ್ತಿದ್ದೇವೆ.

ಬಬ್ಬ ವ್ಯಕ್ತಿಗಿಂತ, ದೇಶ, ರಾಷ್ಟ್ರ, ಸಮಾಜ, ಜನಸಮೂಹ ಗಣ ಸಂಸ್ಥೆ, ಸಂವಿಧಾನ ಮುಖ್ಯ  No individual is greater than any institution ಆದರೂ ನಾವು ಜಾತಿ, ಮತ ಪಂಥ ಆರಾಧನ ಪದ್ಧತಿಯಲ್ಲಿ, ಆ-ಈ ಮತ ಪಂಥಗಳನ್ನು ಅಥವಾ ಹಿಂದಿನ ಒಬ್ಬ ರಾಜ ನಮ್ಮ ಮತದವನು ಎಂಬ ಹೆಮ್ಮೆಗಾಗಿ, ನಮ್ಮ ಜಾತಿ ಮತದವನ್ನು ಪ್ರತಿಪಾದಿಸಿದವರು ಇವರು ಎಂಬ ಉಪಾಸಣೆ ಕ್ರಮಕ್ಕಾಗಿ ವ್ಯಕ್ತಿ ಪೂಜೆ ಎಂಬ ಪಿಡಗನ್ನು ಬೆಳೆಸಿಕೊಂಡು. ಅವರ ಜಯಂತಿ ಆಚರಣೆ, ಮಠಗಳನ್ನು ಕಟ್ಟುವುದು, ಅವರ ಹೆಸರಿನಲ್ಲಿ ಜಾತ್ರೆ ನಡೆಸುವುದು, ಅದಕ್ಕಾಗಿ ಚಳುವಳಿ ನಡೆಸುವುದು, ಗುಂಪಿಗಾರಿಕೆ ಪ್ರಾಭಲ್ಯ ಸಾಧಿಸುವುದು, ರಾಜಕೀಯವಾಗಿ ಸಕರ್ಾರದ ಮೇಲೆ ಪ್ರಭಾವ ಬೀರಿ ಆ ಜಯಂತಿಗಳಂದು ಸಕರ್ಾರಿ ರಜೆ ಘೋಷಿಸಿಕೊಳ್ಳುವುದು, ಸಕರ್ಾರದ ಖಚರ್ಿನಲ್ಲಿ ದುಂದು ವೆಚ್ಚ ಮಾಡಿಕೊಳ್ಳುವುದು. ಉತ್ಸವದ ಉಪಟಳದಲ್ಲಿ ಸಕರ್ಾರದ ಬೊಕ್ಕಸಕ್ಕೆ ನಷ್ಟವಾದರೂ ಸ್ವೇಚ್ಛಾಚಾರಗೈಯುವುದು ಸತ್ಪ್ರಜೆೆಗಳ ಸಾಧುತನವಲ್ಲ.

    Personality Cult  ಅಥವಾ Cult of Personality ಎನ್ನುವುದು ನಮ್ಮಲ್ಲಿ ಒಂದು ಪಿಡುಗು, ಅನಿಷ್ಟತೆ ಬೆಳೆಸುತ್ತಿದೆ ಮತೀಹಿನತೆಯ ಅತಿರೇಕಕ್ಕೆ ಹೋಗಿ, ಸಕರ್ಾರವೆನ್ನುವ ವ್ಯವಸ್ಥೆ ತನ್ನ ಸಾರ್ವಭೌಮಿಕ ಕಾರ್ಯಗಳನ್ನು ಮಾಡದೇ, ನಿರರ್ಥಕವಾಗಿ  ಕೈಚೆಲ್ಲಿ ಕುಳಿತುಕೊಳ್ಳುವಂತಹ ಪರಿಸ್ಥಿತಿಗಳನ್ನು ನೋಡಿದ್ದೇವೆ.

ಉದಾಹರಣೆ ಹಲವಾರು; ದಿ. ಡಾ. ರಾಜಕುಮಾರ್ ಅವರನ್ನು ಕಾಡುಗಳ್ಳ ವೀರಪ್ಪನ್ ಅಪಹರಿಸಿಕೊಂಡು ಹೋದಾಗ ಇಡೀ ರಾಜ್ಯವೇ ತಲ್ಲಣಗೊಂಡು ಎಷ್ಟೋ ಜನ ಉಪವಾಸ, ದೇವಸ್ಥಾನಗಳಲ್ಲಿ ಉರುಳುಸೇವೆ, ಅನ್ನ ಆಹಾರದಲ್ಲಿ ಮಣ್ಣು ಉಸುಕು ಸೇರಿಸಿ ತಿನ್ನುವ ವ್ರತಾಚರಣೆ,  ಇಬ್ಬದಿಗೆಯ ಜನಾಂದೋಲನದಲ್ಲಿ ಎರಡು ರಾಜ್ಯಗಳ  ಸಕರ್ಾರಗಳು  ತಮ್ಮ ರಕ್ಷಣಾ ಪಡೆಗಳ ಬಲವನ್ನು ಬಳಸಬೇಕೆ ಅಥವಾ ಬೇಡವೇ ಏಂಬ ದ್ವಂದದಲ್ಲಿದ್ದಾಗ ಸವರ್ೋಚ್ಛ ನ್ಯಾಯಾಲಯದಿಂದ ಎರಡೂ ರಾಜ್ಯ ಸಕರ್ಾರಗಳಿಗೆ  ಛೀಮಾರಿ ಹಾಕಿದ್ದು ಇದೆ. ನೆರೆಯ ಅಂಧ್ರ ತಮಿಳುನಾಡುಗಳಲ್ಲಂತೂ ಈ ವ್ಯಕ್ತಿ ಪೂಜೆ ಅತಿರೇಕದಲಿದ್ದು, ಚಿತ್ರರಂಗದ ತಾರೆಯರಿಗೆ ದೇವಸ್ಥಾನ ಕಟ್ಟುವುದು, ಅವರನ್ನು ದೇವರೆಂದು ಪೂಜಿಸಿ, ರಾಜಕೀಯದ ಅಧಿಕಾರಿ ಮೇರು ಸ್ಥಾನಗಳಲ್ಲಿ ಕೂರಿಸುವುದು ನಡೆಯುತ್ತದೆ, ಅಂತಹವರು ಭ್ರಷ್ಟತೆ ಮೆರೆದು ಸೆರೆವಾಸದಲ್ಲಿದ್ದರೂ ಚುನಾವನೆಗಳಲ್ಲಿ ಸ್ಫಧರ್ಿಸಿ ಜಯಗಳಿಸುತ್ತಾರೆ. ಅಲ್ಲದೇ ಹಲವು ಪೋಲಿಸರೇ ಮೈಮೇಲೆ ಸಿಮೇಎಣ್ಣೆ ಹಾಕಿಕೊಂಡು ಬೆಂಕಿ ಹಚ್ಚಿಕೊಳ್ಳಲು ಮುಂದಾಗಿ ಒಂದು ಸಮೂಹ ಸನ್ನಿ ಸೃಷ್ಟಿಯಾಗುತ್ತದೆ, ಅಂತಹ ನಾಯಕ ವ್ಯಕ್ತಿಗಳ ಜನ್ಮದಿನ-ಮರಣದಿನಗಳಲ್ಲಿ ಹಲವಾರು ಪ್ರಜೆಗಳು ಪ್ರಾಣವನ್ನು ಕಳೆದುಕೊಳ್ಳುತ್ತಾರೆ. ಮಾಜಿ ಪ್ರಧಾನಿ ದಿ. ವಾಜಪೇಯ ಅವರು ಪ್ರಧಾನಿಯಾಗಿದ್ದಾಗ ಅವರ ಜನ್ಮ ದಿನಾಚರಣೆಯಲ್ಲಿ ಸೀರೆ ಅರಿವೆ ಹಂಚುತ್ತಾರೆ ಎಂಬ ಕಾರಣಕ್ಕೆ ಗದ್ದಲ ಕಾಲ್ತುಳಿತದಲ್ಲಿ 25ಜನ ಹಾನಿಯಾಗಿದ್ದು, ಆಂಧ್ರದ ಮುಖ್ಯಮಂತ್ರಿ ದಿ. ಡಾ. ವೈ. ಎಸ್. ರೆಡ್ಡಿ ಅವರು ಅಪಘಾತದಲ್ಲಿ ಮೃತಪಟ್ಟಾಗ ಸುಮಾರು 120 ಜನ ಪ್ರಾಣ ಕಳೆದುಕೊಂಡಿದ್ದು, ದಿ. ರಾಜಕುಮಾರ್ ಅವರ ಅಂತ್ಯಕ್ರೀಯೆಯ ನೂಕು ನುಗ್ಗಾಟದಲ್ಲಿ ಎಂಟು ಜನ ಸಾವನ್ನಪ್ಪಿದ್ದು, ಇಂತಹ ಹಲವಾರು ಪ್ರಕರಣಗಳು ಪ್ರಜಾಸತ್ತೆಗೆ ಋಣಾತ್ಮಕ ಅಂಶಗಳು. ಇದು ನಾವಿನ್ನೂ "ಡೆಮಾಕ್ರಸಿ" ಎಂಬುದನ್ನೇ ಸರಿಯಾಗಿ ಅರಿತಿಲ್ಲ ಎಂದು ತೋರಿಸುತ್ತದೆ. ಮೆರಿಟ್ರೋಕ್ರಸಿ ಇನ್ನೂ ತುಂಬಾ ದೂರಸಾಧನೆ.

ಏನಿರುತ್ತದೆ ವ್ಯಕ್ತಿ ಪೂಜೆಯಲ್ಲಿ? ಒಬ್ಬ ವ್ಯಕ್ತಿ ತನ್ನ ಬಗ್ಗೆ ಅಥವಾ ಅವನ ಬಗ್ಗೆ ಹಲವಾರು ಜನ ಒಂದು ಸಮೂಹ ಸನ್ನಿಯಲ್ಲಿ ಜನ-ಮಾಧ್ಯಮ ಬಳಸಿಕೊಂಡು ಪ್ರಚಾರ, ಪ್ರಸಾರಣಾಕಾರ್ಯ ನಡೆದಿರುತ್ತದೆ. ಅಲ್ಲೊಂದೇನೋ ನಾಯಕತ್ವದ ಆದರ್ಶ, ಅಥವಾ ಸಾರ್ವಜನಕವಾಗಿ ದೇವರಂತಹ ಬಿಂಬ, ಅವರನ್ನು ಪ್ರಶ್ನಿಸಲಾರದಂತಹ ಹೊಗಳಿಕೆ ಆ ವ್ಯಕ್ತಿಗೆ ಒಂದು ಉನ್ನತ ಅಧಿಕಾರ, ಆ ವ್ಯಕ್ತಿತ್ವದಲ್ಲೊಂದು ಮೋಡಿಮಾಡುವ, ಜನ ಮನ ಮರಳುಗೊಳಿಸುವ ಯುಕ್ತಿ ಅಥವಾ ಅದೇ ಒಂದು ಶಕ್ತಿ, ಪ್ರಭೆ, ಪ್ರಭಾವಳಿ, ನಮ್ಮ ದೇಶದಲ್ಲಂತೂ ಸ್ವಘೋಷಿತ ದೇವಮಾನರಿಗೆ ಕಡಿಮೆಯಿಲ. ಏನಾದರು? ಏನು ಮಾಡಿದರು? ಆ ಎಲ್ಲ ರಾಮ ರಹೀಮ ಎಂಬ ಹೆಸರಿನ "ಡೇರಾ ಸಚ್ಛಾ ಸೌದಾ" ಜನ? ಅಸಾರಾಮ್ ಬಾಪು? ಏಕಾಏಕಿ ಕಲ್ಲಿನ ಗಣಪನ ಮೂತರ್ಿಗಳು ಹಾಲು ಕುಡಿಯುತ್ತದೆ ಎಂದು ಸಮೂಹ ಸನ್ನಿ ಸೃಷ್ಟಿಸಿದ ದೇವಮಾನವ 'ಚಂದ್ರಸ್ವಾಮಿ'? ಅವರೆಲ್ಲ  ಒಂದಲ್ಲ ಒಂದು ದಿನ ತಮ್ಮ ಪ್ರಭಾವಳಿ ಕಳೆದುಕೊಂಡರು ಅಲ್ಲವೇ? 18 ಮತ್ತು 19ನೇ ಶತಮಾನಗಳಿಂದ ಡೆಮಾಕ್ರಸಿ ಬೆಳೆದಂತೆ, ಜಾತ್ಯಾತೀತತೆ ಬೆಳೆದಂತೆ ದೇವಮಾನವರು ಅಳೆದು, ಆದರೆ ಈ ಛಾಯಾಗ್ರಹಣ ಧ್ವನಿ ದಾಖಲೆ, ಚಲನಚಿತ್ರ, ಮಾಧ್ಯಮ ನಿಮರ್ಾಣ, ಸಾರ್ವಜನಿಕ ಶಿಕ್ಷಣ ಮತ್ತು ವಾಣಿಜ್ಯ ಜಾಹೀರಾತುಗಳಿಂಗಾಗಿ "ರಾಜಕೀಯ ಮತೀಯ ವ್ಯಕ್ತಿತ್ವ ಪೂಜೆ" ಬೆಳೆಯುತ್ತಿವೆ. ಈ ಮಾರಕ ಹಾನಿಕಾರಕ ಬೆಳವಣಿಗೆಯ ಇತ್ತೀಚಿನ ದ್ಯೋತಕ "ಟಿಪ್ಪು ಸುಲ್ತಾನ" ಜಯಂತಿ, ಇಲ್ಲೇನಾಯಿತು? ಒಂದು ಟೋಟಾಲಿಟೇರಿಯನ್ ವ್ಯವಸ್ಥೆಯಾಗಿ ಕೇಂದ್ರಿಕೃತ ಸಕರ್ಾರ ಜನಸಮೂಹದ  ವ್ಯತ್ಯಸ್ತ ಅಭಿಪ್ರಾಯಳಗಿಗೆ ತಾಳ್ಮೆ, ವೈಜ್ಞಾನಿಕ ವೈಚಾರಿಕತೆ ತೋರದೇ  ಜನರ ಅಭಿವ್ಯಕ್ತಿ ಸ್ವಾತಂತ್ರ್ಯ, ವಿಚಾರಗಳನ್ನು ಮನ್ನಿಸದೇ ನಿರಂಕುಶ ನಿಯಂತ್ರಣದಲ್ಲಿ "ಜಯಂತಿ" ಆಚರಣೆ ಅಂಗಡಿ ವ್ಯಾಪಾರ, ಸಂಚಾರ-ಸಾರಿಗೆ, ಕಫ್ಯರ್ೂ ಘೋಷಣೆಯಲ್ಲಿ ತೊಡಗಿತು. ಸಕರ್ಾರದ ಬೊಕ್ಕಸಕ್ಕೆ ಇಬ್ಬದಿಗೆಯ ನಷ್ಟವಾಯಿತು. ಮುಂದೊಂದು ದಿನ ಸಾರ್ವತ್ರಿಕ ರಜೆ ಘೋಷಣೆ ಆದರೇ! ಇದ್ಯಾವ "ಪುರುಷಾರ್ಥ? 

2018ರ ಕೆಲ ರಜಾದಿನ ಜಯಂತಿಗಳನ್ನು ಅವಲೋಕಿಸಿ, ದೇವರ ದಾಸಿಮಯ್ಯ, ರಾಮನವಮಿ, ಮಹಾವೀರ, ಅಂಬೇಡ್ಕರ್, ಬಸವೇಶ್ವರ, ಶಂಕರ, ರಾಮಾನುಜಾಜಾರ್ಯ, ಬ್ರಹ್ಮಶ್ರೀ ನಾರಾಯಣ ಗುರು, ವಿಶ್ವಕರ್ಮ, ಗಾಂಧೀ, ವಾಲ್ಮೀಕಿ, ಕನಕದಾಸ ಈ ಎಲ್ಲ ಜಂಯತಿಗಳ ನಡುವೆ, ಮಂತ್ರಿ, ಸಾಹಿತಿಗಳ ಮರಣ ರಜೆ ಇಲ್ಲದೇ ಹಲವರ ಜಯಂತಿಗಳ ಆಚರಣೆಗಳೂ ಆಗಿವೆ. ಉತ್ಸವಗಳೂ ನಡೆದಿವೆ. ಮಠಾಧೀಶರೂ ಜಿಲ್ಲಾಧಿಕಾರಿಗಳೂ ಸೇರಿ ಹುಗ್ಗಿ ಹೋಳಿಗೆ ಅಡುಗೆ ಮಾಡಿ, ಮಾಡಿಸಿ 'ದಾಸೋಹ' ಎಂದಿದ್ದಾರೆ. 'ರಾಷ್ಟ್ರದ ಯಾವ ತತ್ವ ಸಾರ್ಥಕ್ಯವೋ?

ರಾಷ್ಟ್ರ ಒಂದು, ಗಣ ಸಮೂಹಗಳು ಹಲವು, ವರ್ಷ ಒಂದು, ದಿನಗಳು 365, ಜಯಂತಿ, ಹಬ್ಬಗಳು, ವಾರದ ರಜೆಗಳೆಲ್ಲ ಸೇರಿ 200-250 ದಿನಗಳನ್ನು ನಾವು-ಸಕರ್ಾರ ಸೇರಿ 'ರಾಷ್ಟ್ರೀಯ ಉತ್ಪನ್ನ'ವಿಲ್ಲದೇ ವ್ರಥಾ ಕಾಲಹರಣ ಮಾಡಿ ಕಳೆದರೆ, ಮೇಲಾಗಿ ಬೊಕ್ಕಸವನ್ನು ದುಂದುವೆಚ್ಚದ ದುರುಪಯೋಗಕ್ಕೆ ಬಳಸಿದರೆ, ಎಲ್ಲಿ, ಯಾವುದೋ ಮೂತರ್ಿಯನ್ನು ಎಷ್ಟು ಎತ್ತರಕ್ಕೆ ಕಟ್ಟಿಕೊಂಡರೇನು ಬಂತು ಯುಕ್ತಿ? ಸಂವಿಧಾನದಲ್ಲಿ ಅಡಕವಾಗಿರುವ 'ರಾಷ್ಟ್ರ ತತ್ವಗಳನ್ನು ಸಿದ್ಧಾಂತಗಳನ್ನು ಅಳವಡಿಸಿಕೊಂಡು ಉಪಯೋಗಿಸುವುದೇ ಸತ್ಪ್ರಜೆಯ ಧರ್ಮ ಪಾಲನೆ.


ಸುದ್ದಿ ಓದಿ