ಕಥೆ ಮತ್ತು ವಿಶೇಷ ಲೇಖನಗಳು

ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ

ಮಕ್ಕಳಿಗೆ ಮನೆಯೇ  ಮೊದಲ  ಪಾಠಶಾಲೆ

ಮಕ್ಕಳು ಮಾನವಲೋಕದ ಸುಂದರ ಪುಷ್ಪಗಳು.ಅಂತಹ ಮೃದುಹೃದಯಿಗಳಲ್ಲಿ ಉತ್ತಮ ಮೌಲ್ಯಗಳನ್ನು,ಸಮಾಜ ಬಯಸುವಉತ್ತಮ ಹೃದಯವಂತಿಕೆಯನ್ನುತುಂಬಿ ಸಮಾಜದ ಸತ್ಪ್ರಜೆಗಳನ್ನಾಗಿ ಬೆಳೆಸಬೇಕಾದುದುತಂದೆತಾಯಂದಿರಗುರುತರಜವಾಬ್ದಾರಿ. ಮಕ್ಕಳು ಅಮ್ಮನಿಂದ  ಮೊದಲ  ಮಾತು,ಅಕ್ಷರ ಕಲಿಕೆ, ಅಪ್ಪನಿಂದ ಮಗ್ಗಿ, ಆಟೋಟ, ಅಜ್ಜ-ಅಜ್ಜಿಯರಿಂದ  ಹಾಡು,ಕಥೆಕಲಿಯುತ್ತ   ಬೆಳೆಯುತ್ತವೆ. ಮಕ್ಕಳು  ಸನ್ನಡತೆ, ಧೈರ್ಯ, ಸಾಹಸ, ವಿವೇಕ, ವಿದ್ಯೆಗಳನ್ನು ಮೊದಲು  ಮನೆಯಿಂದಲೇಕಲಿಯಲುಪ್ರಾರಂಭಿಸುತ್ತವೆ.ಹಾಗೆಯೇ  ನಿರಾಶೆ, ಅಧೈರ್ಯ, ಅವಿವೇಕತೆ, ಮತ್ಸರಗಳಂತಹ  ಋಣಾತ್ಮಕ  ಗುಣಗಳನ್ನೂ ಸಹ ಮನೆಯಿಂದಲೇ  ಮೊದಲು  ಮೈಗೂಡಿಸಿಕೊಳ್ಳುತ್ತದೆ. ಹೀಗಾಗಿ  ಮನೆಯೇ  ಮೊದಲ  ಪಾಠಶಾಲೆಯಾಗಿದೆ. ಮಕ್ಕಳ  ಪ್ರಾರಂಭಿಕ  ಶಿಕ್ಷಣವು  ಮನೆಯಿಂದಲೇ  ಪ್ರಾರಂಭವಾಗುತ್ತದೆ.  ಈ ಶಿಕ್ಷಣವು  ಮುಂದಿನ  ಶಿಕ್ಷಣಕ್ಕೆ    ಬುನಾದಿಯಾಗುತ್ತದೆ.

ಮನೆಯು ವಾತ್ಸಲ್ಯದಆಗರ  ಹಾಗೂ  ಪ್ರೀತಿಯ  ಸೆಲೆಯಾಗಿದೆ. ತಂದೆ  ತಾಯಿಗಳ  ಪ್ರೀತಿ, ವಿಶ್ವಾಸ, ವಾತ್ಸಲ್ಯ, ಮಮತೆಗಳ ನಡುವೆ ಮಕ್ಕಳು ಬೆಳವಣಿಗೆ ಹೊಂದುತ್ತಾರೆ. ಈ  ಗುಣಗಳು  ಕೌಟುಂಬಿಕ  ಸೌಖ್ಯದ  ಸೋಪಾನಗಳೂ ಹೌದು. ಇವುಗಳಜೊತೆಗೆ  ಮಕ್ಕಳು  ಸ್ನೇಹ, ಸಹಕಾರ, ತ್ಯಾಗ,ವಿವೇಕ,ಹೊಂದಾಣಿಕೆ, ಶ್ರದ್ಧೆ  ಮುಂತಾದಗುಣಗಳನ್ನೂ ಸಹ  ಮಕ್ಕಳು  ಮನೆಯಿಂದಲೇಕಲಿಯುತ್ತಾರೆ.ತಾಯಿಯತೊಡೆಯು  ಮಗುವಿನ  ಮೊದಲನೆಯ ಶಾಲೆ, ತಾಯಿಯೇ ಮೊದಲ ಗುರುವಾಗಿದ್ದಾಳೆ. ಮಕ್ಕಳ ನಿಷ್ಕಲ್ಮಶ ನಗು,ಅಪ್ಯಾಯಮಾನವಾದಆತ್ಮೀಯತೆ, ಎಲ್ಲವನ್ನೂ ಮಾಡಿಯೇ ಬಿಡುತ್ತೇನೆಂಬ ಹಂಬಲಗಳನ್ನು ಪೋಷಿಸಬೇಕಾದವರುತಂದೆ ತಾಯಿಗಳು ಮಾತ್ರ. 

ಮನೆಯು  ಮಕ್ಕಳಿಗೆ  ಆಥರ್ಿಕ  ಭದ್ರತೆಯನ್ನುಒದಗಿಸುತ್ತದೆ. ಅನ್ನ, ನೀರು, ಬಟ್ಟೆ,ಆಹಾರ, ವಸತಿ ಮುಂತಾದ ಮೂಲಭೂತ  ಅವಶ್ಯಕತೆಗಳನ್ನು  ಒದಗಿಸುತ್ತದೆ. ಹಾಗೆಯೇ  ಮಕ್ಕಳಿಗೆ ಮನೆಯಲ್ಲಿತಂದೆತಾಯಿಯರುವೃತ್ತಿಪರ ಕೌಶಲ್ಯಗಳನ್ನು,ಕೈಕಸುಬುಗಳನ್ನು  ಕಲಿಸುವರು. ಇದರಿಂದ  ಮಕ್ಕಳು  ಮನೆಯ ಮೂಲ ಉದ್ಯೋಗಗಳನ್ನು  ಕೈಗೊಂಡು  ಹಣ  ಸಂಪಾದನೆಯ  ಸಾಮಥ್ರ್ಯಗಳನ್ನು  ಗಳಿಸುವರು.

ಮಕ್ಕಳು ಮನೆಯಿಂದಉತ್ತಮ  ಸಾಮಾಜಿಕ  ಸಂಬಂಧಗಳನ್ನು  ಹಾಗೂ ಸಾಮಾಜಿಕ  ಸದ್ಗುಣಗಳನ್ನು  ಕಲಿತುಕೊಳ್ಳುವರು. ಅಲ್ಲದೆಉತ್ತಮ  ಹವ್ಯಾಸಗಳು, ನಡವಳಿಕೆಗಳು, ಮನೋವೃತ್ತಿಗಳನ್ನು  ಮನೆಯಲ್ಲಿಯೇಕಲಿಯುತ್ತಾರೆ.ಜೊತೆಗೆಉತ್ತಮರೀತಿ  ನೀತಿ  ಸಂಪ್ರದಾಯ, ಆಚಾರ ವಿಚಾರಗಳು, ಸಂಸ್ಕೃತಿಯನ್ನುಕಲಿಯುತ್ತಾರೆ.ಮಕ್ಕಳು  ಸಮಾಜಕ್ಕೆಉಪಕೃತರಾಗಿ  ಬೆಳೆೆಯಲು  ಮತ್ತುತಮ್ಮದೇಆದ  ಕೊಡುಗೆಗಳನ್ನು  ಕೊಡಲು ಮನೆಯು ಕಲಿಸುತ್ತದೆ.

ಮಾತನಾಡುವುದು, ಉತ್ತಮಆಹಾರ ಸೇವನೆ, ಶುಭ್ರ  ಬಟ್ಟೆಧರಿಸಲು, ಶಿಸ್ತಿನ ಬದುಕನ್ನು ರೂಪಿಸಿಕೊಳ್ಳಲುಮಕ್ಕಳಿಗೆಮನೆಯೇ  ಕಲಿಸಿಕೊಡುತ್ತದೆ.ಮಕ್ಕಳು ನಾಗರಿಕತೆಯ ಪ್ರಥಮ  ಪಾಠಗಳನ್ನು  ಮನೆಯಿಂದಲೇ  ಕಲಿತುಕೊಳ್ಳುತ್ತವೆ. ಮಕ್ಕಳಿಗೆ  ಶಿಸ್ತು  ಮತ್ತು  ಸ್ವಯಂನಿಯಂತ್ರಣದ  ಶಿಕ್ಷಣವನ್ನು  ಮನೆಯು  ಕಲಿಸುತ್ತದೆ. ಮಕ್ಕಳು  ಮನೆಯಿಂದಲೇ  ಹಕ್ಕು  ಮತ್ತು  ಕರ್ತವ್ಯಗಳ  ಮಹತ್ವವನ್ನು  ತಿಳಿದುಕೊಳ್ಳಲು ಪ್ರಾರಂಭಿಸುತ್ತಾರೆ.

ತಂದೆ-ತಾಯಿಗಳಿಗೆ, ಗುರು- ಹಿರಿಯರಿಗೆಗೌರವಕೊಡುವುದನ್ನುಮನೆಯು ಮಕ್ಕಳಿಗೆ  ಕಲಿಸುತ್ತದೆ.ಕುಟುಂಬಗಳಲ್ಲಿ  ಆಚರಿಸುವ  ಹಬ್ಬ ಹರಿದಿನಗಳು, ಧಾಮರ್ಿಕ  ಆಚರಣೆಗಳ ಮಹತ್ವವನ್ನು ಮಕ್ಕಳು  ಅರಿತುಕೊಳ್ಳುತ್ತಾರೆ. ಅವುಗಳನ್ನು  ಶ್ರದ್ಧೆ, ನಂಬಿಕೆ  ಹಾಗೂ  ಭಕ್ತಿಯಿಂದಅನುಕರಣೆ  ಮಾಡುತ್ತಾಮಾಡುತ್ತಾ ಮುಂದುವರಿಸಿಕೊಂಡು ಹೋಗುತ್ತಾರೆ.

ವೈಯಕ್ತಿಕ  ಹಾಗೂ  ಸುತ್ತಮುತ್ತಲಿನ  ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದನ್ನು  ಮಕ್ಕಳುತಂದೆತಾಯಿಯರನ್ನು ನೋಡಿಕಲಿಯುತ್ತಾರೆ.

ಅಜ್ಜ-ಅಜ್ಜಿಯರು  ಹಾಗೂ  ಹಿರಿಯರು  ಹೇಳುವ  ಹಾಡು, ಕಥೆಗಳಿಂದ ಮಕ್ಕಳು  ಆಕಷರ್ಿತರಾಗುತ್ತಾರೆ  ಹಾಗೂ  ಅವುಗಳ  ಮೂಲಕ  ನೈತಿಕ  ಮೌಲ್ಯಗಳನ್ನು  ರೂಪಿಸಿಕೊಳ್ಳುತ್ತಾರೆ.

ಮನುಷ್ಯನಿಗೆಅತೀಅವಶ್ಯಕವಾಗಿ  ಬೇಕಾದಈಜುವುದು, ಸೈಕಲ್ಸವಾರಿಮಾಡುವುದು, ಬೈಕ್ಸವಾರಿ, ಸಮಯ ತಿಳಿದುಕೊಳ್ಳುವುದು, ಹಣಕಾಸಿನ  ವ್ಯವಹಾರಗಳನ್ನು ಮನೆಯ ಸದಸ್ಯರುಮಕ್ಕಳಿಗೆ ಕಲಿಸುತ್ತಾರೆ.

ಮನೆಯು  ಮಕ್ಕಳಿಗೆ  ಅನೌಪಚಾರಿಕ  ಶಿಕ್ಷಣ  ನೀಡುವಒಂದುಪ್ರಮುಖ   ಸಾಮಾಜಿಕ  ಸಂಸ್ಥೆಯಾಗಿದೆ.  ಅದು  ಮಕ್ಕಳಿಗೆ  ಶಿಕ್ಷಣ  ಒದಗಿಸುವ  ಮಹತ್ವಪೂರ್ಣವಾದ  ಮಾಧ್ಯಮವಾಗಿದೆ. ಮಕ್ಕಳು  ತಾಯಿಯ  ಮಮತೆಯ  ಮುದ್ದುಮಾತುಗಳಿಂದ  ಹಾಗೂ  ತಂದೆಯು  ನೀಡುವ  ಕಾಳಜಿಯಿಂದ  ಮುಂದಿನ  ಬದುಕಿಗೆ  ಬೇಕಾಗುವ  ಸದ್ಗುಣಗಳನ್ನು  ಕಲಿತುಕೊಳ್ಳುತ್ತಾರೆ ಹಾಗೂ  ಕೌಶಲ್ಯಗಳನ್ನು  ಕರಗತಮಾಡಿಕೊಳ್ಳುತ್ತದೆ. ಮನೆಯುಧಾಮರ್ಿಕ  ಹಾಗೂ  ಆಧ್ಯಾತ್ಮಿಕ  ಮೌಲ್ಯಗಳನ್ನು  ಬೆಳೆಸುವ  ಮೂಲ ನೆಲೆಯಾಗಿದೆ. ತಂದೆತಾಯಿಯರು ಮನೆಯಲ್ಲಿ ನಿಮರ್ಿಸುವಆತ್ಮೀಯ ವಾತಾವರಣವೇ ಮಕ್ಕಳ ವಿಕಾಸವನ್ನು ನಿರ್ಧರಿಸುತ್ತವೆ.  ಮಕ್ಕಳನ್ನು ಬೆಳೆಸಲು ಯಾವುದೇಗಣಿತ ಮತ್ತು ವಿಜ್ಙಾನದ ಸೂತ್ರಗಳು ಸಹಾಯಮಾಡಲಾರವು. ಅಮ್ಮ ನೀಡುವಕೈತುತ್ತು, ಅಪ್ಪನ ಅಮೃತನುಡಿಗಳು, ಅಜ್ಜಅಜ್ಜಿಯರ ವಿಶ್ವಾಸಪೂರಿತ ಮಾರ್ಗದರ್ಶನಗಳು ತುಂಬಾ ಪರಿಣಾಮಕಾರಿಯಾಗಿವೆ. 

ಯಾವುದೇಕ್ಷೇತ್ರದಲ್ಲಿ  ಮಕ್ಕಳುಸಾಧನೆ  ಮಾಡಬೇಕುಎಂದರೆ  ಪಾಲಕರು  ಶ್ರಮವಹಿಸುವುದುಅವಶ್ಯಕ. ಮಕ್ಕಳ ಓದು, ಬರಹ, ಪರೀಕ್ಷಾತಯಾರಿ, ಹವ್ಯಾಸ, ಪ್ರವಾಸ, ವಿಹಾರ, ಮನೋರಂಜನೆ ...  ಹೀಗೆ  ಎಲ್ಲದರ  ಬಗ್ಗೆ  ಗಮನ  ಹರಿಸುತ್ತ  ಮಕ್ಕಳ  ಜೀವನವನ್ನು  ಸುಗಮ  ಮಾರ್ಗದೆಡೆಗೆ  ಸಾಗಿಸಲು  ಪ್ರಯತ್ನಿಸಬೇಕು. ಉತ್ತಮ  ಮೌಲ್ಯಗಳನ್ನು  ಗಳಿಸಲು, ಪರೀಕ್ಷೆಯಲ್ಲಿಉತ್ತಮ  ಅಂಕಗಳನ್ನು  ಗಳಿಸಲು ತಂದೆ-ತಾಯಿಗಳು  ಮಕ್ಕಳನ್ನುಪ್ರೇರೇಪಿಸಬೇಕು. ಅನಾವಶ್ಯಕಒತ್ತಡ, ಬಾಹ್ಯತೊಂದರೆಕೊಡುವುದನ್ನು ನಲ್ಲಿಸಬೇಕು. ಮಕ್ಕಳ  ಮನಸ್ಸು  ಹೂವಿನ ಹಾಗೆ ಅವು  ಬಾಡಿಹೋಗದಂತೆ,  ಮುದುಡಿಹೋಗದಂತೆ  ನೀರೆರೆದು  ಪೋಷಿಸಬೇಕು.  ಮನೆಯಲ್ಲಿ ಶಾಂತ ಪರಿಸರವನ್ನು  ಮಕ್ಕಳಿಗೆ  ನಿಮರ್ಿಸಬೇಕು.ಅದು ಮಕ್ಕಳ ವ್ಯಕ್ತಿತ್ವವನ್ನು ನಿಮರ್ಿಸುತ್ತದೆ.ತಂದೆ-ತಾಯಿಯರ  ಪ್ರೀತಿಯ ಸಾಂಗತ್ಯವು  ಮಕ್ಕಳ  ಮನೋಬಲವನ್ನು  ಹೆಚ್ಚಿಸುತ್ತದೆ.

-*  ಮಂಜುನಾಥ ಮರಿತಮ್ಮನವರ 

 ಸವಣೂರ. ಜಿ. ಹಾವೇರಿ.ಮೊ.9663338287


ಸುದ್ದಿ ಓದಿ