ಮೀಸಲಾತಿ ಹೇಳಿಕೆ: ಶಾಸಕ ಜಗದೀಶ ಗುಡಗುಂಟಿ ವಿರುದ್ಧ ಪ್ರತಿಭಟನೆ
ಜಮಖಂಡಿ 26: ಮೀಸಲಾತಿಯನ್ನು ತೆಗೆದು ಹಾಕಬೇಕೆಂದು ವಿವಾದಾತ್ಮಕ ಹೇಳಿಕೆಯನ್ನು ನೀಡಿದ ಶಾಸಕ ಜಗದೀಶ ಗುಡಗುಂಟಿ ಅವರ ವಿರುದ್ಧ ವಿವಿಧ ದಲಿತಪರ ಸಂಘನೆಯ ನೂರಾರು ಕಾರ್ಯಕರ್ತರು ಸೇರಿ ಪ್ರತಿಭಟನೆ ನಡೆಸಿದರು.
ನಗರದ ಎ.ಜಿ.ದೇಸಾಯಿ ಸರ್ಕಲ್ ಬಳಿ ಕೆಲವು ಸಮಯದವರಗೆ ರಸ್ತೆ ತಡೆ ನಡೆಸಿ. ಶಾಸಕ ಜಗದೀಶ ಗುಡಗುಂಟಿ ವಿರುದ್ಧ ಘೋಷಣೆ ಕೂಗಿದ ನಂತರ. ಉಪವಿಭಾಗಾಧಿಕಾರಿ ಸಂತೋಷ ಕಾಮಗೊಂಡ. ಡಿಎಸ್ ಪಿ ಶಾಂತವೀರ ಈ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು. ತಾಲೂಕಿನ ಸಮೀಪ ಖಾಸಗಿ ಕಾರ್ಯಕ್ರಮದಲ್ಲಿ ಕುರುಬ ಸಮಾಜದ ಭಾಂದವರಲ್ಲಿ ಅವಿನಾಭಾವ ಸಂಬಂಧ ಇದೆ. ಭಕ್ತ ಕನಕದಾಸರು ಕುಲಕುಲವೆಂದು ಹೊಡೆದಾಡಬೇಡಿ. ಈ ಕುಲದ ನೆಲೆ ಬಲಿರಾ ಎಂದು ವಚನ ಹೇಳುವ ಮೂಲಕ ದೇಶದಲ್ಲಿ ಮೀಸಲಾತಿಯನ್ನು ತೆಗೆದುಹಾಕಿದರೆ ಮಾತ್ತ ಎಲ್ಲರೂ ಟಾಫ್ ಒನ್ ದಲ್ಲಿ ಬರಲು ಸಾಧ್ಯ ಎಂದು ವಿವಾದಾತ್ಮಕ ಹೇಳಿಕೆಯ ವಿಡಿಯೋ ಸಾಮಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದೆ.ವಿವಿದ ದಲಿತಪರ ಸಂಘಟನೆಗಳು ಪ್ರತಿಭಟನೆಯ ಮೂಲಕ ಶಾಸಕ ಜಗದೀಶ ಗುಡಗುಂಟಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹ ಗೊಳಿಸಬೇಕು. ಅವರ ಮೇಲೆ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು.
ಅಡ್ಡಗಟ್ಟಿದ ಪೋಲಿಸ್ ವಾಹನ: ಪ್ರತಿಭಟನಾಕಾರರಿಗೆ ಹಾಗೂ ಪೋಲಿಸರ ನಡುವೆ ಕೆಲಕಾಲ ಮಾತಿನ ಘರ್ಷಣೆ ನಡೆಯಿತು. ಮಧ್ಯದಲ್ಲಿ ತಹಶೀಲ್ದಾರ ಸದಾಶಿವ ಮಕ್ಕೋಜಿ ಭಾಗವಹಿಸಿ. ಪ್ರತಿಭಟನೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ. ಈ ಪ್ರಕರಣದ ಬಗ್ಗೆ ವಿಚಾರಣೆ ಮಾಡಿ. ಪ್ರಕರಣ ದಾಖಲಿಸಲಾಗುತ್ತದೆ. ಶಾಸಕ ಒಂದೇ ಸಮುದಾಯ ಬಗ್ಗೆ ಹೇಳಿಕೆ ನೀಡಿಲ್ಲ ಎಂದು ಹೇಳುತ್ತಿದಂತೆ. ಅಲ್ಲಿನ ಪ್ರತಿಭಟನಾಕಾರರು ನೀವು ರಾಜಕಾರಣಿಯ ಕೈಗೊಂಬೆನಾ ಅಥವಾ ಅಧಿಕಾರಿನಾ ಎಂದು ಮಾತಿನ ಚಕ್ಕಮಕಿ ನಡೆಯುತ್ತಿದಂತೆ. ಕೆಲವರ ತಹಶೀಲ್ದಾರ ಅವರ ವಿರುದ್ಧ ಘೋಷಣೆ ಕೂಗುತ್ತಿದ್ದರು.ಪ್ರತಿಭಟನಾಕಾರರು ಎ.ಜಿ.ದೇಸಾಯಿ ಸರ್ಕಲದಿಂದ ಮತ್ತೆ ಶಾಸಕ ಜಗದೀಶ ಗುಡಗುಂಟಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ನಡುರಸ್ತೆಯಲ್ಲಿ ಪೋಲಿಸರ ವಾಹನ ಅಡ್ಡಗಟ್ಟಿ ಪ್ರತಿಭಟನಾಕಾರರನ್ನು ತಡೆಯಲು ಸಿಪಿಐ ಮಲ್ಲಪ್ಪ ಮಡ್ಡಿ. ಶಹರ ಠಾಣಿಯ ಪಿಎಸ್ ಐ ನಾಗರಾಜ ಕಿಲ್ಲಾರೆ ಹಾಗೂ ಪೋಲಿಸರು ಹರಸಾಹಸ ಪಟ್ಟರು. ಪ್ರತಿಭಟನೆಯಲ್ಲಿ ನೂರಾರು ದಲಿತಪರ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.