ಜಮಖಂಡಿ

ಮೀಸಲಾತಿ ವಿರುದ್ಧ ಹೇಳಿಕೆ: ಶಾಸಕ ಗುಡಗುಂಟಿ ಮನೆಗೆ ಮುತ್ತಿಗೆ ಯತ್ನ

ಮೀಸಲಾತಿ ವಿರುದ್ಧ ಹೇಳಿಕೆ: ಶಾಸಕ ಗುಡಗುಂಟಿ ಮನೆಗೆ ಮುತ್ತಿಗೆ ಯತ್ನ

ಜಮಖಂಡಿ 25: ಮೀಸಲಾತಿಯ ವಿರುದ್ಧ ಹೇಳಿಕೆಯನ್ನು ನೀಡಿದ ಶಾಸಕ ಜಗದೀಶ ಗುಡಗುಂಟಿ ವಿರುದ್ದ ತಡರಾತ್ರಿಯಲ್ಲಿ ವಿವಿಧ ದಲಿತಪರ ಸಂಘನೆಗಳು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ಶಾಸಕರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಘಟನೆ ನಡೆದಿದೆ.

ತಾಲೂಕಿನ ಸಮೀಪ ಖಾಸಗಿ ಕಾರ್ಯಕ್ರಮದ ಭಾಷಣದಲ್ಲಿ ಶಾಸಕ ಜಗದೀಶ ಗುಡಗುಂಟಿ ಮಾತನಾಡಿದ ಅವರು. ಭಕ್ತ ಕನಕದಾಸರು ಕುಲಕುಲವೆಂದು ಹೊಡೆದಾಡಬೇಡಿ ಎಂದು ವಚನ ಹೇಳುತ್ತಿದಂತೆ. ದೇಶದಲ್ಲಿ ಜಾತಿಯತೆ ತಾಂಡವಾಡುತ್ತಿದೆ. ಜಾತಿಯತೆಯನ್ನು ಹೊಗಲಾಡಿಸಬೇಕಾದರೆ. ಮೊದಲು ಮೀಲಾತಿಯನ್ನು ತೆಗೆದುಹಾಕಬೇಕು. ಅವಾಗ ಮಾತ್ರ ದೇಶ ಸುಧಾರಣೆ ಆಗುತ್ತದೆ ಎಂದು ಮೀಸಲಾತಿ ವಿರುದ್ದು ಹೇಳಿಕೆಯನ್ನು ನೀಡಿದ್ದಾರೆ. ಮಿಸಲಾತಿಯನ್ನು ತೆಗೆದುಹಾಕಬೇಕೆಂದು ಹೇಳಿಕೆಯನ್ನು ಖಂಡಿಸಿ. ದಲಿತಪರ ವಿವಿಧ ಸಂಘಟನೆಗಳು ತಡರಾತ್ರಿಯಲ್ಲಿ ಶಾಸಕರ ಮನೆಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿದ್ದಂತೆ ಪೋಲಿಸರು ಪ್ರತಿಭಟನಾಕರರನ್ನು ತಡೆದಿರುವ ಘಟನೆ ನಡೆದಿದೆ.

ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದು. ಮರುದಿನ ಇನ್ನೂ ಹಲವು ದಲಿತಪರ ಸಂಘಟನೆಗಳ ಮುಖಂಡರ ಜೊತೆಯಲ್ಲಿ ಚರ್ಚಿಸಿ. ಮುಂದಿನ ತೀರ್ಮಾನ ತೆಗೆದುಕೊಂಡು. ಉಗ್ರವಾದ ಹೋರಾಟದ ಬಗ್ಗೆ ರೋಪರೇಷಗಳನ್ನು ಹಾಕುವ ಜೊತೆಗೆ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಬೇಕೆಂದು ಒತ್ತಾಯಿಸಿ ಪ್ರತಿಭಟನೆಯನ್ನು ಮಾಡಲಾಗುವುದು ಎಂದು ಮಾಧ್ಯಮದವರ ಮುಂದೆ ಹೇಳಿದರು. 

ಪ್ರತಿಭಟನೆಯಲ್ಲಿ ಕುಮಾರ ಆಲಗೂರ, ಪ್ರೇಮ ಬಳೋಲಗಿಡದ, ಸುರಜ ಕುಡ್ರಾಣಿ, ಮೀರಾ ಒಂಟಮೋರೆ, ಸುನೀಲ ಬಳೋಗಿಡದ ಸೇರಿದಂತೆ ವಿವಿಧ ದಲಿತಪರ ಸಂಘಟನೆಯ ಮುಖಂಡರು ಇದ್ದರು.


ಸುದ್ದಿ ಓದಿ