ಸಿಂಧಗಿ

ರಾಜ್ಯ ಮಟ್ಟದ ಪ್ರಶಸ್ತಿ ಪುರಷ್ಕೃತರಿಗೆ ಸನ್ಮಾನ

ರಾಜ್ಯ ಮಟ್ಟದ ಪ್ರಶಸ್ತಿ ಪುರಷ್ಕೃತರಿಗೆ ಸನ್ಮಾನ
ಪಟ್ಟಣದ ಪಾಂಚಜನ್ಯ ಪೈನಾನ್ಸನಲ್ಲಿ ಗೆಳೆಯರ ಬಳಗ ರಾಜ್ಯ ಮಟ್ಟದ ಪ್ರಶಸ್ತಿ ಪುರಷ್ಕೃತರಿಗೆ ಗೌರವಿಸಿದರು.

ಸಿಂದಗಿ02: ಸಾಧನೆಗಳು ಸಾಧಕರ ಸ್ವತ್ತು ವಿನ:ಹ ಸೋಮಾರಿಗಳ ಸ್ವತ್ತಲ್ಲ. ಅಂತೆಯೇ ಛಾಯಾಚಿತ್ರಕಲೆಯಲ್ಲಿ ಸತತ 30 ವರ್ಷಗಳೀಂದ ಸೇವೆ ಸಲ್ಲಿದ ಪ್ರತಿಫಲವಾಗಿ ತಾಲೂಕಿನ ನಾಲ್ಕು ಜನರಿಗೆ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿರುವುದು ಸ್ವಾಗತಾರ್ಹ ಎಂದು ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ ಹೆಳಿದರು. 

ಪಟ್ಟಣದ ಪಾಂಚಜನ್ಯ ಪೈನಾನ್ಸನಲ್ಲಿ ಗೆಳೆಯರ ಬಳಗವತಿಯಿಂದ ರಾಜ್ಯ ಮಟ್ಟದ ಪ್ರಶಸ್ತಿ ಪುರಷ್ಕೃತರಾದ ಪಂಡಿತ ಯಂಪೂರೆ ಹಾಗೂ ಅಂಬರೀಶ ಅಲ್ದಿ ಅವರನ್ನು  ಗೌರವಿಸಿ ಮಾತನಾಡಿದರು. 

ಸನ್ಮಾನ ಸ್ವೀಕರಿಸಿದ ಪಂಡಿತ ಯಂಪೂರೆ ಮಾತನಾಡಿ, ಸತತ 30 ವರ್ಷಗಳ ಅನುಭವದ ಮೆರೆಗೆ ರಾಜ್ಯ ಛಾಯಾಚಿತ್ರ ಗ್ರಾಹಕ ಸಂಘ ಗುರುತಿಸಿ ಪ್ರಶಸ್ತಿ ನೀಡಿರುವುದು ಸಿಂದಗಿಯ ಗರಿಮೆ ಹೆಚ್ಚಿಸಿದಂತಾಗಿದೆ ಅವರಿಗೆ ಅಭಿನಂದನೆ ಸಲ್ಲಿಸಿದರು. 

ಪತ್ರಕರ್ತರ ಸಂಘದ ಅದ್ಯಕ್ಷ ಅನಂದ ಶಾಬಾದಿ, ಪಂಚಮಸಾಲಿ ಸಮಾಜದ ಅದ್ಯಕ್ಷ ಎಂ.ಎಂ.ಹಂಗರಗಿ, ನೌಕರರ ಸಂಘದ ಅದ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿದರು. 

ಈ ಸಂದರ್ಭದಲ್ಲಿ ಸೋಮನಗೌಡ ಬಿರಾದಾರ, ರಮೇಶ ಬಿರಾದಾರ, ಶಿವಲಿಂಗ ಬತಗೌಡರ, ರಮೇಶ ಯಾಳಗಿ, ಮಹಾಂತೇಶ ಐಗಳಿ, ಬಸಯ್ಯ ಹಿರೇಮಠ ಬಂದಾಳ, ವಿಜಯಕುಮಾರ ಪತ್ತಾರ ಸೆರಿದಂತೆ ಹಲವರಿದ್ದರು.  

ಸುದ್ದಿ ಓದಿ